ತಿರುವನಂತಪುರ: ಯುಎಇ ಕಾನ್ಸುಲೇಟ್ ಅಟ್ಯಾಚೆ, ರಾಜತಾಂತ್ರಿಕ ರಶೀದ್ ಖಮಿಸ್ ಅಲ್ ಅಶ್ಮಿಯ ಗನ್ ಮ್ಯಾನ್ ಕಾಣೆಯಾಗಿದೆ ಎಂದು ದೂರು ದಾಖಲಾಗಿದೆ. ಎಆರ್ ಕ್ಯಾಂಪ್‍ನ ಪೆÇಲೀಸ್ ಜೈ ಘೋಷ್ ನಾಪತ್ತೆಯಾಗಿದ್ದಾನೆ. ಜೈ ಘೋಷ್ ಕರಿಮನಲ್ ಮೂಲದವರು. ಗುರುವಾರದಿಂದ ಜೈ ಘೋಷ್ ಅವರನ್ನು ನೋಡಿಲ್ಲ ಎಂದು ಸಂಬಂಧಿಕರು ತುಂಪಾ ಪೆÇಲೀಸರಿಗೆ ದೂರು ನೀಡಿರುವರು.
ವತ್ತಿಯೂರ್ಕದಲ್ಲಿ ಪತ್ನಿ ಮತ್ತು ಮಕ್ಕಳೊಂದಿಗೆ ತಂಗಿದ್ದ ಜೈ ಘೋಷ್ ಗುರುವಾರ ಸಂಜೆ ಕುಟುಂಬವನ್ನು ಕರಿಮನಾಲ್‍ನಲ್ಲಿರುವ ತಮ್ಮ ಮನೆಗೆ ಸ್ಥಳಾಂತರಿಸಿರುವರು. ಜೊತೆಗೆ ತಮ್ಮ ಪರವಾನಿಗೆಯ ಪಿಸ್ತೂಲ್ ನ್ನು ವತ್ತಿಯೂರ್ಕಾವ್ ಪೆÇಲೀಸರಿಗೆ ಹಸ್ತಾಂತರಿಸಿರುವರು.
ಚಿನ್ನ ವಶಪಡಿಸಿಕೊಂಡ ದಿನವೂ ಸ್ವಪ್ನಾ ಸಂತೋಷ್ ಜೈ ಘೋಷ್ ಗೆ ಕರೆ ಮಾಡಿದ್ದ ಎಂದು ಫೆÇೀನ್ ದಾಖಲೆಗಳು ಬಹಿರಂಗಪಡಿಸಿವೆ. ಜೈ ಘೋಷ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ವಶಕ್ಕೆ ತೆಗೆದುಕೊಂಡಿದೆ ಎಂದು ಕುಟುಂಬ ಶಂಕಿಸಿದೆ. ಅವರ ಮೊಬೈಲ್ ಫೆÇೀನ್ ಸ್ವಿಚ್ ಆಫ್ ಆಗಿದೆ.
ಸಂಬಂಧಿಕರು ನೀಡಿದ ದೂರಿನ ಮೇರೆಗೆ ತುಂಬಾ ಪೆÇಲೀಸರು ಪ್ರಕರಣ ದಾಖಲಿಸಿದ್ದಾರೆ. ಪ್ರಾಥಮಿಕ ತನಿಖೆ ನಡೆಸಲಾಗಿದ್ದರೂ ಯಾವುದೇ ಮಾಹಿತಿ ಬಂದಿಲ್ಲ.


