HEALTH TIPS

ಕೇರಳ ಲಾಕ್ ಡೌನ್ ನಡುವೆ ಪ್ರವೇಶ ಪರೀಕ್ಷೆ; ಅಂತರ ಮರೆತ ವಿದ್ಯಾರ್ಥಿಗಳು

     
          ತಿರುವನಂತಪುರ: ಕೊರೊನಾವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ಬಾರಿ ಬಾರಿ ಹೇಳಿದರೂ ಕೇಂದ್ರ ಸರ್ಕಾರದ ಸೂಚನೆ ಬಗ್ಗೆ ಸಾರ್ವಜನಿಕರು ಕ್ಯಾರೆ ಎನ್ನುತ್ತಿಲ್ಲ.
           ಕೇರಳ ಸರ್ಕಾರವು ರಾಜ್ಯಾದ್ಯಂತ ಕೆಇಎಎಂ ಪ್ರವೇಶ ಪರೀಕ್ಷೆಯನ್ನು ಗುರುವಾರ ನಡೆಸಿತು. ಈ ವೇಳೆ ಸಾಮಾಜಿಕ ಅಂತರವನ್ನು ಮರೆತು ಕಾಲೇಜ್ ಎದುರಿಗೆ ಸಾವಿರಾರು ವಿದ್ಯಾರ್ಥಿಗಳು ಮತ್ತು ಪೆÇೀಷಕರು ನೆರೆದಿರುವುದು ಇದೀಗ ಸಖತ್ ಸುದ್ದಿಯಾಗಿದೆ.
          ತಿರುವನಂತಪುರಂ ಪತ್ತೋಮ್ ನಲ್ಲಿ ಇರುವ ಕೇರಳ ಆರ್ಕಿಟೆಕ್ಟರ್ ಮೆಡಿಕಲ್(ಕೆಇಎಎಂ) ಕಾಲೇಜಿನ ಪರೀಕ್ಷಾ ಕೇಂದ್ರದ ಎದುರು ಸಾವಿರಾರು ವಿದ್ಯಾರ್ಥಿಗಳು ಮತ್ತು ಪೆÇೀಷಕರು ಸರ್ಕಾರದ ಎಲ್ಲಾ ನಿಯಮಗಳನ್ನು ಗಾಳಿ ತೂರಿದ್ದರು.
                       ಪ್ರವೇಶ ಪರೀಕ್ಷೆ ಮುಗಿಯುತ್ತಿದ್ದಂತೆ ಜನಜಾತ್ರೆ:
        ಕೇರಳದ ಪತ್ತೋಮ್ ನಲ್ಲಿ ಇರುವ ಸೇಂಟ್ ಮೇರಿಸ್ ಪ್ರೌಢಶಾಲೆ ಎದುರಿನಲ್ಲೂ ಪ್ರವೇಶ ಪರೀಕ್ಷೆ ಅಂತ್ಯವಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪೆÇೀಷಕರ ಜಾತ್ರೆಯೇ ಸೇರಿತ್ತು. ಈ ವೇಳೆ ಕೇಂದ್ರ ಸರ್ಕಾರದ ಲಾಕ್ ಡೌನ್ ಮಾರ್ಗಸೂಚಿಗಳನ್ನೆಲ್ಲ ಉಲ್ಲಂಘಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಮತ್ತು ಫೆÇೀಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ.  ತಿರುವನಂತಪುರಂ ನಗರದಲ್ಲಿ ಲಾಕ್ ಡೌನ್ ಘೋಷಣೆಯಾಗಿದ್ದು, ಇದರ ನಡುವೆಯೂ ನಡೆಸಿದ ಕೆಇಎಎಂ ಪ್ರವೇಶ ಪರೀಕ್ಷೆಗಳಿಗೆ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಭದ್ರತಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪ್ರಾಧಿಕಾರವು ತಿಳಿಸಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries