HEALTH TIPS

ಕರಾವಳಿ ರಕ್ಷಣೆ ಚಟುವಟಿಕೆಗಳಲ್ಲಿ ಮೀನುಗಾರರನ್ನು ಸ್ವಾವಲಂಬಿಗಳಾಗಿಸುವ ಯೋಜನೆ : 13 ಮಂದಿ ತರಬೇತಿ

 
     ಕಾಸರಗೋಡು: ಕರಾವಳಿ ರಕ್ಷಣೆ ಚಟುವಟಿಕೆಗಳಲ್ಲಿ ಮೀನುಗಾರರನ್ನು ಸ್ವಾವಲಂಬಿಗಳಾಗಿಸುವ ಉದ್ದೇಶದೊಂದೊಗೆ ಮೀನುಗಾರಿಕೆ ಇಲಾಖೆಯ ಯೋಜನೆ ಪ್ರಕಾರ ಕಾಸರಗೋಡು ಜಿಲ್ಲೆಯ 13 ಮಂದಿ ತರಬೇತಿ ಪಡೆದಿದ್ದಾರೆ.
     ಇಲಾಖೆಯ ನೇತೃತ್ವದಲ್ಲಿ ಸಮರ್ಥರಾದವರನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿತ್ತು. ಗೋವಾದಲ್ಲಿರುವ ಜಲಕ್ರೀಡೆ ಅಕಾಡೆಮಿಯಲ್ಲಿ 16 ದಿನಗಳ ತರಬೇತಿ ನೀಡಲಾಗಿತ್ತು. ಕಾಸರಗೋಡು ಜಿಲ್ಲೆಯಿಂದ ನೂತನವಾಗಿ 100 ಮಂದಿಯನ್ನು ಆಯ್ಕೆ ಮಾಡಲಾಗಿದ್ದು, ಅವರನ್ನು ತರಬೇತಿಗೆ ಕಳುಹುವ ಸಿದ್ಧತೆ ನಡೆಯುತ್ತಿದೆ ಎಂದು ಸಂಬಂಧಪಟ್ಟವರು ತಿಳಿಸಿದರು.
               ಸಮವಸ್ತ್ರ ವಿತರಣೆ:
   ತರಬೇತಿ ಪಡೆದ ಮೀನುಗಾರರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು. ಜಿಲ್ಲಾಧಿಕಾರಿ ಡಾ.ಡಿ. ಸಜಿತ್ ಬಾಬು ಸಮವಸ್ತ್ರ ವಿತರಣೆಗೆ ಚಾಲನೆ ನೀಡಿದರು.
     ಕೋವಿಡ್ ಪ್ರತಿರೋಧ ಸಂಹಿತೆ ಪ್ರಕಾರ ನಡೆದ ಸಮಾರಂಭದಲ್ಲಿ ಮಹಿಳಾ ಶಿಶು ಕಲ್ಯಾಣ ಇಲಾಖೆ ಉಪನಿರ್ದೇಶಕಿ ಟಿ.ವಿ.ಅನುಪಮಾ, ಮೀನುಗಾರಿಕೆ ಸಹಾಯಕ ನಿರ್ದೇಶಕ ಪಿ.ವಿ.ಸತೀಶನ್ ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries