HEALTH TIPS

ಕೊರೊನಾ-ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡ ಸುದ್ದಿ ಸತ್ಯಕ್ಕೆ ದೂರವಾದುದು: ಜಿಲ್ಲಾಧಿಕಾರಿ


         ಕಾಸರಗೋಡು: ತಲಪ್ಪಾಡಿ ಗಡಿ ಚೆಕ್ಪೋಸ್ಟ್ ಸಜ್ಜೀಕರಣ ಸಂಬಂಧ ಕೆಲವು ಮಾಧ್ಯಮಗಳಲ್ಲಿ ಪ್ರಕಟಗೊಂಡಿರುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
          ಲಾಕ್ ಡೌನ್ ಕಟ್ಟುನಿಟ್ಟುಗಳಲ್ಲಿ ಕೇಂದ್ರ ಸರಕಾರ ಕೆಲವು ಸಡಿಲತೆ ತಂದಿರುವ ಹಿನ್ನೆಲೆಯಲ್ಲಿ ಮೇ 4ರಿಂದ ಇತರ ರಾಜ್ಯಗಳಲ್ಲಿ ಬಾಕಿಯಾಗಿರುವ ಕೇರಳೀಯರು ಮರಳಿ ಊರಿಗೆ ಬರುವ ವ್ಯವಸ್ಥೆ ಒದಗಿಸಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರದ ಆದೇಶ ಪ್ರಕಾರ ಮಂಜೇಶ್ವರ ಗಡಿ ಚೆಕ್ ಪೆÇೀಸ್ಟ್ ನಲ್ಲಿ ಅಗತ್ಯದ ಸಜ್ಜೀಕರಣ ನಡೆಸಲಾಗಿದೆ. ಸರಿಸುಮಾರು 50 ಸಾವಿರ ಮಂದಿ ಊಇರಗೆ ಮರಳುವ ನಿರೀಕ್ಷಯಿದ್ದು, ಅವರ ಸಹಾಯಕ್ಕೆ ಸುಮಾರು 50 ಹೆಲ್ಪ್ ಡೆಸ್ಕ್ ಸಿದ್ಧಪಡಿಸಿ, ಆರೋಗ್ಯ ತಪಾಸಣೆ, ವಾಹನ ತಪಾಸಣೆ, ರಾಷ್ಟರೀಉ ಹೆದ್ದಾರಿ ಬದಿಯ ಕುಳಿಗಳನ್ನು ತುಂಬುವ, ಹೆಚ್ಚುವರಿ ಕಂದಾಯ ಜಾಗದ ಗುಡ್ಡ ಕಡಿದು ಸಮಗೊಳಿಸುವ, ಹೆಲ್ಪ್ ಡೆಸ್ಕ್ ಗಳ ಚಟುವಟಿಕೆಗಳಿಗೆ ಪೂರಕವಾಗಿ ಚಪ್ಪರ, ವಿದ್ಯುತ್, ಇನ್ನಿತರ ತತ್ಸಂಬಂಧಿ ಸೌಲಭ್ಯ ಒದಗಿಸುವ ಸಹಿತ ವಿವಿಧ ಪ್ರಕ್ರಿಯೆಗಳನ್ನು ಕೋರ್ ಸಮಿತಿಯ ತೀರ್ಮಾನ ಪ್ರಕಾರ ಎಸ್.ಡಿ.ಆರ್.ಎಫ್. ನಿಂದ ಮೊಬಲಗಿಗಾಗಿ ವಿನಂತಿಸಲಾಗಿದೆ. ಆದರೆ ಈ ನಿಟ್ಟಿನಲ್ಲಿ ನಯಾ ಪೈಸೆ ಈ ರೂಪದಲ್ಲಿ ಲಭಿಸಿಲ್ಲ, ವೆಚ್ಚವನ್ನೂ ನಡೆಸಿಲ್ಲ ಎಂದು ಕೆಲವು ಮಾಧ್ಯಮಗಳು ತಪ್ಪು ಮಾಹಿತಿ ವರದಿ ಮಾಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
           ಕೋವಿಡ್ ಎಂಬ ಮಹಾಮಾರಿಯ ಪ್ರತಿರೋಧ ನಡೆಸುವ ನಿಟ್ಟಿನಲ್ಲಿ ಜಾತಿ-ಮತ-ರಾಜಕೀಯ ಭೇದವಿಲ್ಲದೆ ಜಿಲ್ಲೆಯ ಸಾರ್ವಜನಿಕರು, ಸಿಬ್ಬಂದಿ ಒಗ್ಗಟ್ಟಿನ ಯತ್ನ ನಡೆಸುತ್ತಿರುವ ಸಂದರ್ಭದಲ್ಲಿ ಸಿಬ್ಬಂದಿಯ ಉತ್ಸಹಕ್ಕೆ ಭಂಗ ತರುವ ರೀತಿಯ ತಪ್ಪು ಮಾಹಿತಿ ಪ್ರಕಟಿಸಕೂಡದು ಎಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.
        ಮೊದಲ ಹಂತದಲ್ಲಿ ಹೆಲ್ಪ್ ಡೆಸ್ಕ್ ನಲ್ಲಿ 60 ಕೌಂಟರ್ ಗಳು ಸಜ್ಜುಗೊಂಡಿದ್ದರೂ, ಚೆಕ್ ಪೆÇೀಸ್ಟ್ ನಲ್ಲಿ ಮೊದಲ ದಿನಗಳಲ್ಲಿ ನಿರೀಕ್ಷೆಗಿಂತ ಕಡಿಮೆ ಜನ ಆಗಮಿಸಿದ್ದರು. ನಂತರ ಕೌಂಟರ್ ಗಳನ್ನು ಕಡಿತಗೊಳಿಸಲಾಗಿತ್ತು. ಇದರ ಕಾರಣ ವೆಚ್ಚವೂ ಕಡಿಮೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
     ಮಂಜೇಶ್ವರ ಚೆಕ್ ಪೆÇೀಸ್ಟ್ ಮುಖಾಂತರ ನಿನ್ನೆ ಒಂದೇ ದಿನ 1597 ಮಂದಿ ಕೇರಳ ಪ್ರವೇಶ ಮಾಡಿದ್ದಾರೆ. ಈ ಚೆಕ್ ಪೆÇೀಸ್ಟ್ ಮೂಲಕ ಅರ್ಜಿ ಸಲ್ಲಿಸಿದ್ದ 48,892 ಮಂದಿಯಲ್ಲಿ 42,284 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಇವರಲ್ಲಿ 22, 523 ಮಂದಿ ಈಗಾಗಲೇ ಆಗಮಿಸಿದ್ದಾರೆ. ಇನ್ನೂ ಅನೇಕ ಮಂದಿ ಪಾಸ್ ಗಾಗಿ ಅರ್ಜಿ ಸಲ್ಲಿಸುವ, ಕೇರಳಕ್ಕೆ ಆಗಮಿಸುವಸಾಧ್ಯತೆಯಿದೆ. ಜೊತೆಗೆ ಈ ಸೌಲರ್ಭಯಗಳನ್ನು ಅನೇಕ ಕಾಲದ ವರೆಗೆ ಮುಂದುವರಿಸಬೇಕಾದ ಅಗತ್ಯವೂ ಬರಬಹುದಾಗಿದೆ. ಕಾಸರಗೋಡು ಜಿಲ್ಲೆಯವರಾದ 11,858 ಮಂದಿ ಅರ್ಜಿ ಸಲ್ಲಿಸಿದ್ದು, 10.933 ಮಂದಿಗೆ ಪಾಸ್ ಮಂಜೂರು ಮಾಡಲಾಗಿದೆ. ಇವರಲ್ಲಿ 5361 ಮಂದಿ ಊರಿಗೆ ಆಗಮಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries