HEALTH TIPS

ಇನ್`ಸ್ಟಂಟ್ ಪ್ಯಾನ್ ಕಾರ್ಡ್ ಸೇವೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಚಾಲನೆ

     
     ನವದೆಹಲಿ: ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ಚಾಲನೆ ನೀಡಿದರು.
         ಈ ಹಿಂದೆ ಕೇಂದ್ರ ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಕೇಂದ್ರ ಸರ್ಕಾರ ಇನ್`ಸ್ಟಂಟ್ ಅಥವಾ ತ್ವರಿತ ಪ್ಯಾನ್ ಕಾರ್ಡ್ ವಿತರಣಾ ಸೇವೆ ಆರಂಭಿಸಿದ್ದು, ಇ-ಕೆವೈಸಿ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಇಂತಹ ಇನ್`ಸ್ಟಂಟ್ ಪ್ಯಾನ್ ಕಾರ್ಡ್ ವಿತರಣಾ ಸೇವೆಗೆ ನಿರ್ಮಲಾ ಸೀತಾರಾಮನ್ ಅವರು ಇಂದು ದೆಹಲಿಯಲ್ಲಿ ಚಾಲನೆ ನೀಡಿದರು.
          ಆಧಾರ್ ಕಾರ್ಡ್ ಮತ್ತು ಅದಕ್ಕೆ ನೊಂದಾಯಿತ ಮೊಬೈಲ್ ನಂಬರ್ ಅನ್ನು ನೊಂದಾಯಿಸುವ ಮೂಲಕ ಅರ್ಜಿದಾರರು ತ್ವರಿತವಾಗಿ ಪ್ಯಾನ್ ಕಾರ್ಡ್ ಪಡೆಯಬಹುದಾಗಿದೆ. ಈ ಪ್ರಕ್ರಿಯೆ ಸಂಪೂರ್ಣ ಪೇಪರ್ ಲೆಸ್ (ಯಾವುದೇ ರೀತಿ ಕಾಗದ ರಹಿತ) ಆಗಿದ್ದು, ಇ-ಪ್ಯಾನ್ ಕಾರ್ಡ್ ವಿತರಣೆ  ಮಾಡಲಾಗುತ್ತದೆ. ಈ ಪ್ರಕ್ರಿಯೆ ಸಂಪೂರ್ಣ ಉಚಿತ ಎಂದು ಇಲಾಖೆ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ವಿತ್ತ ಸಚಿವಾಲಯ ಇ-ಪ್ಯಾನ್ ಸೇವೆ ಡಿಜಿಟಲ್ ಇಂಡಿಯಾ ಪರಿಕಲ್ಪನೆಗೆ ಬಲ ನೀಡಲಿದೆ. ಇದರಿಂದ ತೆರಿಗೆ ಪಾವತಿದಾರರಿಗೆ ನೆರವಾಗಲಿದೆ.
        ಮೇ25ರವರೆಗೂ ದೇಶದಲ್ಲಿ 50.52 ಕೋಟಿ ರೂ ಪ್ಯಾನ್ ಕಾರ್ಡ್ ಗಳನ್ನು ವಿತರಣೆ ಮಾಡಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries