HEALTH TIPS

1-2 ತಿಂಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಟೆಸ್ಟ್: ಹರ್ಷವರ್ಧನ್

 
          ನವದೆಹಲಿ: 1-2 ತಿಂಗಳುಗಳಲ್ಲಿ ಪ್ರತಿ ದಿನ 10 ಲಕ್ಷ ಕೋವಿಡ್-19 ಸೋಂಕು ಪರೀಕ್ಷೆಗಳನ್ನು ನಡೆಸಲಾಗುವುದು ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ. 
        ಭಾರತದಲ್ಲಿ ಈಗ ದಿನಂಪ್ರತಿ 5 ಲಕ್ಷ ಸೋಂಕು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಮುಂದಿನ ಒಂದು ಅಥವಾ ಎರಡು ತಿಂಗಳಲ್ಲಿ ಈ ಸಂಖ್ಯೆಯನ್ನು ದುಪ್ಪಟ್ಟು ಮಾಡುವ ಗುರಿ ಹೊಂದಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ಕೋವಿಡ್-19 ಗೆ ಸಂಬಂಧಿಸಿದ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನೆ ತಂತ್ರಜ್ಞಾನಗಳ (ಸಿಎ???ಆರ್) ಸಂಗ್ರಹವನ್ನು ಬಿಡುಗಡೆ ಮಾಡಿ ಮಾತನಾಡಿರುವ ಹರ್ಷವರ್ಧನ್, ಕೋವಿಡ್-19 ನಿಂದ ಚೇತರಿಕೆ ಕಾಣುವವರ ಪ್ರಮಾಣ ಶೇ.64 ರಷ್ಟಿದ್ದು ವಿಶ್ವದಲ್ಲೇ ಅತ್ಯುತ್ತಮವಾದುದ್ದಾಗಿದೆ. ಇನ್ನು ಮರಣ ಪ್ರಮಾಣ ಕೇವಲ ಶೇ.2.2 ರಷ್ಟಿದೆ ಎಂದು ತಿಳಿಸಿದ್ದಾರೆ. 
ಕೋವಿಡ್-19 ನ್ನು ಎದುರಿಸುವುದಕ್ಕಾಗಿ ವೈದ್ಯಕೀಯ ಸಮುದಾಯದ ಜೊತೆಗೆ ಶ್ರಮಿಸುತ್ತಿರುವ ವೈಜ್ಞಾನಿಕ ಸಮುದಾಯವನ್ನೂ ಸಚಿವರು ಪ್ರಶಂಸಿದ್ದಾರೆ. 
      ಬಹುತೇಕ ವೆಂಟಿಲೇಟರ್ ಗಳನ್ನು ದೇಶದಲ್ಲೇ ತಯಾರಿಸಲಾಗುತ್ತಿದೆ. ಭಾರತ ಹೈಡ್ರಾಕ್ಸಿಕ್ಲೋರೊಕ್ವಿನ್ ಔಷಧವನ್ನು 150 ದೇಶಗಳಿಗೆ ರಫ್ತು ಮಾಡುತ್ತಿದೆ. ಏಪ್ರಿಲ್ ನಲ್ಲಿ ದಿನವೊಂದಕ್ಕೆ 6,000 ಪರೀಕ್ಷೆಗಳಷ್ಟೇ ನಡೆಯುತ್ತಿತ್ತು. ಈಗ ದಿನವೊಂದಕ್ಕೆ 5 ಲಕ್ಷ ಸೋಂಕು ಪರೀಕ್ಷೆ ನಡೆಸಲಾಗುತ್ತಿದೆ ಎಂದು ಹರ್ಷವರ್ಧನ್ ತಿಳಿಸಿದ್ದಾರೆ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries