HEALTH TIPS

ಕಾಲುಗಳಿಂದ ಕೋವಿಡ್ ಹರಡೀತು ಎಂಬ ಭೀತಿ ಇನ್ನು ಬೇಕಿಲ್ಲ: ಕಯರ್ ಕಾರ್ಪರೇಷನ್ ಸಿದ್ಧಪಡಿಸಿದೆ "ಸ್ಯಾನಿ ಮ್ಯಾಟ್"-ಇತಿಹಾಸದತ್ತ ಮರಳುವಿಕೆ!

     
               ಕಾಸರಗೋಡು:  ಕಾಲುಗಳಿಂದ ಕೋವಿಡ್ ಹರಡೀತು ಎಂಬ ಭೀತಿ ಇನ್ನು ಮುಂದೆ ಬೇಕಿಲ್ಲ. ರಾಜ್ಯ ಕಯರ್ ಕಾರ್ಪರೇಷನ್(ತೆಂಗಿನ ನಾರು ನಿಗಮ) ಸಿದ್ಧಪಡಿಸಿದೆ "ಸ್ಯಾನಿ ಮ್ಯಾಟ್".
              ರೋಗ ಪ್ರತಿರೋಧ ಅಂಗವಾಗಿ ಕೈಗಳನ್ನು ಗಾಗ ಶುಚಿಕೊಳಿಸಬೇಕು ಎಂದು ಸಾರಲಾಗುತ್ತಿರುವ ಹಿನ್ನೆಲೆಯಲ್ಲಿ ಕಾಲುಗಳನ್ನು ಆಗಾಗ ಶುಚಿಗೊಳಿಸುವ ಗೆ ಹೇಗೆ ಎಂಬ ಪ್ರಶ್ನೆ ಎಲ್ಲರ ಮುಂದೆ ಕಾಡುತ್ತಿತ್ತು. ಇದಕ್ಕೆ ಸಕಾರಾತ್ಮ ಉತ್ತರವಾಗಿ ವೈರಸ್ ಬಾಧೆ ತಗುಲದಂತೆ ತಡೆಯುವ "ಸ್ಯಾನಿ ಮ್ಯಾಟ್" ತಯಾರಿಸಿದೆ.
                  ವಿಶೇಷತೆ-ಅತ್ಯಂತ ಸುರಕ್ಷಿತ:
         ತೆಂಗಿನ ಸಿಪ್ಪೆ, ನಾರುಗಳಿಂದ ತಯಾರಿಗೊಂಡ ಈ ಮ್ಯಾಟ್ ರೋಗಾಣುನಾಶವಿರುವ ಟ್ರೇಯೊಂದರಲ್ಲಿ ಇರಿಸಿ ಬಳಸಬಹುದಾಗಿದೆ. ಮ್ಯಾಟಿನ ಜತೆಯಲ್ಲೇ ಟ್ರೇಯೂ, ರೋಗಾಣುನಾಶಕ ದ್ರಾವಣವೂ ಲಭಿಸುತ್ತದೆ. ತೆಂಗಿನನಾರಿನ ಉತ್ಪನ್ನ ಇದಾಗಿರುವ ಹಿನ್ನೆಲೆಯಲ್ಲಿ ಎಷ್ಟು ಕಾಲನೀರಲ್ಲಿ ಅದ್ದಿ ಇರಿಸಿದರೂ ಹಾಳಾಗುವುದಿಲ್ಲ. ಕಾಲುಗಳನ್ನು ಇದರಲ್ಲಿ ಒರೆಸುವ ವೇಳೆ ಇದರಲ್ಲಿರುವ ರೋಗಾಣುನಾಶಕವೂ ಕಾಲುಗಳನ್ನು ಒದ್ದೆ ಮಾಡಿ ಶುಚಿಗೊಳಿಸುತ್ತದೆ. ನಂತರ ಧೈರ್ಯ ದಿಂದ ಮನೆಯೊಳಗೆ ಪ್ರವೇಶಿಸಬಹುದು. 
                   ಶ್ರೀ ಚಿತ್ತಿರ ತಿರುನಾಳ್ ಇನ್ಸ್ ಸ್ಟಿಟ್ಯೂಟ್ ಫಾರ್ ಮೆಡಿಕಲ್ ಸಯನ್ಸ್ ಆಂಡ್ ಟೆಕ್ನಾಲಜಿ ಮತ್ತು ನ್ಯಾಷನಲ್ ಕಯರ್ ರಿಸರ್ಚ್ ಆಂಡ್ ಮೆನೆಜ್ ಮೆಂಟ್ ಇನ್ಸ್ ಸ್ಟಿಟ್ಯೂಟ್ ಸರ್ಟಿಫೈ ನಡೆಸಿರುವ ಉತ್ಪನ್ನ ಇದಾಗಿದೆ. ಬೇರೆ ಬೇರೆ ಬಣ್ಣಗಳಲ್ಲಿ, ವೈವಿಧ್ಯಮಯ ಡಿಸೈನ್ ಗಳಲ್ಲಿ ಮ್ಯಾಟ್ ಲಭ್ಯವಿದೆ. ಒದ್ದೆ ಕಾಲನ್ನು ಒರೆಸಿಕೊಳ್ಳಲು ಒಣಗಿದ ಮ್ಯಾಟ್ ಬೇಕಿದ್ದರೂ ಲಭ್ಯವಿದೆ. ಶುದ್ಧ ಪ್ರಕೃತಿ ಸ್ನೇಹಿ ಉತ್ಪನ್ನವೂ ಇದಾಗಿದೆ ಎಂಬುದೂ ಗಮನಾರ್ಹ ವಿಚಾರ.
                          ಕುಟುಂಬಶ್ರೀ ಮೂಲಕ ಮಾರಾಟ:
         ಭಾರೀ ಮಹತ್ವಿಕೆ ಹೊಂದಿರುವ ಈ ಉತ್ಪನ್ನ ಕುಟುಂಬಶ್ರೀ ಮೂಲಕ ಮಾರಾಟಕ್ಕೆ ಲಭ್ಯವಿದೆ. ಮೂವರು ಸದಸ್ಯರಿರುವ ಘಟಕಗಳು ಇದಕ್ಕಾಗಿ ಸಜ್ಜುಗೊಂಡಿವೆ. ಮನೆಗಳಲ್ಲಿ, ಕಚೇರಿಗಳಲ್ಲಿ, ವ್ಯಾಪಾರ ಸಂಸ್ಥೆಗಳಲ್ಲಿ, ಮಾಲ್ ಗಳಲ್ಲಿ, ಬ್ಯಾಂಕ್ ಗಳಲ್ಲಿ, ಆಸ್ಪತ್ರೆಗಳಲ್ಲಿ ಹೀಗೆ ಸಂಸ್ಥೆಗಳಲ್ಲಿ ಈ ಮ್ಯಾಟ್ ಗಳನ್ನು ಬಳಸಬಹುದಾಗಿದೆ.
                           ದರ ಪಟ್ಟಿ ಏನು?
            859 ರೂ.ನಿಂದ 4499 ರೂ. ವರೆಗೆ ಮ್ಯಾಟ್ ಗಳ ದರವಿದೆ. ಕಾಸರಗೋಡು ಜಿಲ್ಲೆಯಲ್ಲಿ ಕುಟುಂಬಶ್ರೀ ಸಿ.ಡಿ.ಎಸ್., ಕುಟುಂಬಶ್ರೀ ಯೊಂದಿಗೆ ಸಹಕಾರಿಗಳಾಗಿರುವ ಬ್ಯಾಂಕ್ ಗಳು, ಹೋಂ ಶಾಪ್ ಗಳು ಮೊದಲಾದವುಗಳ ಮೂಲಕ ಆರ್ಡರ್ ಸ್ವೀಕರಿಸಲಾಗುತ್ತಿದೆ. ಮುಂದಿನ ಒಂದು ವಾರದ ಅವಧಿಯಲ್ಲಿ ಸ್ಯಾನಿಮ್ಯಾಟ್ ಗಳ ವಿತರಣೆ ಆರಂಭಗೊಳ್ಳಲಿದೆ ಎಂದು ಕುಟುಂಬಶ್ರೀ ಜಿಲ್ಲಾ ಸಂಚಾಲಕ ಟಿ.ಟಿ.ಸುರೇಂದ್ರನ್ ತಿಳಿಸಿರುವರು.
                       ( ಚಿತ್ರ ಮಾಹಿತಿ: ರಾಜ್ಯ ಕಯರ್ ಕಾರ್ಪರೇಷನ್ ಸಿದ್ಧಪಡಿಸಿರುವ ಸ್ಯಾನಿ ಮ್ಯಾಟ್.) 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries