ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಅಕ್ರಮ ಮದ್ಯ ಪ್ರಕರಣಗಳ ತನಿಖೆ ಚುರುಕುಗೊಳಿಸಿದೆ. ಅಕ್ರಮ ಸಾಗಾಟ ನಡೆಸುತ್ತಿದ್ದ 8.64 ಲೀಟರ್ ಮದ್ಯ, 25 ಲೀಟರ್ ಹುಳಿರಸ ಅಬಕಾರಿ ದಳ ಪತ್ತೆ ಮಾಡಿ ವಶಪಡಿಸಿದೆ. ಕುಂಟಾರು ಮೀಂಜ ಪದವು ರಸ್ತೆಯಲ್ಲಿ ನಡೆಸಿದ ವಾಹನ ತಪಾಸಣೆಯಲ್ಲಿ 8.64 ಲೀಟರ್ ಕರ್ನಾಟಕ ಮದ್ಯ ಪತ್ತೆಯಾಗಿದೆ. ಬೆಳ್ಳೂರು ನಾಟೆಕಲ್ಲು ನಿವಾಸಿ ವಿರುದ್ಧ ಕೇಸು ದಾಖಲಿಸಲಾಗಿದೆ. ಕೀಕಾನ ಚೇಟುಕುಂಡ್‍ನಲ್ಲಿ 25 ಲೀಟರ್ ಹುಳಿರಸ ಪತ್ತೆ ಮಾಡಿ ವಶಪಡಿಸಲಾಗಿದೆ. ಉಣ್ಣಿಕೃಷ್ಣನ್ ವಿರುದ್ಧ ಕೇಸು ದಾಖಲಿಸಲಾಗಿದೆ.
ಅಬಕಾರಿ ವಿಭಾಗಗಳಿಗೆ ಕರೆಮಾಡಿ : ಅಕ್ರಮ ಸಾರಾಯಿ ಪ್ರಕರಣಗಳು ಗಮನಕ್ಕೆ ಬಂದರೆ ಸಾರ್ವಜನಿಕರು ಈ ದೂರವಾಣಿ ಸಂಖ್ಯೆಗಳಿಗೆ ಕರೆಮಾಡಬಹುದು. ಕಾಸರಗೋಡು ಸ್ಪೆಷ್ಯಲ್
ಸ್ಕ್ವಾಡ್-04994-257060, ಅಬಕಾರಿ ಸರ್ಕಲ್ ಕಚೇರಿಗಳು: ಕಾಸರಗೋಡು-04994-255332, ಹೊಸದುರ್ಗ - 04672 - 204125, ರೇಂಜ್ ಕಚೇರಿಗಳು: ಕಾಸರಗೋಡು - 04994 - 257541, ಬಂದಡ್ಕ-04994-205364, ಬದಿಯಡ್ಕ - 04994 - 261950, ಕುಂಬಳೆ-04998-213837, ಹೊಸದುರ್ಗ - 04672 -204533, ನೀಲೇಶ್ವರ - 04672 - 283174.





