ತಿರುವನಂತಪುರ: ರಾಜ್ಯದ ಅತ್ಯಂತ ಹಿರಿಯ ಕೋವಿಡ್ ರೋಗಿಯನ್ನು ಬುಧವಾರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕೊಲ್ಲಂನ ಅಂಚಲ್ ಮೂಲದ ಅಸ್ಮಾ ಬೀವಿ (105) ಅವರನ್ನು ಕೋವಿಡ್ ಮುಕ್ತರಾಗಿ ಮನೆಗೆ ಮರಳಿದರು. ಆರೋಗ್ಯ ಸಚಿವ ಕೆ.ಕೆ.ಶೈಲಜಾ ಅವರು ಫೇಸ್‍ಬುಕ್ ಪೆÇೀಸ್ಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ರಾಜ್ಯದಲ್ಲಿ ವರದಿಯಾದ ಕೋವಿಡ್ ರೋಗಿಗಳಲ್ಲಿ ಆಸ್ಮಾ ಬೀವಿ ಹಿರಿಯ ಜೀವ.105ರ ಹರೆಯದ ಮುತ್ತಜ್ಜಿಯನ್ನು ಜ್ವರ ಮತ್ತು ಕೆಮ್ಮು ಸಹಿತ ಅಸೌಖ್ಯ ಕಾರಣ ಅವರನ್ನು ಜುಲೈ 20 ರಂದು ಕೊಲ್ಲಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಅತಿ ಹಿರಿಯ ಜೀವವಾದ್ದರಿಂದ ಬೀವಿಯವರಲ್ಲಿ ಕಂಡುಬಂದ ಅಸ್ತಮಾ ಚಿಕಿತ್ಸೆ ವಿಶೇಷ ವೈದ್ಯಕೀಯ ತಂಡವನ್ನು ನೇಮಿಸಲಾಯಿತು. ಇದಕ್ಕಾಗಿ ನಿಖರವಾದ ಸೂಚನೆಗಳನ್ನು ನೀಡಲಾಯಿತು. ಆರೋಗ್ಯ ಸ್ಥಿತಿಯನ್ನು ವೈದ್ಯಕೀಯ ಮಂಡಳಿಯು ಪ್ರತಿದಿನ ಮೇಲ್ವಿಚಾರಣೆ ಮಾಡಿ ಮೌಲ್ಯಮಾಪನ ಮಾಡುತ್ತಿತ್ತು. ಕೋವಿಡ್ ದೃಢೀಕರಣದ ಬಳಿಕವೂ ಸಮರೋಪಾದಿಯಲ್ಲಿ ಚಿಕಿತ್ಸೆ ನೀಡಲಾಯಿತು. ಹಿರಿಯ ಜೀವ ಚಿಕಿತ್ಸೆಗಳಿಗೆ ಸ್ಪಂದಿಸಿದ್ದೂ ವಿಶೇಷವೆ.
105 ವರ್ಷದ ಅಸ್ಮಾ ಬೀವಿ ಅವರನ್ನು ರಕ್ಷಿಸುವುದು ಕೋವಿಡ್ ವಿರುದ್ಧದ ಹೋರಾಟದ ಮೂರನೇ ಹಂತದ ಮುಂಚೂಣಿಯಲ್ಲಿರುವ ಎಲ್ಲಾ ಆರೋಗ್ಯ ಕಾರ್ಯಕರ್ತರಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡಿತು. "ಚಿಕಿತ್ಸೆಯ ನೇತೃತ್ವ ವಹಿಸಿದ್ದ ಪ್ರಾಂಶುಪಾಲರು, ಅಧೀಕ್ಷಕರು, ವೈದ್ಯರು, ದಾದಿಯರು ಮತ್ತು ಇತರ ಎಲ್ಲ ಸಿಬ್ಬಂದಿಗೆ ನನ್ನ ಅಭಿನಂದನೆಗಳು" ಎಂದು ಸಚಿವರು ಫೇಸ್‍ಬುಕ್ ಪೆÇೀಸ್ಟ್‍ನಲ್ಲಿ ತಿಳಿಸಿದ್ದಾರೆ.


