HEALTH TIPS

ಇಂದು ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗಿನ ಸಮುದ್ರದಲ್ಲಿ ದೊಡ್ಡ ತೆರೆ ಅಪ್ಪಳಿಸುವ ಸಾಧ್ಯತೆ: ಕರಾವಳಿ ನಿವಾಸಿಗಳು ಜಾಗ್ರತೆ ವಹಿಸಬೇಕು : ಸಮುದ್ರ ಸ್ಥಿತಿಗತಿ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ

 
           ಕಾಸರಗೋಡು:  ಇಂದು(ಜು.23) ರಾತ್ರಿ 11.30 ವರೆಗೆ ಪೊಳಿಯೂರಿನಿಂದ ಕಾಸರಗೋಡು ವರೆಗಿನ ಸಮುದ್ರದಲ್ಲಿ ದೊಡ್ಡ ತೆರೆ ಅಪ್ಪಳಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕರಾವಳಿ ನಿವಾಸಿಗಳು, ಮೀನುಗಾರರು ಜಾಗ್ರತೆ ವಹಿಸಬೇಕು ಎಂದು ಸಮುದ್ರ ಸ್ಥಿತಿಗತಿ ಅಧ್ಯಯನ ಕೇಂದ್ರ ಮುನ್ನೆಚ್ಚರಿಕೆ ನೀಡಿದೆ.
          2.5 ರಿಂದ 2.7 ಮೀ. ಎತ್ತರದ ತೆರೆ ಅಪ್ಪಳಿಸಲಿದೆ ಎಂದು ಸೂಚನೆ ನೀಡಲಾಗಿದೆ. ಕಡಲ್ಕೊರೆತ ತೀವ್ರವಾಗಿರುವ ಪ್ರದೇಶಗಳಲ್ಲಿ ಸ್ಥಳೀಯ ನಿವಾಸಿಗಳು ಬೇರೆಡೆ ಸ್ಥಳಾಂತರಗೊಳ್ಳಬೇಕು. ಕೋವಿಡ್ ಸಂಹಿತೆಗಳನ್ನು ಪಾಲಿಸಿ, ಶಿಬಿರಗಳಲ್ಲಿ ತಂಗಬೇಕು. ಮೀನುಗಾರಿಕೆ ಉಪಕರಣಗಳ ಸುರಕ್ಷೆ ಖಚಿತೆ ನಡೆಸಬೇಕು, ಬೋಟುಗಳನ್ನು ಹಾರ್ಬರ್ ಗಳಲ್ಲಿ ಕಟ್ಟಿಹಾಕಬೇಕು ಎಂದು ತಿಳಿಸಲಾಗಿದೆ.
                         ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಸುರಿದುದು 1722.2496 ಮಿ.ಮೀ. ಮಳೆ:
        ಬಿರುಸಿನ ಮಳೆಗಾಲ ಆರಂಭಗೊಂಡ ನಂತರ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 1722.2496 ಮಿ.ಮೀ. ಮಳೆ ಸುರಿದಿದೆ. 2 ಮನೆಗಳು ಪೂರ್ಣರೂಪದಲ್ಲಿ, 35 ಮನೆಗಳು ಭಾಗಶಃ ಹಾನಿಗೊಂಡಿವೆ. ಕಳೆದ 24 ತಾಸುಗಳಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 4 ಮನೆಗಳು ಭಾಗಶಃ ಹಾನಿಗೊಂಡಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries