HEALTH TIPS

ಸಮುದಾಯ ಭವನಕ್ಕೆ ಟಿ.ವಿ. ವಿತರಣೆ


   ಮುಳ್ಳೇರಿಯ: ಕೆಎಸ್‍ಟಿಎ ಕಾಸರಗೋಡು ಉಪಜಿಲ್ಲಾ ವತಿಯಿಂದ ಕುಂಡಂಗುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆದ ಆನ್‍ಲೈನ್ ಅಧ್ಯಯನ ಸೌಯರ್ಕಗಳಿಲ್ಲದ ವಿದ್ಯಾರ್ಥಿಗಳಿಗೆ ಸೌಕರ್ಯ ಕಲ್ಪಿಸುವ ಉದ್ದೇಶದಿಂದ 3 ಟಿ.ವಿ. ಗಳನ್ನು ಕಮ್ಯೂನಿಟಿ ಹಾಲ್‍ಗಳಿಗೆ ನೀಡಲಾಯಿತು.
        ಕೆಎಸ್‍ಟಿಎಯ ರಾಜ್ಯ ಉಪಾಧ್ಯಕ್ಷ ಕೆ.ರಾಘವನ್ ಬೇಡಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಸಿ.ರಾಮಚಂದ್ರನ್ ಅವರಿಗೆ ಟಿ.ವಿ. ಯನ್ನು ಹಸ್ತಾಂತರಿಸಿದರು. ಈ ಟಿ.ವಿ.ಗಳನ್ನು ಕಾರಕಾಡ್, ಅಂಜಾಂಮೈಲ್, ಪೆರಿಂಗಾನಂ ಎಂಬೀ ಕಾಲನಿಗಳಲ್ಲಿರುವ ಸಮುದಾಯ ಭವನಗಳಿಗೆ ನೀಡಲಾಗುವುದು.
         ಕಾರ್ಯಕ್ರಮದಲ್ಲಿ ಸಿ.ಕೃಷ್ಣನ್ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಪಂಚಾಯತಿ ಸದಸ್ಯೆ ಎನ್.ಪಿ.ನಬೀಸಾ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸುರೇಶ್ ಪಾಯಂ, ಎಸ್.ಎಂ.ಸಿ.ಅಧ್ಯಕ್ಷ ಎಂ.ರಘುನಾಥ್, ಜಿಲ್ಲಾ ಸಮಿತಿ ಸದಸ್ಯ ಪಿ.ವಿ.ಶಶಿ, ಶಾಲಾ ಪ್ರಾಂಶುಪಾಲ ಕೆ.ಕರುಣಾರನ್, ಮುಖ್ಯೋಪಾಧ್ಯಾಯ ಪಿ.ಹಾಷೀಂ, ಇ.ಕುಂಞÂರಾಮನ್, ಕೆ.ಮುರಳೀಧರನ್, ಎಂ.ವಿ.ವೇಣುಗೋಪಾಲನ್, ಎಂ.ಕರುಣಾಕರನ್, ಕೆ.ಪುಷ್ಪರಾಜನ್, ಕೆ.ದಾಮೋದರನ್ ಮೊದಲಾದವರು ಮಾತನಾಡಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries