HEALTH TIPS

ಆಸ್ಪತ್ರೆಗಳಲ್ಲಿ ರೋಗಿಗಳ ಭೇಟಿ ಕಡ್ಡಾಯವಾಗಿ ಪಾಸ್ ಮೂಲಕ ಮಾತ್ರ: ಜಿಲ್ಲಾಧಿಕಾರಿ


         ಕಾಸರಗೋಡು: ಜಿಲ್ಲೆಯ ಸರಕಾರಿ-ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿಲ್ಲದೇ ಭೇಟಿ ನೀಡುವುದನ್ನು ಕೈಬಿಡಬೇಕು. ದಾಖಲಾಗಿರುವ ರೋಗಿಗಳನ್ನು ಭೇಟಿ ಮಾಡಲು ಬಯಸುವವರು ಪಾಸ್ ಪಡೆದು ಬರಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
        ಎಲ್ಲ ರೋಗಿಗಳು ಅನಿವಾರ್ಯ ಸುರಕ್ಷಾ ಮಾನದಂಡಗಳನ್ನು ಪಾಲಿಸುವ ಮೂಲಕ ತಪಾಸಣೆಗೆ ಒಳಪಡುವ ವ್ಯವಸ್ಥೆ ಮಾಡಲಾಗುವುದು. ಸುರಕ್ಷಾ ಮಾನದಂಡಗಳನ್ನು ಪಾಲಿಸಿಕೊಂಡು ಎಲ್ಲ ಖಾಸಗಿ ಆಸ್ಪತ್ರೆಗಳೂ ತುರ್ತಾಗಿ ಪುನರಾರಂಭಗೊಳ್ಳಬೇಕು. ಜಿಲ್ಲೆಯ ಮೆಡಿಕಲ್ ಲ್ಯಾಬ್ ಗಳಿಗೆ ಜಿಲ್ಲಾ ವೈದ್ಯಾಧಿಕಾರಿಯ ಅನುಮತಿಯ ತಳಹದಿಯಲ್ಲಿ ಪಿ.ಪಿ.ಇ. ಸಹಿತ ಸೂಕ್ತ ಸುರಕ್ಷಾ ಮಾನಂಡಗಳ ಪಾಲನೆಯೊಂದಿಗೆ ಚಟುವಟಿಕೆ ನಡೆಯಬೇಕು ಎಂದವರು ಹೇಳಿರುವರು.
             ಕ್ವಾರೆಂಟೈನ್ ಗಳಲ್ಲಿರುವವರು ಹೊರಗಿಳಿಯಕೂಡದು: 
    ಸರ್ಕಾರಿ ನಿಯಂತ್ರಣದಲ್ಲಿರುವ ಕ್ವಾರೆಂಟೈನ್ ರೂಂ ಗಳಲ್ಲಿ ಮತ್ತು ಮನೆಗಳಲ್ಲಿ ಈಗ ಕ್ವಾರೆಂಟ್ಯನ್ ನಲ್ಲಿ ಇರಲು ಆರೋಗ್ಯ ಇಲಾಖೆ ಆದೇಶಿಸಿರುವ ಮಂದಿ ಯಾವ ಕಾರಣಕ್ಕೂ ಕೊಠಡಿಗಳನ್ನು ಬಿಟ್ಟುಹೊರಗಿಳಿಯಕೂಡದು. ಈ ಆದೇಶ ಉಲ್ಲಂಘಿಸಿದವರ ವಿರುದ್ಧ ಕ್ರಮವಲ್ಲದೆ, ಆ ವಾರ್ಡನ್ನು ಹಾಟ್ ಸ್ಪಾಟ್ ಆಗಿ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. ಇದು ನಡೆದಲ್ಲಿ ಜನಮನೆಯಿಂದ ಯಾವ ಕಾರಣಕ್ಕೂ ಇಳಿಯುವಂತಿಲ. ಅಂಗಡಿಗಳು ತೆರೆದು ಕಾರ್ಯಾಚರಿಸುವಂತಿಲ್ಲ. ವಾಹನಗಳು ಸಂಚರಿಸುವಂತಿಲ್ಲ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ವಾರ್ಡ್ ಮಟ್ಟದ ಜನಜಾಗೃತಿ ಸಮಿತಿ ಹೆಚ್ಚುವರಿ ಕಾಳಜಿ ವಹಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು. ತಲಪ್ಪಾಡಿ ಮತ್ತು ಕಾಲಿಕಡವು ಗಡಿಗಳ ಚೆಕ್ ಪೋಸ್ಟ್ ಗಳ ಚಟುವಟಿಕೆ ಬಿಗಿಗೊಳಿಸಲಾಗುವುದು ಎಂದವರು ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries