HEALTH TIPS

ನೀವು ಸೂಕ್ತ ಉತ್ತರ ನೀಡಿದ್ದೀರಿ, 130 ಕೋಟಿ ಭಾರತೀಯರಿಗೆ ಹೆಮ್ಮೆಇದೆ: ಗಾಯಾಳು ಸೈನಿಕರಲ್ಲಿ ಆತ್ಮವಿಶ್ವಾಸ ತುಂಬಿದ ಮೋದಿ


       ಲೇಹ್: ಕಳೆದ ತಿಂಗಳಲ್ಲಿ ಲಡಾಖ್ ನ ಗಾಲ್ವಾನ್ ಕಣಿವೆಯಲ್ಲಿ ಚೀನಾದ ಸೈನಿಕರೊಂದಿಗೆ ನಡೆದ ಮುಖಾಮುಖಿಯ ವೇಳೆ ಗಾಯಗೊಂಡ ಭಾರತೀಯ ಯೋಧರನ್ನು ಪ್ರಧಾನಿ ಮೋದಿ ನಿನ್ನೆ ಭೇಟಿಯಾಗಿದ್ದಾರೆ. ಈ ಸಮಯದಲ್ಲಿ ಅವರು ನೆರೆರಾಷ್ಟ್ರಕ್ಕೆ ನಮ್ಮ ಯೋಧರು ಸೂಕ್ತ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.
        ಲೇಹ್‍ನ ಸೇನಾ ಆಸ್ಪತ್ರೆಯಲ್ಲಿ ಗಾಯಗೊಂಡ ಯೋಧರೊಂದಿಗೆ ಮಾತುಕತೆ  ನಡೆಸಿದ ಮೋದಿ , ಅವರ ಧೈರ್ಯವು ಭವಿಷ್ಯಕ್ಕೆ ನಮ್ಮೆಲ್ಲರ ಸ್ಪೂರ್ತಿಯ ಮೂಲವಾಗಲಿದೆ ಎಂದು ಹೇಳಿದರು.
         130 ಕೋಟಿ ಭಾರತೀಯರು ಅವರ ಬಗ್ಗೆ ಹೆಮ್ಮೆ ಪಡುತ್ತಿದ್ದಾರೆ ಎಂದು ಪ್ರಧಾನಿ ಹೇಳಿದರು. "ನಮ್ಮ ದೇಶವು ಎಂದಿಗೂ ತಲೆಬಾಗಲಿಲ್ಲ ಮತ್ತು ಯಾವುದೇ  ವಿಶ್ವದ  ಶಕ್ತಿಗೆ ತಲೆಬಾಗುವುದಿಲ್ಲ. ನಿಮ್ಮಂತಹ ಧೈರ್ಯಶಾಲಿಗಳ ಕಾರಣದಿಂದಾಗಿ ನಾನು ಇದನ್ನು ಹೇಳಲು ಸಮರ್ಥನಾಗಿದ್ದೇನೆ" ಎಂದು ಪ್ರಧಾನಿ ನರೇಂದ್ರ ಮೋದಿ  ನುಡಿದಿದ್ದಾರೆ."ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ನಾನು ಇಲ್ಲಿಗೆ ಬಂದಿದ್ದೇನೆ. ನಮ್ಮ ಭಾರತ ಸ್ವಾವಲಂಬಿಯಾಗುತ್ತದೆ. ನಮ್ಮ ದೇಶವು ಎಂದಿಗೂ ತಲೆಬಾಗಲಿಲ್ಲ ಮತ್ತು ಯಾವುದೇ ವಿಶ್ವಶಕ್ತಿಗೆ ತಲೆಬಾಗುವುದಿಲ್ಲ. ನಾನು ನಿಮಗೆ ಮತ್ತು ಜನ್ಮ ನೀಡಿದ ತಾಯಂದಿರಿಗೆ ನನ್ನ ಗೌರವಗಳನ್ನು ಅರ್ಪಿಸುತ್ತೇನೆ ನಿಮ್ಮಂತಹ ಧೈರ್ಯಶಾಲಿಗಳು. ಎಲ್ಲರೂ ಬೇಗನೆ ಗುಣಮುಖರಾಗುತ್ತಾರೆ ಎಂದು ಭಾವಿಸುತ್ತೇವೆ ""ನೀವೆಲ್ಲರೂ ಸೂಕ್ತವಾದ ಉತ್ತರವನ್ನು ನೀಡಿದ್ದೀರಿ. ನೀವು ಆಸ್ಪತ್ರೆಯಲ್ಲಿದ್ದೀರಿ, ಅದಕ್ಕಾಗಿಯೇ 130 ಕೋಟಿ ನಾಗರಿಕರು ನಿಮ್ಮ ಬಗ್ಗೆ ಹೆಮ್ಮೆ ಪಡುತ್ತಾರೆ ಎಂದು ನಿಮಗೆ ತಿಳಿದಿಲ್ಲದಿರಬಹುದು. ನೀವು ಧೈರ್ಯಶಾಲಿಗಳು ತೋರಿಸಿದ ಶೌರ್ಯದ ಬಗ್ಗೆ ಒಂದು ಸಂದೇಶವು ಜಗತ್ತಿಗೆ ರವಾನೆಯಾಗಿದೆ.  ಲೇಹ್, ಲಡಾಖ್‍ನಿಂದ ಸಿಯಾಚಿನ್ ಮತ್ತು ಕಾರ್ಗಿಲ್ ವರೆಗೆ ಗಲ್ವಾನ್ ನ ಹಿಮ ಹಾಗೂ ನೀರು . ಪ್ರತಿ ಪರ್ವತ, ಪ್ರತಿ ಶಿಖರವು ಭಾರತೀಯ ಸೈನಿಕರ ಶೌರ್ಯಕ್ಕೆ ಸಾಕ್ಷಿಯಾಗಿದೆ. ವಿಸ್ತರಣೆಯ ಯುಗವು ಮುಗಿದಿದೆ, ಇದು ಅಭಿವೃದ್ಧಿಯ ಯುಗವಾಗಿದೆ. ಇತಿಹಾಸವು ಇದಕ್ಕೆ ಸಾಕ್ಷಿಯಾಗಿದೆ ವಿಸ್ತರಣಾವಾದಿ ಶಕ್ತಿಗಳು ಹಿಂದೆಸರಿಯಬೇಕಾಗಿದೆ. ಈ ಪ್ರದೇಶದಲ್ಲಿ ಪ್ರತ್ಯೇಕತಾವಾದವನ್ನು ಸೃಷ್ಟಿಸುವ ಎಲ್ಲ ಪ್ರಯತ್ನಗಳನ್ನು ಲಡಾಖ್ ಜನರು ತಿರಸ್ಕರಿಸಿದ್ದಾರೆ ಎಂದು ಪ್ರಧಾನಿ ಹೇಳಿದರು.
      "ನಮ್ಮನ್ನು ಅಗಲಿದ ಧೈರ್ಯಶಾಲಿ ಯೋಧರು ಕಾರಣವಿಲ್ಲದೆ ಹುತಾತ್ಮರಾದವರಲ್ಲ. ನೀವೆಲ್ಲರೂ ಒಟ್ಟಾಗಿ ಸೂಕ್ತ ಉತ್ತರ ಕೊಟ್ಟಿದ್ದೀರಿ. (ಕರಾರಾ ಜವಾಬ್ ಭೀ ದಿಯಾ ಹೈ) " ಪ್ರಧಾನಿ ಮೋದಿ ಯೋಧರಲ್ಲಿ ಆತ್ಮವಿಶ್ವಾಸ ಮೂಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries