HEALTH TIPS

ಹೇರಾಮ್..ಇನ್ನು ಕಲಿಯೋದು ಯಾವಾಗ!?-ಎಲ್ಲೆಂದರಲ್ಲಿ ಮಾಸ್ಕ್, ಗ್ಲೌಸ್ ಎಸೆತ, ಪಿಪಿಇ ಕಿಟ್ ಗಳು: ಕೋವಿಡ್-19 ಜೊತೆಗೆ ಪರಿಸರಕ್ಕೂ ತೀವ್ರ ಹಾನಿ

 
             ನವದೆಹಲಿ: ಇಂದಿನ ಕೋವಿಡ್-19 ಪರಿಸ್ಥಿತಿಯಲ್ಲಿ ಆರೋಗ್ಯ ಮತ್ತು ಸುರಕ್ಷತೆ ಜನರ ಬಹುಮುಖ್ಯ ಕಾಳಜಿಯಾಗಿದೆ. ಕೋವಿಡ್-19 ವೈರಾಣುವಿನಿಂದ ರಕ್ಷಿಸಿಕೊಳ್ಳಲು ವೈದ್ಯರು, ದಾದಿಯರು, ಆರೋಗ್ಯ ಕಾರ್ಯಕರ್ತರು ಬಳಸುತ್ತಿರುವ ಪಿಪಿಇ ಕಿಟ್ ಗಳು, ಗ್ಲೌಸ್, ಮಾಸ್ಕ್, ಶೂ ಕವರ್ ಗಳು ಇಂದು ಪರಿಸರಕ್ಕೆ ಭಾರೀ ಹಾನಿಕಾರಕವಾಗಿ ಪರಿಣಮಿಸುತ್ತಿದೆ. ಇವುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗುತ್ತಿದ್ದು ಸರಿಯಾದ ನಿರ್ವಹಣೆಯಿಲ್ಲದೆ ಕೋವಿಡ್-19 ಜೊತೆಗೆ ಇವುಗಳು ಕೂಡ ಸೇರಿ ಪರಿಸರ ನಾಶ ಮಾಡುವ ಸಮಯ ದೂರವಿಲ್ಲ ಎನ್ನುತ್ತಾರೆ ಪರಿಸರವಾದಿಗಳು. ಜಗತ್ತಿನಾದ್ಯಂತ ವೈರಸ್ ಉಂಟುಮಾಡಿರುವ ಕಳವಳ, ಬೇಗುದಿಗಳನ್ನು ಇನ್ನಾದರೂ ಅರ್ಥ ಮಾಡಿಕೊಳ್ಳದಿದ್ದರೆ ಏನೆನ್ನೋಣ ಎನ್ನುವುದು ಪ್ರಶ್ನೆಯಾಗಿ ಕಾಡುತ್ತಿದೆ.
              ಪಿಪಿಇ ಕಿಟ್ ಗಳನ್ನು ಕೋವಿಡ್-19 ವಿರುದ್ಧ ಹೋರಾಟದಲ್ಲಿ ತೊಡಗಿಸಿಕೊಂಡವರು ಬಳಸದೆ ಬೇರೆ ಮಾರ್ಗವಿಲ್ಲ. ಆದರೆ ಅವುಗಳನ್ನು ಪ್ರತಿದಿನ ವಿತರಣೆ  ಮಾಡಬೇಕು,ರಾಜಧಾನಿ ದೆಹಲಿ ಸೇರಿದಂತೆ ಬಹುತೇಕ ದೊಡ್ಡ ನಗರಗಳಲ್ಲಿ ಇವುಗಳನ್ನು ಬಳಕೆ ಮಾಡಿ ಎಸೆದ ನಂತರ ಅವುಗಳನ್ನು ಸರಿಯಾಗಿ ವಿಲೇವಾರಿ ಮಾಡದಿರುವುದು ಸ್ವಚ್ಛತಾ ಕಾರ್ಯಗಳಲ್ಲಿ ತೊಡಗಿರುವ ಕಾರ್ಮಿಕರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ.ಬಳಕೆ ಮಾಡಿದ ಈ ಪಿಪಿಇ ಕಿಟ್ ಗಳು, ಮಾಸ್ಕ್, ಗ್ಲೌಸ್ ಇತ್ಯಾದಿಗಳನ್ನು ಶೇಕಡಾ 70ರಷ್ಟು ಮಾತ್ರ ಸುಟ್ಟು ಹಾಕಲಾಗುತ್ತಿದ್ದು, ಉಳಿದವು ಪರಿಸರದ ಮೇಲೆ ತೀವ್ರ ಹಾನಿಯನ್ನುಂಟುಮಾಡುತ್ತಿವೆ ಎನ್ನುತ್ತಾರೆ ದೆಹಲಿ ಮೂಲದ ತ್ಯಾಜ್ಯ ನಿರ್ವಹಣೆ ತಜ್ಞೆ ಸ್ವಾತಿ ಸಿಂಗ್.
        ಆಸ್ಪತ್ರೆಗಳ ಹೊರಗೆ, ರಸ್ತೆಗಳ ಮೇಲೆ ಎಲ್ಲೆಂದರಲ್ಲಿ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಗಳನ್ನು ಎಸೆಯಲಾಗುತ್ತದೆ. ಮನೆಗಳಲ್ಲಿ ಇವುಗಳನ್ನು ಪ್ರತ್ಯೇಕ ಕಸವನ್ನಾಗಿ ಮಾಡಿ ವಿಲೇವಾರಿ ಮಾಡುವ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿಲ್ಲ, ಕಸ ತೆಗೆದುಕೊಂಡು ಹೋಗುವವರು ಅವುಗಳನ್ನು ಮನೆಗಳಿಂದ ಸಂಗ್ರಹಿಸಿ ಪ್ರತ್ಯೇಕಿಸಬೇಕಾಗುತ್ತದೆ. ಇದರಿಂದ ಸೋಂಕು ಹರಡುವ ಸಾಧ್ಯತೆಯಿದೆ. ಜನದಟ್ಟಣೆ ಇರುವ ನಗರಗಳಂತಹ ಪ್ರದೇಶಗಳಲ್ಲಿ ಇದರಿಂದ ಸೋಂಕು ಬೇಗನೆ ಹಬ್ಬುವ ಸಾಧ್ಯತೆಯಿದೆ ಎಂದು ಅವರು ಹೇಳುತ್ತಾರೆ.
      ಇದರಿಂದ ಮುಂಬರುವ ದಿನಗಳಲ್ಲಿ ಪರಿಸರ ಹಾನಿಯಾಗಿ ತೀವ್ರ ಮಟ್ಟದಲ್ಲಿ ಮತ್ತೊಂದು ಆರೋಗ್ಯ ಸಮಸ್ಯೆ ತಲೆದೋರಬಹುದು ಎಂಬುದು ಪರಿಸರ ಪ್ರೇಮಿಗಳ ಅಭಿಪ್ರಾಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries