ಮುಳ್ಳೇರಿಯ: ಲಾಕ್ ಡೌನ್ ಅವಧಿಯಲ್ಲಿ ಬಡಜನತೆಗೆ ಆಹಾರ ಧಾನ್ಯಗಳ ಕಿಟ್ ವಿತರಿಸುವ ಮೂಲಕ ಆದೂರು ಪೆÇಲೀಸರು ಜನಪರ ಧೋರಣೆ ತೋರಿದ್ದಾರೆ.
ಬೆಳ್ಳೂರು ಮತ್ತು ದೇಲಂಪಾಡಿ ಪ್ರದೇಶಗಳ ಬಡಜನತೆಗೆ ಈ ಸೌಲಭ್ಯ ಲಭಿಸಿದೆ. ವ್ಯಾಪಾರಿಗಳ ಸಹಿತ ಸಾರ್ವಜನಿಕರಿಂದ ಸಹಕಾರ ಪಡೆದು ಆದೂರು ಪೆÇಲೀಸರು ಈ ಕಿಟ್ ಸಿದ್ಧಪಡಿಸಿ ವಿತರಿಸಿದ್ದಾರೆ. ದೇಲಂಪಾಡಿ, ನಾಟೆಕಲ್ಲು, ಬಜೆ ಸಹಿತ ಪ್ರದೇಶಗಳಲ್ಲಿ ಕಿಟ್ ವಿತರಣೆ ನಡೆದಿದೆ. ಜನಮೈತ್ರಿ ಪೆÇಲೀಸರ ಪರವಾಗಿ ಸಿ.ಐ. ಪ್ರೇಮಸದನ್ ಅವರ ನೇತೃತ್ವದಲ್ಲಿ ಕಿಟ್ ವಿತರಿಸಲಾಗಿದೆ. ಈ ಕಾರ್ಯದ ಅಂಗವಾಗಿ ಕೊಲ್ಲಡ್ಕ ಬಜೆ ಎಸ್.ಟಿ. ಕಾಲನಿಯ 15 ಕುಟುಂಬಗಳಿಗೆ ಸಹಾಯ ಲಭಿಸಿದೆ. ಈಗಾಗಲೇ 150 ಕಿಟ್ ಗಳ ವಿತರಣೆ ನಡೆಸಲಾಗಿದೆ. ಇನ್ನೂ 30 ಕಿಟ್ ಗಳ ವಿತರಣೆ ನಡೆಯಲಿದೆ ಎಂದು ಪೆÇಲೀಸರು ತಿಳಿಸಿರುವರು.


