HEALTH TIPS

ವಿವಾದ ಸೃಷ್ಟಿಸಿದ ಕೋವಿಡ್ ಬಾಧಿತ ರಾಜಕೀಯ ನೇತಾರ ರೋಗಮುಕ್ತಿಗೊಂಡು ಬಿಡುಗಡೆ

 
      ಪೆರ್ಲ: ಜಿಲ್ಲೆಯಲ್ಲಿ ತೀವ್ರ ಆತಂಕಕ್ಕೆ ಕಾರಣನಾಗಿದ್ದ ಪೈವಳಿಕೆ ಚಿಪ್ಪಾರಿನ ರಾಜಕೀಯ ನೇತಾರ ಉಕ್ಕಿನಡ್ಕದ ಕಾಸರಗೋಡು ವೈದ್ಯಕೀಯ ಕಾಲೇಜಿನ ತೀವ್ರ ನಿಗಾ ಘಟಕದಲ್ಲಿ ಕೋವಿಡ್ ಚಿಕಿತ್ಸೆಯಲ್ಲಿದವನು ಸೋಮವಾರ ರೋಗಮುಕ್ತನಾಗಿ ತೆರಳಿದನು. ಜೊತೆಗೆ ಸಂಪರ್ಕದಿಂದ ರೋಗ ತಗಲಿದ್ದ ಈತನ ಪತ್ನಿ ಹಾಗೂ ಇಬ್ಬರು ಮಕ್ಕಳೂ ರೋಗಮುಕ್ತಿಹೊಂದಿ ತೆರಳಿದರು.
      ಪೈವಳಿಕೆ ಗ್ರಾ.ಪಂ. ಮಾಜಿ ಸದಸ್ಯ, ಸಿಪಿಎಂ ನೇತಾರ ಅಬ್ದುಲ್ ರಸಾಕ್ ಚಿಪ್ಪಾರ್ ಮೇ.14 ರಂದು ಕೋವಿಡ್ ದೃಢಗೊಂಡಿತ್ತು. ಜೊತೆಗೆ ಈತನ ಸಂಪರ್ಕದಿಂದ ಪೈವಳಿಕೆ ಗ್ರಾ.ಪಂ.ಸದಸ್ಯೆಯಾದ ಈತನ ಪತ್ನಿಗೂ ಇಬ್ಬರು ಮಕ್ಕಳಿಗೂ ರೋಗ ತಗಲಿತ್ತು. ಮೇ.4 ರಂದು ಮಹಾರಾಷ್ಟ್ರದಿಂದ ಆಗಮಿಸಿದ ಇವರ ಸಂಬಂಧಿಯೋರ್ವನನ್ನು ತಲಪ್ಪಾಡಿ ಅಂತರ್ ರಾಜ್ಯ ಗಡಿಯಿಂದ ಅಬ್ದುಲ್ ರಸಾಕ್ ಚಿಪ್ಪಾರ್ ಹಾಗೂ ಪತ್ನಿ, ಮಕ್ಕಳು ಕರೆತಂದಿದ್ದು, ಮಹಾರಾಷ್ಟ್ರದಿಂದ ಆಗಮಿಸಿದ ಸಂಬಂಧಿಯಿಂದ ಇವರಿಗೆ ಕೋವಿಡ್ ಹರಡಿತ್ತು.
     ಅಬ್ದುಲ್ ರಸಾಕ್ ಸಂಬಂಧಿಯ ಸಂಪರ್ಕದ ಬಳಿಕ ವಿವಿಧ ಸಭೆ ಸಮಾರಂಭ, ಕಾಞಂಗಾಡಿನ ಜಿಲ್ಲಾಸ್ಪತ್ರೆಗಳಿಗೆ ತೆರಳಿ ಆತಂಕ ಮೂಡಿಸಿದ್ದರು. ಇದರ ಫಲವಾಗಿ ಅವರ ಸಂಪರ್ಕಕ್ಕೆ ಬಂದಿದ್ದ ಸುಮಾರು 24 ಕ್ಕಿಂತಲೂ ಮಿಕ್ಕಿದ ಜನರು ಕ್ಯಾರಂಟೈನ್ ಗೊಳಗಾಗಿದ್ದರು.
     ಅಬ್ದುಲ್ ರಸಾಕ್ ಪ್ರತಿನಿಧಿಸುವ ಪಕ್ಷದ ನಾಯಕತ್ವ ಸೇರಿದಂತೆ ಜಿಲ್ಲಾಡಳಿತವು ರಸಾಕ್‍ನ ಅನಿಯಂತ್ರಿತ  ಸಂಚಾರ, ಸಂಚಾರ ಮಾರ್ಗಗಳನ್ನು ಹೇಳುವಲ್ಲಿ ತೋರಿಸಿದ ಅನಾಸ್ತೆ ಮತ್ತು ಸುಳ್ಳು ಹೇಳಿಕೆಗಳ ವಿರುದ್ದ ಅತೃಪ್ತಿ ವ್ಯಕ್ತಪಡಿಸಿತ್ತು. ಜೊತೆಗೆ ಪೋಲೀಸರು ದೂರು ದಾಖಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries