HEALTH TIPS

ಗಡಿ ದಾಟಿದ ಕಾಂಗ್ರೆಸ್ಸ್ ನಾಯಕನ ವಿರುದ್ಧ ಪ್ರಕರಣ ದಾಖಲು


       ಮುಳ್ಳೇರಿಯ: ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಗಡಿ ದಾಟಿದ್ದಕ್ಕಾಗಿ ಗ್ರಾಮ ಪಂಚಾಯತಿ ಸದಸ್ಯ, ಕಾಂಗ್ರೆಸ್ಸ್ ಮುಖಂಡರೋರ್ವರ  ವಿರುದ್ಧ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ.
       ಪಾಸ್ ಇಲ್ಲದೆ ಕರ್ನಾಟಕದಿಂದ ಕೇರಳಕ್ಕೆ ದಾಟಿದ ದೇಲಂಪಾಡಿ ಗ್ರಾಮ ಪಂಚಾಯತಿ 16 ನೇ ವಾರ್ಡ್ ಸದಸ್ಯ ಕೊರಗಪ್ಪ ರೈ ಮತ್ತು ಅವರ ಜೊತೆಗಿದ್ದ ವ್ಯಕ್ತಿಯ ವಿರುದ್ದ ಪೆÇಲೀಸರು ಪ್ರಕರಣ ದಾಖಲಿಸಿರುವರು. ಕೊರಗಪ್ಪ ರೈ ಅವರು ಸುಳ್ಯದಿಂದ ಗಡಿ ದಾಟಿದ್ದು, ಕೇರಳಕ್ಕೆ ಪ್ರವೇಶಿಸಲು ಅವರಿಗೆ ಎಂಟ್ರಿ ಪಾಸ್ ಇರಲಿಲ್ಲ. ತಾನು ಗ್ರಾ.ಪಂ.ಸದಸ್ಯನೆಂದು ಅಧಿಕಾರವನ್ನು ದುರುಪಯೋಗಪಡಿಸಿ ಸುಳ್ಯ ಸಹಿತ ಕರ್ನಾಟಕದ ವಿವಿಧೆಡೆ ಸಂಚರಿಸುತ್ತಿದ್ದು ಪೋಲೀಸರ ಕಣ್ತಪ್ಪಿಸಲು ಅರಣ್ಯ ಮಾರ್ಗ ಬಳಸುತ್ತಿದ್ದರೆಂದು ತಿಳಿದುಬಂದಿದೆ.  ಪೋಲೀಸರು ತನ್ನನ್ನು ಗುರಿಮಾಡಿರುವರೆಂದು ಶಂಕೆಗೊಂಡು ಸೋಮವಾರ ಸುಳ್ಯದಿಂದ ಕಾರಿನ ಮೂಲಕ ಅರಣ್ಯ ಮಾರ್ಗವಾಗಿ ದೇಲಂಪಾಡಿ ತಲಪಿದ್ದು, ಈ ಸಂದರ್ಭ ಪೋಲೀಸರು ಇವರನ್ನು ತಡೆದು ತನಿಖೆ ನಡೆಸಿ ದೂರು ದಾಖಲಿಸಿರುವರು. ಬಳಿಕ ಕೊರಗಪ್ಪ ರೈ ಹಾಗೂ ಅವರೊಂದಿಗಿದ್ದ ವ್ಯಕ್ತಿಯನ್ನು ಕ್ವಾರಂಟೈನ್ ಗೆ ಒಳಪಡಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries