HEALTH TIPS

ಕೋವಿಡ್​-19 ಲಸಿಕೆ ಸಿದ್ಧವಾಗುತ್ತಲೇ ಭಾರತಕ್ಕೆ ತರಲಿದೆ ರಿಲಯನ್ಸ್​ ಇಂಡಸ್ಟ್ರೀಸ್

        ನವದೆಹಲಿ: ವಿಶ್ವದಲ್ಲಿ ಕೋವಿಡ್-19 ಲಸಿಕೆ ಎಲ್ಲೇ ತಯಾರಾಗಲಿ, ಅದು ತಯಾರಾಗುತ್ತಲೇ ಅದನ್ನು ರಿಲಯನ್ಸ್ ಸಂಸ್ಥೆ ಭಾರತದಲ್ಲಿ ತಯಾರಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ನ ನಿರ್ದೇಶಕಿ ನೀತಾ ಅಂಬಾನಿ ಹೇಳಿದ್ದಾರೆ.
              ರಿಲಯನ್ಸ್ ಇಂಡಸ್ಟ್ರೀಸ್ ನ ನಿರ್ದೇಶಕಿ ಆಗಿರುವ ಅವರು ಗುರುವಾರ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು.
         ಕೋವಿಡ್-19 ಲಸಿಕೆ ಸಿದ್ಧವಾಗುತ್ತಲೇ ಭಾರತದಲ್ಲಿ ಅಗತ್ಯ ಇರುವವರಿಗೆಲ್ಲ ಆ ಚುಚ್ಚುಮದ್ದು ತಲುಪುವಂತೆ ರಿಲಯನ್ಸ್ ಮಾಡಲಿದೆ ಎಂದು ಹೇಳಿದರು. ರಾಷ್ಟ್ರದಲ್ಲಿ ಕೊರೊನಾ ಪಿಡುಗು ಹಬ್ಬುತ್ತಲೇ ರಿಲಯನ್ಸ್ ಸಂಸ್ಥೆ ಮುಂಬೈನಲ್ಲಿ ಕೋವಿಡ್-19 ವಿಶೇಷ ಆಸ್ಪತ್ರೆಗೆ ತೆಗೆದು 100 ಹಾಸಿಗೆಗಳನ್ನು ವ್ಯವಸ್ಥೆಗೊಳಿಸಿತು. ನಮ್ಮ ಆಸ್ಪತ್ರೆಯ ವೈದ್ಯರು ಮತ್ತು ಶುಶ್ರೂಷಕಿಯರು ನಿಸ್ವಾರ್ಥವಾಗಿ ಮತ್ತು ನಿರಂತರವಾಗಿ ಸೇವೆ ಸಲ್ಲಿಸುವ ಮೂಲಕ ಜನರ ರಕ್ಷಣೆಗೆ ಶ್ರಮಿಸುತ್ತಿದ್ದಾರೆ ಎಂದರು.
        ಕೊರೊನಾ ಸೋಂಕು ಹೆಚ್ಚಾದ ಸಂದರ್ಭದಲ್ಲಿ ದೇಶದಲ್ಲಿ ಪಿಪಿಇ ಕಿಟ್ ಗಳ ಕೊರತೆ ಎದುರಾಗಿತ್ತು. ಇದರ ಉತ್ಪಾದನೆ ಬಹುದೊಡ್ಡ ಸವಾಲಾಗಿತ್ತು. ನಮ್ಮ ಉತ್ಪಾದನಾ ಘಟಕಗಳಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಂಡು ಪಿಪಿಇ ಕಿಟ್ ಗಳ ಜೊತೆಗೆ ಎನ್-95 ಮಾಸ್ಕ್ ಗಳ ಉತ್ಪಾದನೆಯನ್ನೂ ಹೆಚ್ಚಿಸಲಾಯಿತು. ಇದೆಲ್ಲವನ್ನೂ ದಾಖಲೆಯ ಸಮಯದೊಳಗೆ ಮಾಡಲಾಯಿತು ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries