HEALTH TIPS

ಲಾಕ್ ಡೌನ್-ತ್ರಿಶಂಕು ಸ್ಥಿತಿಯಲ್ಲಿರುವ ಕಾಸರಗೋಡಿನ ನಾಗರಿಕರು-ರಕ್ಷಣೆಗಾಗಿ ಮನವಿ

 
         ಕುಂಬಳೆ: ಕೇರಳಕ್ಕೆ ತಾಗಿಕೊಂಡಿರುವ ಕರ್ನಾಟಕದ ಎಲ್ಲಾ ಗಡಿ ಕೇಂದ್ರಗಳಲ್ಲಿ ಯೋಗ್ಯ ತಪಾಸಣೆಯೊಂದಿಗೆ ಕರ್ನಾಟಕಕ್ಕೆ ಮುಕ್ತ ಪ್ರವೇಶ ನೀಡುವ ವ್ಯವಸ್ಥೆ ಮಾಡಬೇಕಾಗಿ ಸಾಮಾಜಿಕ ಮುಂದಾಳುಗಳಾದ ಗೋಪಾಲ ಶೆಟ್ಟಿ ಅರಿಬೈಲು ಮತ್ತು ಭಾಸ್ಕರ ಕಾಸರಗೋಡು ಅವರು ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ಕರ್ನಾಟಕ ಮುಖ್ಯಮಂತ್ರಿ ಅವರನ್ನು ಒತ್ತಾಯಿಸಿದ್ದಾರೆ.
     1956 ರಲ್ಲಿ ಭಾಷಾವಾರು ಪ್ರಾಂತ್ಯ ರಚನೆಗೊಂಡ ನಂತರ ಅವಿಭಜಿತ ಕಾಸರಗೋಡು ಜಿಲ್ಲೆ(ಪ್ರಸ್ತುತ ಮಂಜೇಶ್ವರ ತಾಲೂಕು ಒಳಗೊಂಡ) ಕೇರಳ ರಾಜ್ಯದ ಭಾಗವಾಗಿ ಹೋದರೂ ಸಹ ಭೌಗೋಳಿಕವಾಗಿ ಕೇರಳದಲ್ಲಿದ್ದರೂ ಸಾಂಸ್ಕøತಿಕ ಹಾಗು ವ್ಯಾವಹಾರಿಕವಾಗಿ ಸಂಪೂರ್ಣ ಕರ್ನಾಟಕವನ್ನೇ ಆಶ್ರಯಿಸಿದೆ. ವಿದ್ಯಾಭ್ಯಾಸ, ವ್ಯಾಪಾರ, ವೈದ್ಯಕೀಯ, ಉದ್ಯೋಗ ಮೊದಲಾದ ಕ್ಷೇತ್ರಗಳಲ್ಲಿ ಮಂಗಳೂರನ್ನೇ ಅವಲಂಬಿತವಾಗಿದೆ. ಕಾಸರಗೋಡಿನ ಸಾವಿರಾರು ಬಡ ಕಾರ್ಮಿಕರು, ಮಧ್ಯಮ ವರ್ಗದವರು, ವಿದ್ಯಾರ್ಥಿಗಳು ಪ್ರತಿದಿನ ಮಂಗಳೂರಿಗೆ ಹೋಗಿ ಬರುವುದು ಸಾಮಾನ್ಯವಾಗಿದೆ.
     2020 ಮಾರ್ಚ್ ತಿಂಗಳಿಂದ ಬಾಧಿಸಿದ ಮಾರಕ ರೋಗ ಕೋವಿಡ್-19 ನಿಂದ ದೇಶದಾದ್ಯಂತ ಲಾಕ್‍ಡೌನ್ ಆದ ಹಿನ್ನೆಲೆಯಲ್ಲಿ ಕಾಸರಗೋಡಿನ ಜನತೆಗೆ ಕರ್ನಾಟಕಕ್ಕೆ ಪ್ರವೇಶಿಸುವುದಕ್ಕೆ ನಿರ್ಬಂಧಿಸಲಾಯಿತು. ಇದರಿಂದಾಗಿ ಇಲ್ಲಿನ ಸಾವಿರಾರು ಜನ ಕಾರ್ಮಿಕರು ಕರ್ನಾಟಕಕ್ಕೆ ಹೋಗಲು ಸಾಧ್ಯವಾಗದ ಕಾರಣ ಕಳೆದ 60 ದಿನಗಳಿಂದ ನರಕ ಜೀವನವನ್ನು ಅನುಭವಿಸುವಂತಾಗಿದೆ. ಪ್ರತಿದಿನ ದುಡಿದು ಲಭಿಸುವ ಸಂಬಳದ ಹಣದಿಂದ ಕುಟುಂಬವನ್ನು ಸಾಕುವವರ ಸ್ಥಿತಿ ಶೋಚನೀಯವಾಗಿದೆ. ಪ್ರಸ್ತುತ ಮಂಗಳೂರಿನಲ್ಲಿ ಲಾಕ್‍ಡೌನ್ ಸಡಿಲಗೊಳಿಸಿರುವುದರಿಂದ ಅಲ್ಲಿನ ಸಂಸ್ಥೆಗಳು ತೆರೆದು ಕಾರ್ಯಾರಂಭಗೊಂಡಿವೆ. ಸಂಸ್ಥೆಯ ಮಾಲಕರು ಇಲ್ಲಿನ ನೌಕರರನ್ನು ಕೆಲಸಕ್ಕೆ ಹಾಜರಾಗಲು ಒತ್ತಾಯಿಸುವ ಮೂಲಕ ಹಾಜರಾಗದಿದ್ದರೆ ಕೆಲಸದಿಂದ ಕೈ ಬಿಡಲಾಗುವುದೆಂದು ಬೆದರಿಕೆ ಒಡ್ಡಲಾಗುತ್ತಿದೆ ಎಂಬ ಆರೋಪವಿದೆ.
      ಅದೇ ರೀತಿ ಕಾಸರಗೋಡಿನ ಬಹಳಷ್ಟು ಖಾಸಗಿ ಆಸ್ಪತ್ರೆಗಳಲ್ಲಿ ಮಂಗಳೂರಿನ ತಜ್ಞ ವೈದ್ಯರು ಭೇಟಿ ನೀಡುವ ಮೂಲಕ ಇಲ್ಲಿನ ಬಹಳಷ್ಟು ಬಡ ರೋಗಿಗಳಿಗೆ ಸುಲಭದಲ್ಲಿ ಇಲ್ಲಿಯೇ ಚಿಕಿತ್ಸೆ ಲಭಿಸುತ್ತಿದೆ. ಆದರೆ ಪ್ರಸ್ತುತ ಅವರನ್ನು ಕಾಸರಗೋಡಿಗೆ ಬರಲು ಬಿಡುತ್ತಿಲ್ಲ. ಜೂನ್ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ಕರ್ನಾಟಕ ಸರಕಾರ ತೀರ್ಮಾನಿಸಿದ್ದು, ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಭವಿಷ್ಯ ಹೆತ್ತವರ ಚಿಂತೆಗೀಡು ಮಾಡಿದೆ.
      ಇದಕ್ಕೆಲ್ಲ ಪರಿಹಾರವಾಗಿ ಕೇರಳಕ್ಕೆ ತಾಗಿಕೊಂಡಿರುವ ಕರ್ನಾಟಕದ ಎಲ್ಲಾ ಗಡಿ ಕೇಂದ್ರಗಳಲ್ಲಿ ಯೋಗ್ಯ ತಪಾಸಣೆಯೊಂದಿಗೆ ಕರ್ನಾಟಕಕ್ಕೆ ಮುಕ್ತ ಪ್ರವೇಶ ನೀಡುವ ವ್ಯವಸ್ಥೆ ಮಾಡಬೇಕಾಗಿ ವಿನಂತಿಸಲಾಗಿದೆ. ಈ ಮೂಲಕ ಇಲ್ಲಿನ ಬಡ ಜನರಿಗೆ ತಮ್ಮ ಬದುಕಿನ ವ್ಯವಸ್ಥೆ ಮಾಡಿ ಕುಟುಂಬವನ್ನು ರಕ್ಷಣೆ ಮಾಡಲು ಬೇಕಾದ ವ್ಯವಸ್ಥೆ ತುರ್ತಾಗಿ ಮಾಡಬೇಕಾಗಿ ವಿನಂತಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಸಂತ್ರಸ್ತರನ್ನು ಒಟ್ಟು ಸೇರಿಸಿ ನಾಗರಿಕರ ಸಹಕಾರದೊಂದಿಗೆ ಗಡಿ ದಾಟಲು ಸತ್ಯಾಗ್ರಹ ನಡೆಸಲು ಮುಂದಾಗಬೇಕಾದೀತೆಂದು ಸಂತ್ರಸ್ತರ ಪರವಾಗಿ ಮನವಿಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries