HEALTH TIPS

ಘರ್ಷಣೆ ನಿಲ್ಲಿಸಿ ಗಡಿಯಿಂದ ಹಿಂದೆ ಸರಿದ ಭಾರತ-ಚೀನಾ ಸೇನೆ

        ಹೊಸ ದಿಲ್ಲಿ: ಲಡಾಖ್‌ನಲ್ಲಿ ಭಾರತ-ಚೀನಾ ಸೈನಿಕರ ನಡುವಣ ಸಂಘರ್ಷ, ತಾತ್ಕಾಲಿಕವಾಗಿ ಸ್ಥಗಿತವಾಗಿದೆ. ವಾಸ್ತವ ಗಡಿ ನಿಯಂತ್ರಣ ರೇಖೆಯಿಂದ ಉಭಯ ಸೇನೆಗಳು ದೂರ ಸರಿದಿದ್ದು, ಸದ್ಯಕ್ಕೆ ಯಾವುದೇ ರೀತಿಯ ಗುಂಡಿನ ಮೊರೆತದ ಸದ್ದು ಕೇಳಿ ಬರುತ್ತಿಲ್ಲ.
     ಗಾಲ್ವಾನ್‌ ಪ್ರದೇಶದಲ್ಲಿ ಸೋಮವಾರ ತಡರಾತ್ರಿ ಹಾಗೂ ಮಂಗಳವಾರ ಸಂಘರ್ಷ ತಾರಕಕ್ಕರಿತ್ತು. ಭಾರತೀಯ ಸೇನೆಯ 20 ಯೋಧರು ಹುತಾತ್ಮರಾದರು. ಇದೇ ವೇಳೆ 17 ಸೈನಿಕರು ಗಂಭೀರವಾಗಿ ಗಾಯಗೊಂಡರು. ಇತ್ತ, ಚೀನಾ ಸೇನೆಯೂ ಭಾರೀ ನಷ್ಟ ಅನುಭವಿಸಿದೆ ಎಂದು ತಿಳಿದುಬಂದಿದೆ. ಸಾವು ಹಾಗೂ ಗಾಯಾಳುಗಳನ್ನೂ ಸೇರಿ ಚೀನಾ ಸೈನ್ಯಕ್ಕೆ 43 ಸೈನಿಕರ ನಷ್ಟವಾಗಿದೆ.
             ಶೂನ್ಯಕ್ಕಿಂತಾ ಕಡಿಮೆ ತಾಪಮಾನದ, ಸಮುದ್ರ ಮಟ್ಟಕ್ಕಿಂತಾ ತುಂಬಾ ಎತ್ತರದಲ್ಲಿರುವ ಈ ಪ್ರದೇಶದಲ್ಲಿ ಹವಾಮಾನ ವೈಪರಿತ್ಯ ಉಭಯ ದೇಶಗಳ ಸೈನಿಕರಿಗೆ ದೊಡ್ಡ ಶತ್ರುವಾಗಿದೆ. ಹೀಗಿದ್ದರೂ, ಭಾರತೀಯ ಸೇನೆ ಗಡಿಯನ್ನು ಬಿಟ್ಟು ಒಂದಿಂಚೂ ಕದಲೋದಿಲ್ಲ ಎಂದು ಪ್ರತಿಜ್ಞೆ ಮಾಡಿದೆ. ಭಾರತದ ಸಾರ್ವಭೌಮತ್ವದ ರಕ್ಷಣೆಗೆ ಬದ್ಧ ಎಂದು ಸ್ಪಷ್ಪಪಡಿಸಿದೆ.
       ಸೋಮವಾರ ರಾತ್ರಿ ಈ ಭಾಗದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಆರಂಭವಾಗಿತ್ತು. ಈ ವೇಳೆ ಭಾರತೀಯ ಸೇನೆಯ ಮೂವರು ಅಧಿಕಾರಿಗಳು ಹುತಾತ್ಮರಾಗಿದರು ಎಂಬ ಸುದ್ದಿ ಸಿಕ್ಕಿತು. ಅದಾದ ಮಾರನೇ ದಿನವೇ ಚೀನಾ ಸೇನೆ ಹಾಗೂ ಭಾರತ ಸೇನೆ ನಡುವಣ ಸಂಘರ್ಷದಿಂದ ದೊಡ್ಡ ಪ್ರಮಾಣದ ಸಾವು ನೋವುಗಳಾಗಿರುವ ಮಾಹಿತಿ ಹೊರಬಿದ್ದಿದೆ.
        ಸದ್ಯ ಚೀನಾ ಸೇನೆ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಗೌರವಿಸಿ ಹಿಂದೆ ಸರಿದಿದೆ. ಸದ್ಯದ ಮಟ್ಟಿಗೆ ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ ಬೂದಿ ಮುಚ್ಚಿದ ಕೆಂಡದಂತಿದೆ. ಎರಡೂ ಕಡೆಯ ಸೈನ್ಯದಲ್ಲಿ ಸಾಕಷ್ಟು ಸಾವು, ನೋವುಗಳಾಗಿವೆ ಎಂದು ಭಾರತೀಯ ವಿದೇಶಾಂಗ ಇಲಾಖೆ ವಕ್ತಾರೆ ಅನುರಾಗ್‌ ಶ್ರೀವಾಸ್ತವ್‌ ಹೇಳಿದ್ದಾರೆ. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸದ್ಯ 2 ಬಾರಿ ಸಭೆ ನಡೆಸಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries