HEALTH TIPS

ಕೇರಳದಲ್ಲಿ ಕೊರೊನಾ ಕೇಕೆ ಇನ್ನಷ್ಟು ಹೆಚ್ಚುವ ಸಾಧ್ಯತೆ-ನಿಯಂತ್ರಣಗಳಿಗೆ ಜನರುಸಹಕರಿಸಬೇಕು-ಕೆ.ಕೆ.ಶೈಲಜಾ ಟೀಚರ್

 
          ತಿರುವನಂತಪುರ: ನೋವಲ್ ಕೋವಿಡ್ ಕೊರೊನಾ ವೈರಸ್ 19 ಜಗತ್ತಿನಾದ್ಯಂತ ತುರೀಯಾವಸ್ಥೆಯ ಮಟ್ಟದಲ್ಲಿ ಆತಂಕ ಮೂಡಿಸಿದ್ದರೂ ಕೇರಳ ಅವೆಲ್ಲವನ್ನೂ ಮೆಟ್ಟಿನಿಂತು ಒಂದು ಹಂತದ ಗೆಲುವು ಪಡೆದಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳು ಕೇರಳ ಮಾದರಿಯನ್ನು ಗುರುತಿಸಿವೆ. ಗಾರ್ಡಿಯನ್, ಬಿಬಿಸಿ ಮತ್ತು ಅಲ್ ಜಜೀರಾ ಮಾಧ್ಯಮಗಳು ಕೇರಳ ಮಾದರಿಯನ್ನು ಜಗತ್ತಿಗೆ ಪರಿಚಯಿಸಿದೆ. ಕೋವಿಡ್ ಪ್ರಥಮ ಹಂತದ ವಿಜಯ ಯಾತ್ರೆಯ ಬಳಿಕ ಇದೀಗ ಮತ್ತೆ ಬಿಕ್ಕಟ್ಟಿನತ್ತ ಸಾಗುತ್ತಿದೆ. ವಿದೇಶ ಮತ್ತು ಇತರ ರಾಜ್ಯಗಳಿಂದ ಕೇರಳಕ್ಕೆ ಆಗಮಿಸಿದ ಮಲಯಾಳಿಗಳಲ್ಲಿ ಇದೀಗ ಕೋವಿಡ್ ಕಂಡುಬರುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮಾಧ್ಯಮಗಳೊಂದಿಗಿನ ಸಂವಾದದಲ್ಲಿ ಭಾನುವಾರ ತಿಳಿಸಿದರು.
              ರೋಗಿಗಳ ಸಂಖ್ಯೆ ಇನ್ನಷ್ಟು ಹೆಚ್ಚುವುದು:
      ವಿದೇಶದಿಂದ ಮತ್ತು ದೇಶದ ಇತರ ರಾಜ್ಯಗಳಿಂದ ಕೇರಳಿಗರ ಮರಳುವಿಕೆಯೊಂದಿಗೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇದೀಗ ಹೆಚ್ಚಳವಾಗಿದ್ದು, ಇದು ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ. ರೋಗಿಗಳ ಸಂಖ್ಯೆಯನ್ನು ಈಗಾಗಲೇ ಲೆಕ್ಕಹಾಕಲಾಗಿದೆ. ಇದಕ್ಕಿರುವ ಪರಿಹಾರವೆಂದರೆ ಕೇರಳಕ್ಕೆ ಬರುವವರು ಕ್ಯಾರೆಂಟೈನ್ ಅನ್ನು ಕಟ್ಟುನಿಟ್ಟಾಗಿ ಅನುಸರಿಸುವುದು. ಇದನ್ನು ಅನುಸರಿಸದಿದ್ದಲ್ಲಿ ನಾವು ಭಾರಿ ಬೆಲೆ ಸಂಕಷ್ಟಕ್ಕೊಳಗಾಗಲಿದ್ದೇವೆ ಎಂದು ಕೆ.ಕೆ.ಶೈಲಜಾ ಎಚ್ಚರಿಸಿದ್ದಾರೆ.
          ಕೇರಳ ಯಾವ ಸನನಿವೇಶಗಳನ್ನೂ ಎದುರಿಸಲು ಸಿದ್ಧ:
      ಯಾವುದೇ ಪರಿಸ್ಥಿತಿ ಎದುರಾದರೂ ರಾಜ್ಯ ಸರ್ಕಾರ ಪೂರ್ಣ ಪ್ರಮಾಣದ ಸಿದ್ದತೆಗಳೊಂದಿಗೆ ಕಾರ್ಯನಿರ್ವಹಿಸಲು ಸನ್ನದ್ದವಾಗಿದೆ. ಹೆಚ್ಚುತ್ತಿರುವ ರೋಗಿಗಳ ಸಂಖ್ಯೆಯನ್ನು ನಾವು ನಿಭಾಯಿಸಬಹುದು. ಇಂತಹ ಪರಿಸ್ಥಿತಿಯ ನಿರೀಕ್ಷೆಯಲ್ಲಿ ರಾಜ್ಯ ಸರ್ಕಾರ ಪ್ಲ್ಯಾನ್ ಎ, ಪ್ಲಾನ್ ಬಿ ಮತ್ತು ಪ್ಲ್ಯಾನ್ ಸಿ ಎಂಬ ಸಮಗ್ರ ಯೋಜನೆಯನ್ನು ಸಿದ್ಧಪಡಿಸಿದೆ. ಹೊರಗಿನವರಿಗೆ ವಸತಿ ಕಲ್ಪಿಸುವ ಸರ್ಕಾರಿ ವ್ಯವಸ್ಥೆಗಿಂತ ಮನೆಗಳ ಕ್ವಾರಂಟೈನ್ ವ್ಯವಸ್ಥೆಯನ್ನು ಉತ್ತಮಗೊಳಿಸಲಾಗುವುದು ಎಂದು ಸಚಿವೆ ತಿಳಿಸಿರುವರು.
            ಜನರು ಬಂದಾಗ ತಿಳಿಸಿ:
    ಸರ್ಕಾರಿ ವ್ಯವಸ್ಥೆಗೆ ಸೂಚನೆ ನೀಡದೆ ಕೇರಳದ ಹೊರಗಿನಿಂದ ಬರುವ ಎಷ್ಟೋ ಜನರಿಂದ ದೊಡ್ಡ ಸಮಸ್ಯೆಯಾಗಲಿದೆ. ಕೆಲವು ಸಂಸ್ಥೆಗಳು ಸರ್ಕಾರಕ್ಕೆ ಮಾಹಿತಿ ನೀಡದೆ ಜನರನ್ನು ಕರೆತರುತ್ತಿವೆ. ಅಂತಹ ಜನರು ಎಲ್ಲಿಂದ ಬರುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುವುದನ್ನು ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವುದಕ್ಕೆ ಇಂತಹ ಅನೀತಿಗಳು ಕಾರಣವಾಗುತ್ತದೆ. ಸರ್ಕಾರದ ಕಟ್ಟಳೆಗಳನ್ನು ಮೀರಿ,  ಮಾಹಿತಿ ನೀಡದೆ ಇತರ ಪ್ರದೇಶಗಳಿಂದ ರಾಜ್ಯಕ್ಕೆ ವಕ್ಕರಿಸುವವರಿಂದ ದೊಡ್ಡ ಅಪಾಯ ಇದೆ ಎಂದು ಅವರು ಹೇಳಿರುವರು.
            ಮತ್ತೆ ಗಾಬರಿ ತರಿಸಿದ ಕೋವಿಡ್ ಮರಣ:
      ಏತನ್ಮಧ್ಯೆ, ರಾಜ್ಯದಲ್ಲಿ ನಿನ್ನೆ ಮತ್ತೊಂದು ಕೋವಿಡ್ ಮರಣ ವರದಿಯಾಗಿದೆ. ಮೃತ ವ್ಯಕ್ತಿ ಅಮನಾ (53) ವಯನಾಡಿನ ಕಲ್ಪೆಟ್ಟಾ ಮೂಲದವಳು. ಆಕೆಗೆ ಕ್ಯಾನ್ಸರ್ ಇರುವುದು ಪತ್ತೆಯಾಗಿದ್ದು, ಅವರನ್ನು ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆಸ್ಪತ್ರೆಗೆ ಆಗಮಿಸಿದ ಬಳಿಕ ಅವರ ಸ್ಥಿತಿ ಗಂಭೀರವಾಯಿತು. ಆದರೆ ಯಾವ ಚಿಕಿತ್ಸೆಗೂ ಸ್ಪಂಧಿಸದೆ ನಿನ್ನೆ  ನಿಧನರಾದರು. ಇದರೊಂದಿಗೆ, ಕೋವಿಡ್ 19 ರಿಂದ ಮರಣ ಹೊಂದಿದವರ ಸಂಖ್ಯೆ ರಾಜ್ಯದಲ್ಲಿ ಐದಕ್ಕೆ ಏರಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries