ಕಾಸರಗೋಡು: ಜಿಲ್ಲೆಯ ಸ್ಥಿತಿ ಅತೀವ ಗಂಭೀರವಾಗಿದೆ. ಸಂಪರ್ಕ ಮೂಲಕ ಕೋವಿಡ್ ಹೆಚ್ಚುವರಿ ಮಂದಿಗೆ ಹರಡುತ್ತಿದೆ. ಇದೇ ಸ್ಥಿತಿ ಮುಂದುವರಿದರೆ ಇನ್ನೂ ಅಧಿಕ ಪ್ರಮಾಣದಲ್ಲಿ ರೋಗ ಬಾಧೆಯ ಭೀತಿಯಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
ಬುಧವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೊರೋನಾ ಕೋರ್ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ವೆಂಟಿಲೇಟರ್ ಗಳ ಕೊರತೆ:
ಕಾಸರಗೋಡು ಜಿಲ್ಲೆಯಲ್ಲಿ ವೆಂಟಿಲೇಟರ್ ಗಳ ಕೊರತೆ ತೀವ್ರ ಸಮಸ್ಯೆಯಾಗಿದೆ. ಗಂಭೀರ ಸ್ಥಿತಿಯ ರೋಗಿಗಳು ಉಸಿರಾಟ ತೋಂದರೆಯಿಂದ ಕೊನೆಯುಸಿರೆಳೆಯುತ್ತಿರುವ ದುಸ್ಥಿತಿ ಜಗತ್ತಿನ ಎಲ್ಲೆಡೆ ಕಂಡುಬರುತ್ತಿದೆ. ವೆಂಟಿಲೇಟರ್ ಪ್ರವೇಶಿಸಿದ ರೋಗಿಗಳು ಬದುಕುಳಿಯುವ ಸ್ಥಿತಿ ಅಪೂರ್ವವಾಗಿದೆ. ತೀವ್ರ ಜಾಗ್ರತೆ ಪಾಲಿಸಬೇಕಾದ ಸಮಯ ಇದಾಗಿದೆ. ಯಾವುದೇ ವಯೋಮಾನದ ಮಂದಿ ರೋಗಬಾಧೆಗೊಳಗಾಗುತ್ತಿರುವುದು ಗಣನೆಯಲ್ಲಿ ಸ್ಪಷ್ಟವಾಗುತ್ತಿದೆ. ಇದನ್ನು ಸಾರ್ವಜನಿಕರು ಗಂಭೀರವಾಗಿ ಸ್ವೀಕರಿಸಬೇಕು. ಯಾವ ಕಾರಣಕ್ಕೂ ಗುಂಪು ಕೂಡುವುದು ಸಹಿತ ಕಟ್ಟುನಿಟ್ಟುಗಳ ಉಲ್ಲಂಘನೆ ನಡೆಸಕೂಡದು. ಆದೇಶ ಉಲ್ಲಂಘನೆ ನಡೆಸಿದವರ ವಿರುದ್ಧ ಕಠಿಣಕ್ರಮಕೈಗೊಳ್ಳಲಾಗುವುದು ಎಂದವರು ತಿಳಿಸಿದರು.
ಅಂಗಡಿಗಳು ಬೆಳಗ್ಗೆ 8ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ:
ಜು.17ರಿಂದ ಕಾಸರಗೋಡು ಜಿಲ್ಲೆಯಲ್ಲಿ ಅಂಗಡಿಗಳು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯರಿಸಲು ಅನುಮತಿಯಿರುವುದು.
ರಾಷ್ಟ್ರೀಯ ಹೆದ್ದಾರಿ ಬದಿ ಪ್ರದೇಶಗಳು ಕಂಟೈ ನ್ಮೆಂಟ್ ಝೋನ್ ಗಳು:
ಕುಂಬಳೆಯಿಂದ ತಲಪ್ಪಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಗಳಾಗಿ ಜಿಲ್ಲಾಧಿಕಾರಿ ಘೋಷಿಸಿದರು. ರೋಗಿಗಳು ಅತ್ಯಧಿಕ ಪ್ರಮಾಣದಲ್ಲಿದ್ದು, ರೋಗ ಹೆಚ್ಚಳವೂ ಈ ಪ್ರದೇಶದಲ್ಲಿ ಕಂಡುಬರುತ್ತಿದೆ. ಇಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಲಿವೆ. ಬ್ಯಾಂಕ್ ಗಳು ಈ ಝೋನ್ ಪ್ರದೇಶಗಳಲ್ಲಿ ಚಟುವಟಿಕೆ ನಡೆಸಬಹುದು. ಆದರೆ ಜನ ಪ್ರವೇಶಿಸುವುದಕ್ಕೆ ಅನುಮತಿಯಿಲ್ಲ. ಎಲ್ಲ ಸೇವೆಗಳೂ ಆನ್ ಲೈನ್ ಮೂಲಕ ಮಾತ್ರ ನಡೆಸಬೇಕು. ಈ ಝೊನ್ ಗಳಲ್ಲಿ ಹೆಚ್ಚುವರಿ ಪೆÇಲೀಸರ ನೇಮಕ ನಡೆಯಲಿದೆ. ಅನಗತ್ಯ ಸಂಚಾರ ತಡೆ ಸಹಿತ ಕಟ್ಟುನಿಟ್ಟು ಬಿಗಿಯಾಗಿರುವುದು. ರಾ.ಹೆದ್ದಾರಿ ಕಾಸರಗೋಡಿನಿಂದ ತಲಪ್ಪಾಡಿಯ ವರೆಗೂ ನಿಯಂತ್ರಣದಲ್ಲಿದ್ದು ಸಂಚಾರ ನಿಷೇಧ ಇರುವುದು.