HEALTH TIPS

ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ. ಮಂಜೂರು


              ಕಾಸರಗೋಡು:  ಬಾಯಾರು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ನಿರ್ಮಾಣಕ್ಕೆ 1.50 ಕೋಟಿ ರೂ. ಮಂಜೂರು ಮಾಡಲಾಗಿದೆ.
          ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಲ್ಲಿ ಅಳವಡಿಸಿ ಕಾಸರಗೋಡು ಜಿಲ್ಲೆಯ ವಿವಿಧ ಆರೋಗ್ಯ ಕೇಂದ್ರಗಳನ್ನು ಆದ್ರರ್ಂ ಯೋಜನೆಯ ಗುಣಮಟ್ಟಕ್ಕೇರಿಸುವ ಚಟುವಟಿಕೆಗಳ ಅಂಗವಾಗಿ ಈ ಕೇಂದ್ರದ ನೂತನ ಬ್ಲೋಕ್ ನಿರ್ಮಾಣಕ್ಕೆ ಆಡಳಿತೆ ಮಂಜೂರಾತಿ ನೀಡಲಾಗಿದೆ.
             ಪೈವಳಿಕೆ ಗ್ರಾಮಪಂಚಾಯತ್ ನಿಧಿಯಿಂದ 10 ಲಕ್ಷ ರೂ., ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ನಿಂದ 1.40 ಕೋಟಿ ರೂ. ಸಹಿತ 1.50 ಕೋಟಿ ರೂ. ಈ ಯೋಜನೆಗಾಗಿ ಮೀಸಲಿರಿಸಲಾಗಿದೆ.
         ನೂತನವಾಗಿ ನಿರ್ಮಿಸುವ ಈ ಕಟ್ಟಡದಲ್ಲಿ 3 ಒ.ಪಿ. ಕೊಠಡಿಗಳು, 2 ಒಬ್ಸರ್ ವೇಷನ್ ಕೊಠಡಿಗಳು, ಡೆಂಟಲ್ ಒ.ಪಿ., ಸ್ಪೆಷ್ಯಲ್ ಒ.ಪಿ., ಒ.ಪಿ. ರೆಜಿಸ್ಟ್ರೇಷನ್ ಕೌಂಟರ್, ಡ್ರೆಸ್ಸಿಂಗ್ ರೂಂ, ಲ್ಯಾಬ್, ಬ್ರೆಸ್ಟ್ ಫೀಡಿಂಗ್ ರೂಂ, ಫಾರ್ಮಸಿ ಸಹಿತ ಸೌಲಭ್ಯಗಳಿರುವುದು. ಸಾರ್ವಜನಿಕರಿಗೂ, ಮಕ್ಕಳಿಗೂ ಒ.ಪಿ.ವಿಭಾಗಗಳಿಗೆ ಆಗಮಿಸುವ ರೋಗಿಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಕಟ್ಟಡದ ಒಂದನೇ ಅಂತಸ್ತಿನಲ್ಲಿ ಪಬ್ಲಿಕ್ ಹೆಲ್ತ್ ಡಿವಿಝನ್ ಸೌಲಭ್ಯವೂ ಇರುವುದು.
     ಈ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಜಿಲ್ಲಾ ಮಟ್ಟದ ಸಮಿತಿ ಸಭೆಯಲ್ಲಿ ಮಂಜೂರಾತಿ ನೀಡಲಾಗಿದೆ. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಧ್ಯಕ್ಷತೆ ವಹಿಸಿದ್ದರು. ಪ್ಯಾಕೇಜ್ ವಿಶೇಷ ಅಧಿಕಾರಿ ಇ.ಪಿ.ರಾಜ್ ಮೋಹನ್, ಕಟ್ಟಡ ವಿಭಾಗ ಕಾರ್ಯಕಾರಿ ಇಂಜಿನಿಯರ್ ಮುಹಮ್ಮದ್ ಮುನೀರ್ ವಿ.ಪಿ., ಹಣಕಾಸು ಅಧಿಕಾರಿ ಕೆ.ಸತೀಶನ್ ಮೊದಲಾದವರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries