ಕಾಸರಗೋಡು: ಜಿಲ್ಲೆಯಲ್ಲಿ ಬುಧವಾರ 74 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು. ಬುಧವಾರ ಹಠಾತ್ ಕೋವಿಡ್ ಬಾಧಿತರ ಸಂಖ್ಯೆಯಲ್ಲಿ ಏರಕೆಯಾಗಿರುವುದು ತೀವ್ರ ಕಳವಳಕ್ಕೆ ಕಾರಣವಾಗಿದ್ದು, ತಕ್ಷಣಕ್ಕೆ ಜಾರಿಗೆ ಬರುವಂತೆ ಕಾನೂನು ನಿಯಂತ್ರಣ ಜಾರಿಗೊಳಿಸಲಾಗಿದೆ.
ಸಂಪರ್ಕ ಮೂಲಕ ಸೋಂಕು:
ಚೆಂಗಳ ಪಂಚಾಯತ್ ನ 32, 29 ವರ್ಷದ ನಿವಾಸಿಗಳು(ಇವರಿಗೆ ಪಾಸಿಟಿವ್ ರೋಗಿಯಿಂದ ಸಂಪರ್ಕ ತಗುಲಿದೆ), ಪ್ರಾಥಮಿಕ ಸಂಪರ್ಕ ಮೂಲಕ 47,75,44,20,22,48,22,53,24,29 ವರ್ಷದ ಪುರುಷರು, 51,26,51,40,35,45,42,17 ವರ್ಷದ ಮಹಿಳೆಯರು, 2,9, 14,15,13,8,15 ವರ್ಷದ ಮಕ್ಕಳು, 33 ವರ್ಷದ ವ್ಯಕ್ತಿ(ಇವರಿಗೆ ಆರೋಗ್ಯ ಕಾರ್ಯಕರ್ತೆಯೊಬ್ಬರಿಂದ ಸೋಂಕು ತಗುಲಿದೆ).
ಕಾಸರಗೋಡು ನಗರಸಭೆ ವ್ಯಾಪ್ತಿಯ 19 ವರ್ಷದ ಯುವಕ( ತರಕಾರಿ ಅಂಗಡಿಯೊಂದಕ್ಕೆ ತೆರಳಿದ್ದರು.), 13 ವರ್ಷದ ಬಾಲಕ, ಮೊಗ್ರಾಲ್ ಪುತ್ತೂರಿನ 32 ವರ್ಷದ ನಿವಾಸಿ ಮಹಿಳೆ(ಇವರು ಕಾಸರಗೋಡು ನಗರದಲ್ಲಿ ಸ್ಟೇಷನರಿ ಅಂಗಡಿಯೊಂದರ ನೌಕರೆ), ಮಧೂರು ಗ್ರಾಮಪಂಚಾಯತ್ ನ 64,34,22, 27,36 ವರ್ಷದ ಪುರುಷರು, 51,26 ವರ್ಷದ ಮಹಿಳೆಯರು, 7,6, ವರ್ಷದ ಗಂಡು ಮಕ್ಕಳು.
ಮಂಜೇಶ್ವರ ಪಂಚಾಯತ್ ನ 34 ವರ್ಷದ ವ್ಯಕ್ತಿ, ( ಹೊಸಂಗಡಿಯಲ್ಲಿ ವಾಹನ ಚಾಲಕ), 35 ವರ್ಷದ ವ್ಯಕ್ತಿ(ಕಾಸರಗೋಡಿನ ಬ್ಯಾಂಕ್ ಶಾಖೆಯೊಂದರ ಸೆಕ್ಯೂರಿಟಿ ಸಿಬ್ಬಂದಿ), 28 ವರ್ಷದ ವ್ಯಕ್ತಿ(ಲಾಟರಿ ಮಾರಾಟಗಾರ), 46,35,32 ವರ್ಷದ ವ್ಯಕ್ತಿಗಳು(ಹೊಸಂಗಡಿಯ ಕೂಲಿಕಾರ್ಮಿಕರು), 43 ವರ್ಷದ ವ್ಯಕ್ತಿ (ಮಂಜೇಶ್ವರದ ಗುತ್ತಿಗೆ ಕಾರ್ಮಿಕ),21 ವರ್ಷದ ವ್ಯಕ್ತಿ(ವೆಲ್ಡರ್).
ಕುಂಬಳೆ ಪಂಚಾಯತ್ ನ 31,36 ವರ್ಷದ ಪುರುಷರು, ಮುಳಿಯರು ಪಂಚಾಯತ್ ನ 54,28 ವರ್ಷದ ಮಹಿಳೆಯರು, ಚೆರುವತ್ತೂರು ಪಂಚಾಯತ್ ನ 42 ವರ್ಷದ ಮಹಿಳೆ(ಆರೋಗ್ಯ ಕಾರ್ಯಕರ್ತೆ), ಮೀಂಜ ಪಚಾಯತ್ ನ 32 ವರ್ಷದ ವ್ಯಕ್ತಿ(ವೆಲ್ಡರ್) ಸೋಂಕು ಬಾಧಿತರು.
ಇತರ ರಾಜ್ಯಗಳಿಂದ ಬಂದವರು:
ಮಂಗಳೂರಿನಿಂದ ಬಂದಿದ್ದ ಚೆಂಗಳ ಪಂಚಾಯತ್ ನ 38 ವರ್ಷದ ವ್ಯಕ್ತಿ, ಮಂಜೇಶ್ವರ ಪಂಚಾಯತ್ ನ 30, 19,25,28.39 ವರ್ಷದ, ಕಾರಡ್ಕ ಪಂಚಾಯತ್ ನ 18, ಕುಂಬಳೆ ಪಂಚಾಯತ್ನ 23 ವರ್ಷದ ವ್ಯಕ್ತಿಗಳು, ಚೆನೈಯಿಂದ ಬಂದಿದ್ದ ತ್ರಿಕರಿಪುರ ಪಂಚಾಯತ್ನ 58 ವರ್ಷದ ವ್ಯಕ್ತಿ, ಮುಂಬಯಿಯಿಂದ ಆಗಮಿಸಿದ 34 ವರ್ಷದ ವ್ಯಕ್ತಿ, ಕರ್ನಾಟಕದಿಂದ ಬಂದಿದ್ದ 5 ವರ್ಷದ ಬಾಲಕಿ, ಮಹಾರಾಷ್ಟ್ರ ದಿಂದ ಆಗಮಿಸಿದ ಮಂಗಲ್ಪಾಡಿ ಪಂಚಾಯತ್ ನ 40 ವರ್ಷದ ವ್ಯಕ್ತಿ ಇವರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ವಿದೇಶದಿಂದ ಆಗಮಿಸಿದವರು:
ದುಬಾಯಿಯಿಂದ ಬಂದಿದ್ದ ಮಂಗಲ್ಪಾಡಿ ಪಂಚಾಯತ್ ನ 30 ವರ್ಷದ ವ್ಯಕ್ತಿ, ಅಜಾನೂರು ಪಂಚಾಯತ್ ನ 39 ವರ್ಷದ ವ್ಯಕ್ತಿ, ವರ್ಕಾಡಿ ಪಂಚಾಯತ್ ನ 19 ವರ್ಷದ ವ್ಯಕ್ತಿ, ಶಾರ್ಜಾದಿಂದ ಆಗಮಿಸಿದ್ದ ಅಜಾನೂರು ಪಂಚಾಯತ್ ನ 31 ವರ್ಷದ ವ್ಯಕ್ತಿ, ಖತಾರ್ ನಿಂದ ಬಂದಿದ್ದ ಉದುಮಾ ಪಂಚಾಯತ್ ನ 30 ವರ್ಷದ ವ್ಯಕ್ತಿ, ಅಬುದಾಭಿಯಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನ 36 ವರ್ಷದ ನಿವಾಸಿ ಇವರಿಗೆ ಸೋಂಕು ಖಚಿತವಾಗಿದೆ.
ಜಿಲ್ಲೆಯಲ್ಲಿ 6296 ಮಂದಿ ನಿಗಾದಲ್ಲಿ:
ಕೋವಿಡ್ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 6296 ಮಂದಿ ಬುಧವಾರ ನಿಗಾದಲ್ಲಿದ್ದಾರೆ. ಇವರಲ್ಲಿ ಮನೆಗಳಲ್ಲಿ5517 ಮಂದಿ, ಸಾಂಸ್ಥಿಕ ನಿಗಾದಲ್ಲಿ 779 ಮಂದಿ ಇದ್ದಾರೆ. ನೂತನವಾಗಿ 520 ಮಂದಿ ನಿಗಾ ಪ್ರವೇಶಿಸಿದ್ದಾರೆ. 541 ಮಂದಿ ಬುಧವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 340 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 1124 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ.


