HEALTH TIPS

ರಾಜ್ಯದಲ್ಲಿ ಕೋವಿಡ್ ತುರೀಯಾವಸ್ಥೆ-ಇಂದು 127 ಮಂದಿ ಸೋಂಕಿತರು-7 ಮಂದಿ ಸೋಂಕಿತರು ಜಿಲ್ಲೆಯಲ್ಲಿ


         ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 7 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಡಿ.ಎಂ.ಒ. ಡಾ|ಎ.ವಿ.ರಾಮದಾಸ್ ತಿಳಿಸಿದ್ದಾರೆ.
             39 ವರ್ಷದ ಕಾರಡ್ಕ ಪಂಚಾಯತ್ ನಿವಾಸಿ, 47 ವರ್ಷದ ಅಜಾನೂರು ಪಂಚಾಯತ್ ನಿವಾಸಿ, 54 ವರ್ಷದ ಪಳ್ಳಿಕೆರೆ ನಿವಾಸಿ, 30 ವರ್ಷದ ಚೆಂಗಳ ಪಂಚಾಯತ್ ನಿವಾಸಿ, 38 ವರ್ಷದ ಮಂಗಲ್ಪಾಡಿ ನಿವಾಸಿ, 26 ವರ್ಷದ ವರ್ಕಾಡಿ ನಿವಾಸಿಗೆ ರೋಗ ಬಾಧಿಸಿದೆ. ಮಹಾರಾಷ್ಟ್ರದಿಂದ ಬಂದ 58 ವರ್ಷದ ಮಂಗಲ್ಪಾಡಿ ನಿವಾಸಿಗೆ ರೋಗ ಬಾಧಿಸಿದೆ.
ಕಾಸರಗೋಡು ಮೆಡಿಕಲ್ ಕಾಲೇಜು ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಕಾಂಞಂಗಾಡ್ ನಗರಸಭಾ ನಿವಾಸಿ, ಕಾಂಞಂಗಾಡ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 51 ವರ್ಷದ ಮಂಗಲ್ಪಾಡಿ ನಿವಾಸಿ ಗುಣಮುಖರಾಗಿದ್ದಾರೆ.
           ಮಾಸ್ಕ್ ಧರಿಸದ 219 ಮಂದಿ ವಿರುದ್ಧ ಕೇಸು ದಾಖಲು : ಮಾಸ್ಕ್ ಧರಿಸದ 219 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಇದು ವರೆಗೆ 7551 ಕೇಸುಗಳನ್ನು ದಾಖಲಿಸಲಾಗಿದೆ.
                      ಕೇರಳದಲ್ಲಿ 127 ಮಂದಿಗೆ ಸೋಂಕು :
     ಕೇರಳದಲ್ಲಿ ಶನಿವಾರ 127 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ. 57 ಮಂದಿ ರೋಗ ಮುಕ್ತರಾಗಿದ್ದಾರೆ. ಮಲಪ್ಪುರಂ-5, ಕಲ್ಲಿಕೋಟೆ-12, ತಿರುವನಂತಪುರಂ-5, ಕಾಸರಗೋಡು-7, ಪತ್ತನಂತಿಟ್ಟ-17, ಇಡುಕ್ಕಿ-1, ಎರ್ನಾಕುಳಂ-3, ಕೋಟ್ಟಯಂ-11, ಕೊಲ್ಲಂ-24, ತೃಶ್ಶೂರು-6, ಕಣ್ಣೂರು-4, ಆಲಪ್ಪುಳ-4, ಪಾಲ್ಘಾಟ್-23, ವಯನಾಡು-5 ಎಂಬಂತೆ ರೋಗ ಬಾಧಿಸಿದೆ.
      ಮಲಪ್ಪುರಂ-1, ತಿರುವನಂತಪುರ-11, ಕೊಲ್ಲಂ-2, ಆಲಪ್ಪುಳ-12, ಪತ್ತನಂತಿಟ್ಟ-12, ಎರ್ನಾಕುಳಂ-1, ಪಾಲ್ಘಾಟ್-10, ವಯನಾಡು-2, ಕಣ್ಣೂರು-2, ಕಾಸರಗೋಡು-2 ಎಂಬಂತೆ ಗುಣಮುಖರಾಗಿದ್ದಾರೆ.
         ರಾಜ್ಯದಲ್ಲಿ ಇದು ವರೆಗೆ 3039 ಮಂದಿಗೆ ರೋಗ ಬಾಧಿಸಿದೆ. 1450 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶನಿವಾರ ಶಂಕಿತ 258 ಮಂದಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries