ಕಾಸರಗೋಡು: ಇಂದಿನಿಂದ( ಜು.16) ಅತೀವ ಜಾಗೃತಿಯೊಂದಿಗೆ ಕಿಂಸ್ ಪರೀಕ್ಷೆ ಕಾಸರಗೋಡು ಜಿಲ್ಲೆಯ 7 ಕೇಂದ್ರಗಳಲ್ಲಿ ನಡೆಯಲಿದೆ. ಇತರ ರಾಜ್ಯಗಳಿಂದ ತಲಪ್ಪಾಡಿಗೆ ಆಗಮಿಸುವ ಮಂದಿಗೆ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗಿದೆ. ಪರೀಕ್ಷೆಗೆ ಹಾಜರಾಗುವವರು ಆರೋಗ್ಯ ಇಲಾಖೆಯ ಕಟ್ಟುನಿಟ್ಟು ಕಡ್ಡಾಯವಾಗಿ ಪಾಲಿಸಬೇಕು. ಕಾಸರಗೋಡು ನಗರಸಭೆಯ 4 ಕೇಂದ್ರಗಳು, ಚೆಂಗಳ ಪಂಚಾಯತ್ ನ 2 ಕೆಂದ್ರಗಳು, ಚೆಮ್ನಾಡ್ ಪಂಚಾಯತ್ ನ ಒಂದು ಕೇಂದ್ರ ಗಳಲ್ಲಿ ಕಿಂಸ್ ಪರೀಕ್ಷೆ ನಡೆಯಲಿದೆ. ಪರೀಕ್ಷೆ ನಡೆಯುವ ಸಂಬಂಧ ಎಲ್ಲ ಸಿದ್ಧತೆ ಪೂರ್ಣಗೊಂಡಿವೆ ಎಂದು ಜಿಲ್ಲಾಧಿಕಾರಿ ತಿಳಿಸಿರುವರು.
14 ದಿನಗಳಿಗೆ ಸಭೆ ಸೇರಲು ನಿಷೇಧ:
ಸರಕಾರಿ ಕಚೇರಿಗಳಲ್ಲಿ ನಡೆಸುವ ಎಲ್ಲ ಸಭೆಗಳನ್ನೂ 14 ದಿನಗಳ ಕಾಲ ನಿಲುಗಡೆ ಮಾಡುವಂತೆ ಜಿಲ್ಲಾ ಮಟ್ಟದ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ. ಹಿಯರಿಂಗ್ ಸಹಿತ ಜಿಲ್ಲೆಯ ಎಲ್ಲ ಸಭೆಗಳು ಈ ಅವಧಿಯಲ್ಲಿ ಇರುವುದಿಲ್ಲ.
17 ರಿಂದ ಸಾರ್ವಜನಿಕ ಸಂಚಾರ ನಿಯಂತ್ರಣ :
ಜು.17ರಿಂದ ಸಾರ್ವಜನಿಕ ಸಂಚಾರ ನಿಯಂತ್ರಣ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೆ ಬರಲಿದೆ. ತೆಂಕಣ ಜಿಲ್ಲೆಯ ಗಡಿ ವರೆಗೆ ಈ ನಿಯಂತ್ರಣ ಇರುವುದು. ಕೆ.ಎಸ್.ಆರ್.ಟಿ.ಸಿ. ಬಸ್, ಖಾಸಗಿ ಬಸ್ ಸೇವೆ ನಡೆಸುವಂತಿಲ್ಲ ಎಂದು ನಿರ್ಧರಿಸಲಾಗಿದೆ.
31 ವರೆಗೆ ಕರ್ನಾಟಕದಿಂದ ತರಕಾರಿ ತರಕೂಡದು
ಜು.31 ವರೆಗೆ ಕಾಸರಗೋಡು ಜಿಲ್ಲೆಗೆ ಕರ್ನಾಟಕದಿಂದ ಹಣ್ಣು, ತರಕಾರಿ ವಾಹನಗಳ ಮೂಲಕ ರವಾನಿಸಕೂಡದು. ಈ ಸಂದರ್ಭ ಜಿಲ್ಲೆಯಲ್ಲಿ ತರಕಾರಿ ಕೊರತೆ ನಡೆಯದಂತೆ ಖಚಿತತೆ ನಡೆಸಲು ಕೃಷಿ ಇಲಾಖೆ ಮೂಲಕ ಕೃಷಿಕರಿಂದ ತರಕಾರಿ ಖರೀದಿಸಿ, ಮಾರಾಟ ನಡೆಸಲಾಗುವುದು. ಡೈಲಿ ಪಾಸ್ ನಿಲುಗಡೆ ಮಾಡಲಾಗಿದೆ.
ಆನಿವಾಸಿಗಳಿಗೆ ಕೋವಿಡ್ ಟೆಸ್ಟ್:
ವಿದೇಶಗಳಿಗೆ ಮರಳುವ ಆನಿವಾಸಿಗಳಿಗೆ ಕೋವಿಡ್ ಟೆಸ್ಟ್ ಸೌಲಭ್ಯಕ್ಕಾಗಿ ಕಣ್ಣೂರು ಜಿಲ್ಲೆಯ ಎರಡು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಕಚೇರಿಗಳಿಗೆ ಜನ ಸಂದರ್ಶನವಿಲ್ಲ:
ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸೇವೆಗಳು ಆನ್ ಲೈನ್ ಮೂಲಕ ನಡೆಯಲಿದೆ. "ಎಂಡೆ ಜಿಲ್ಲ" ಆಪ್ ನಲ್ಲಿ ಸಿಬ್ಬಂದಿಯ ದೂರವಾಣಿ ನಂಬ್ರಗಳು ಲಭ್ಯವಿವೆ. ಜನ ಇದರ ಸದುಪಯೋಗ ಪಡಿಸಬಹುದು.
ವೆಳ್ಳರಿಕುಂಡ್ ನಿರ್ಮಲಗಿರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಟಲರಸ ಸಂಗ್ರಹ ಕೇಂದ್ರ ಆರಂಭಕ್ಕೆ ಅನುಮತಿ ನೀಡಲಾಗಿದೆ.
ಮೀನುಗಾರಿಕೆಗೆ ನಿಯಂತ್ರಣ:
ಜು.17 ವರೆಗೆ ಮೀನುಗಾರಿಕೆ ನಿಯಂತ್ರಣ ಜಾರಿಯಲ್ಲಿರುವುದು. ಟೋಕನ್ ಪ್ರಕಾರ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಬಹುದು. ಆದರೆ ಹರಾಜು ನಡೆಸುವಂತಿಲ್ಲ.
ಬಾರ್ಬರ್ ಶಾಪ್ ಗಳಲ್ಲಿ ಮಾಸ್ಕ್, ಗ್ಲೌಸ್, ಸಾನಿಟೈಸರ್ ಕಡ್ಡಾಯ. ಕಟ್ಟುನಿಟ್ಟು ಉಲಂಘಿಸಿದರೆ ಕಠಿನಕ್ರಮ ಕೈಗೊಳ್ಳಲಾಗುವುದು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಪಂಚಾಯತ್, ನಗರಸಭೆ ಮಟ್ಟದಲ್ಲಿ ನಿಯಂತ್ರಣ ಹೇರುವ ವೇಳೆ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಮತ್ತು ಕೊರೋನಾ ಕೋರ್ ಸಮಿತಿ ಸಭೆಗಳ ತೀರ್ಮಾನ ಪ್ರಕಾರ ನಡೆಸಬೇಕು ಎಂದು ಸಭೆ ತಿಳಿಸಿದೆ. ಜನಜೀವನಕ್ಕೆ ತಡೆಯಾಗುವಂಥಾ ಕ್ರಮ ಕೈಗೊಳ್ಳಬಾರದು.
ವಿಶೇಷ ಹೊಣೆ ಹೊಂದಿರುವ ಶಿಶು ಅಭಿವೃದ್ಧಿ ಇಲಾಖೆ ನಿರ್ದೇಸಕಿ ಟಿ.ವಿ.ಅನುಪಮಾ, ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಡಿ.ಡಿ.ಇ. ಕೆ.ಪುಷ್ಪಾ, ವಲಯ ಕಂದಾಯಾಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಪಿ.ವಿ.ಸತೀಶ್, ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.


