HEALTH TIPS

ಕಿಂ ಪರೀಕ್ಷೆ : ಕಾಸರಗೋಡು ಜಿಲ್ಲೆಯಲ್ಲಿ 2137 ಮಂದಿ ಹಾಜರು


       ಕಾಸರಗೋಡು: ಜಿಲ್ಲೆಯಲ್ಲಿ ನಡೆದ ಕಿಂ(KERALA ENGINEERING AGRICULTURAL MEDICAL ENTRANCE EXAMINATION)
 ಪರೀಕ್ಷೆಗೆ 2137 ವಿದ್ಯಾರ್ಥಿಗಳು ಹಾಜರಾದರು. ಒಟ್ಟು 2640 ಮಂದಿ ಈ ಸಂಬಂಧ ನೋಂದಣಿ ನಡೆಸಿದ್ದರು. ಆದರೆ 503 ಮಂದಿ ಹಾಜರಾಗಿರಲಿಲ್ಲ. ಉತರ ರಾಜ್ಯಗಳಿಂದ ಆಗಮಿಸಿದ್ದ, ಕ್ವಾರೈಂಟೈನ್ ನಲ್ಲಿರುವ 16 ಮಂದಿ ಪರೀಕ್ಷೆ ಬರೆದಿದ್ದು, ಅವರಿಗೆ ಪ್ರತ್ಯೇಕ ವ್ಯವಸ್ಥೆ ಏರ್ಪಡಿಸಲಾಗಿತ್ತು.
       ಆರೋಗ್ಯ ಇಲಾಖೆಯ ಸುರಕ್ಷಾ ಕಟ್ಟುನಿಟ್ಟುಗಳನ್ನು ಪಾಲಿಸಿಕೊಂಡು ಈ ಪರೀಕ್ಷೆ ಜಿಲ್ಲೆಯಲ್ಲಿ ನಡೆಸಲಾಯಿತು. ಇತರ ರಾಜ್ಯಗಳಿಂದ ಆಗಮಿಸಿದವರಿಗಾಗಿ ತಲಪ್ಪಾಡಿ ಗಡಿ ಪ್ರದೇಶದಿಂದ ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ. ಬಸ್ ಸೌಲಭ್ಯ ಏರ್ಪಡಿಸಲಾಗಿತ್ತು. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 4 ಕೇಂದ್ರಗಳು, ಚೆಂಗಳ ಪಂಚಾಯತ್ ನಲ್ಲಿ 2 ಕೇಂದ್ರಗಳು, ಚೆಮ್ನಾಡ್ ಪಂಚಾಯತ್ ನಲ್ಲಿ ಒಂದು ಕೇಂದ್ರದಲ್ಲಿ ಈ ಪರೀಕ್ಷೆ ಸುಗಮವಾಗಿ ನಡೆಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries