HEALTH TIPS

ಮುಖ್ಯಮಂತ್ರಿಗಳ ಪ್ರಚಾರಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ 12 ಮಂದಿ- ನಾಲ್ಕು ತಿಂಗಳ ಖರ್ಚು 36 ಲಕ್ಷ ರೂ!

   
           ಕೊಚ್ಚಿ: ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಫೇಸ್‍ಬುಕ್ ಮತ್ತು ಟ್ವಿಟರ್‍ನಲ್ಲಿ ಬಹಳ ಸಕ್ರಿಯರಾಗಿದ್ದಾರೆ. ಪಿಣರಾಯಿ ವಿಜಯನ್ ತಮ್ಮ ವೈಯಕ್ತಿಕ ಖಾತೆ ಮತ್ತು ಮುಖ್ಯಮಂತ್ರಿಯ ಅಧಿಕೃತ ಪುಟಗಳ ಮೂಲಕ ಎಲ್ಲಾ ವಿವರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುವ ಪರಿಪಾಠ ಬೆಳೆಸಿದ್ದಾರೆ. ಆದರೆ ಮುಖ್ಯಮಂತ್ರಿಯ ಅಧಿಕೃತ ಸಾಮಾಜಿಕ ಮಾಧ್ಯಮ ವ್ಯವಸ್ಥೆಯ ನಿರ್ವಹಣೆಗೆ ಭಾರೀ ವೆಚ್ಚ ವ್ಯಯವಾಗುತ್ತಿರುವುದು ಇದೀಗ ಬಹಿರಂಗಗೊಂಡಿದೆ.
         ಮುಖ್ಯಮಂತ್ರಿಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್‍ಸೈಟ್ ನಿರ್ವಹಿಸಲು ಪ್ರತಿ ತಿಂಗಳು 36 ಲಕ್ಷ ರೂ. ಗಳನ್ನು ವೆಚ್ಚ ಮಾಡಲಾಗಿದೆ ಎಂದು ತಿಳಿದುಬಂದಿದೆ. ಜೂನ್ 23 ರ ಸರ್ಕಾರದ ಆದೇಶದ ಪ್ರಕಾರ, ಸಿಎಂ ಅವರ ಸಾಮಾಜಿಕ ಮಾಧ್ಯಮ ಖಾತೆಗಳು ಮತ್ತು ವೆಬ್‍ಸೈಟ್ ನಿರ್ವಹಿಸಲು 3607207 ರೂ. ವೆಚ್ಚ ಮಾಡಲಾಗಿದೆ ಎಂದು ಸರ್ಕಾರಿ ಅಧಿಕೃತ ಅಂಕಿಅಂಶ ಬಹಿರಂಗಪಡಿಸಿದೆ.
          ಈ ಮೊತ್ತವನ್ನು  ಸಿಎಂ ಅವರ ಅಧಿಕೃತ ಸಾಮಾಜಿಕ ಜಾಲತಾಣಾ ಖಾತೆಗಳು ಮತ್ತು ವೆಬ್‍ಸೈಟ್‍ಗಳನ್ನು ನಿರ್ವಹಿಸುವ ವೃತ್ತಿಪರರಿಗೆ ಗೌರವ ಧನವಾಗಿ ನೀಡಲಾಗಿದೆ. ಪ್ರಸ್ತುತ 12 ಜನರು ಉದ್ಯೋಗದಲ್ಲಿದ್ದಾರೆ ಮತ್ತು ಅವರ ವೇತನ 25 ಲಕ್ಷ ರೂ.
       ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಜನರು ಮುಖ್ಯಮಂತ್ರಿಯನ್ನು ಅನುಸರಿಸುತ್ತಿದ್ದಾರೆ. ಆದ್ದರಿಂದ, ಈ ಹಿನ್ನೆಲೆಯಲ್ಲಿ ಸರ್ಕಾರದ, ಮುಖ್ಯಮಂತ್ರಿ, ಮಂತ್ರಿ ಮಂಡಲದ ಮಾಹಿತಿಗಳನ್ನು ಜನಸಾಮಾನ್ಯರಿಗೆ ತಲಪಿಸಲು ಇಂತಹ ಆಧುನಿಕ ಸಂವಹನ ಪರಿಣಾಮಕಾರಿ ಎಂದು ಗುರುತಿಸಲಾಗಿದೆ. ಲೈವ್ ಸ್ಟ್ರೀಮಿಂಗ್ ವೆಚ್ಚ 1.83 ಲಕ್ಷ ರೂ., ಸರ್ವರ್ ನಿರ್ವಹಣೆ ಮತ್ತು ನೆಟ್‍ವರ್ಕ್ ಸುರಕ್ಷತೆಯ ವೆಚ್ಚ 36 36,667. ರೂ.,  ಡೇಟಾ ಸಂಗ್ರಹಣೆಗೆ 1.1 ಲಕ್ಷ ರೂ. ಮತ್ತು ಬಾಡಿಗೆ 73333 ರೂ. ಮೊತ್ತ ಭರಿಸಲಾಗಿದೆ.
        ಐಟಿ ಮತ್ತು ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್ ಕಂಪನಿಯೊಂದರ ಅಧಿಕೃತರು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಸಾರ್ವಜನಿಕರ ಹಣವನ್ನು ಈ ರೀತಿ ಪೋಲು ಮಾಡುತ್ತಿರುವುದು ಖಂಡನೀಯ. ಮತ್ತು ಇದು ದುಬಾರಿ ಮೊತ್ತವೂ ಆಗಿದೆ. ಇಂತಹ ಸೇವೆ ಮಾಡುವ ಅನೇಕ ಕಂಪೆನಿಗಳು ರಾಜ್ಯದಲ್ಲಿದ್ದು, ಅಗ್ಗದ ದರದಲ್ಲಿ ಬೇಕಿದ್ದರೆ ಬಳಸಬಹುದಾಗಿತ್ತು. ಇಷ್ಟು ದೊಡ್ಡ ದರಗಳ ಲಾಭವನ್ನು ಯಾರು ಪಡೆದುಕೊಳ್ಳುತ್ತಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಸಂಪೂರ್ಣ ಲೆಕ್ಕಪರಿಶೋಧನೆ ನಡೆಸಬೇಕು ಎಂದಿರುವರು. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಸಿಎಂ ಅವರ ಸಾಮಾಜಿಕ ಮಾಧ್ಯಮ ಖಾತೆಗಳಿಗಾಗಿ ರಾಜ್ಯವು ವಾರ್ಷಿಕ 1 ಕೋಟಿ ರೂ. ಮೀಸಲಿರಿಸಿದೆ ಎಂದು ತಿಳಿಯಲಾಗಿದೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries