ಕಾಸರಗೋಡು: ಅನಾಥ ಮಕ್ಕಳನ್ನು ಸ್ವಂತ ಹೆತ್ತವರಂತೆಯೇ ಮಮತೆ, ಹೊಣೆಗಾರಿಕೆಯೊಂದಿಗೆ ಸಾಕಿ, ಸಲಹಿ, ಬೆಳೆಸುವ ಪೋಷಕರು ಬೇಕಾಗಿದ್ದಾರೆ.
ಕಾಸರಗೋಡು ಚೈಲ್ಡ್ ವೆಲ್ ಫೇರ್ ಸಮಿತಿಯ ಸಂರಕ್ಷಣೆಯಲ್ಲಿ ಅಂಗೀಕೃತ ಶಿಶು ಸಂರಕ್ಷಣೆ ಸಂಸ್ಥೆಗಳಲ್ಲಿ ವಾಸಿಸುತ್ತಿರುವ ಮಕ್ಕಳನ್ನು ಸಾಕಿ, ಸಲಹುವಲ್ಲಿ ಪೋಷಕರಾಗುವ ಆಸಕ್ತರಿಂದ ಅರ್ಜಿ ಕೋರಲಾಗಿದೆ. ಸ್ವಂತ ಕುಟುಂಬದಲ್ಲಿ ಬೆಳೆಯುವ ಅವಕಾಶದಿಂದ ವಂಚಿತರಾದ ಈ ಮಕ್ಕಳನ್ನು ಕೌಟುಂಬಿಕ ವಾತಾವರಣಕ್ಕೆ ಕರೆತಂದು ಉತ್ತಮ ಪ್ರಜೆಗಳಾಗಿ ಬೆಳಸುವ ನಿಟ್ಟಿನಲ್ಲಿ ಈ ಯೋಜನೆ ಜಾರಿಗೊಳ್ಳುತ್ತಿದೆ.
ಮಹಿಳಾ ಶಿಶು ಅಭಿವೃದ್ಧಿ ಇಲಾಖೆಯ ಜಿಲ್ಲಾ ಶಿಶು ಸಂರಕ್ಷಣೆ ಘಟಕ, ಚೈಲ್ಡ್ ವೆಲ್ಫೇರ್ ಸಮಿತಿ ಜಂಟಿ ವತಿಯಿಂದ "ಪೋಸ್ಟರ್ ಕೇರ್" ಎಂಬ ಹೆಸರಿನ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಚೈಲ್ಡ್ ವೆಲ್ ಫೇರ್ ಸಮಿತಿಯ ಸಂರಕ್ಷಣೆಯಲ್ಲಿರುವ 5 ವರ್ಷಕ್ಕಿಂತ ಮೇಲ್ಪಟ್ಟ ವಯೋಮಾನದ ಗಂಡುಮಕ್ಕಳನ್ನು ಮತ್ತು ಹೆಣ್ಣುಮಕ್ಕಳನ್ನು ಈ ಯೋಜನೆ ಪ್ರಕಾರ ಅರ್ಜಿದಾರರಾದ ಪೋಷಕರು ತಮ್ಮ ನಿವಾಸಗಳಲ್ಲಿ ಸಾಕಿ, ಸಲಹಬಹುದಾಗಿದೆ.
50 ವರ್ಷಕ್ಕಿಂತ ಕೆಳಗಿನ ವಯೋಮಾನದ, ಮಕ್ಕಳ ಸಂರಕ್ಷಣೆಗೆ ಅರ್ಹತೆಯಿರುವ, ಮಕ್ಕಳಿಲ್ಲದ ದಂಪತಿ ಪೋಷಕರಾಗುವ ನಿಟ್ಟಿನಲ್ಲಿ ಅರ್ಜಿ ಸಲ್ಲಿಸಬಹುದು. ಆಸಕ್ತರು ಕಾಸರಗೋಡು ಸಿವಿಲ್ ಸ್ಟೇಷನ್ ನ ಎರಡನೇ ಅಂತಸ್ತಿನಲ್ಲಿ ಚಟುವಟಿಕೆ ನಡೆಸುತ್ತಿರುವ ಜಿಲ್ಲಾ ಶಿಶು ಸಂರಕ್ಷಣೆ ಘಟಕ ಕಚೇರಿಗೆ ಈ-ಮೇಲ್ ಮೂಲಕ ಅರ್ಜಿ ಸಲ್ಲಿಸಬಹುದು. ದೂರವಾಣಿ ಸಂಖ್ಯೆಗಳು: 04994256990, 9895982476.


