ತಿರುವನಂತಪುರ: ಪ್ಲಸ್ ಒನ್ ಪ್ರವೇಶಾತಿ ಜುಲೈ 24 ರಿಂದ ಪ್ರಾರಂಭವಾಗಲಿದೆ ಎಂದು ಕೇರಳ ಶಿಕ್ಷಣ ಇಲಾಖೆ ತಿಳಿಸಿದೆ. ಪ್ರವೇಶವು ಹೈಯರ್ ಸೆಕೆಂಡರಿ ಕೇಂದ್ರೀಕೃತ ಪ್ರವೇಶ ಪ್ರಕ್ರಿಯೆಯ ಮೂಲಕ ನಡೆಸಲಾಗುವುದು. ವಿದ್ಯಾರ್ಥಿಗಳು ಅಕ್ಷಯ ಕೇಂದ್ರದ ಮೂಲಕ ಅರ್ಜಿ ಸಲ್ಲಿಸಬಹುದು. ಸಿಬಿಎಸ್‍ಇ, ಐಸಿಎಸ್‍ಇ ಮತ್ತು ಎಸ್‍ಎಸ್‍ಎಲ್‍ಸಿ ಸಹಿತ ಎಲ್ಲಾ ಫಲಿತಾಂಶಗಳು ಪ್ರಕಟಗೊಂಡಿರುವುದರಿಂದ ಪ್ಲಸ್ ಒನ್ ಪ್ರವೇಶ ಪ್ರಕ್ರಿಯೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಹೆಸರು, ಅಂಕಗಳ ವಿವರ ಮತ್ತು ಆಸಕ್ತಿಯ ಕಲಿಕಾ ವಿಷಯಗಳನ್ನು ಭರ್ತಿ ಮಾಡಿ, ಹೈಯರ್ ಸೆಕೆಂಡರಿ ಶಿಕ್ಷಣ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ಅಂಕಗಳ ಆಧಾರದ ಮೇಲೆ ಡೈರೆಕ್ಟರೇಟ್ ಓಫ್ ಹೈಯರ್ ಎಜುಕೇಷನ್ (ಡಿಎಚ್‍ಎಸ್)ಇ.ಅಲೋಟ್ ಮೆಂಟ್ ಪಟ್ಟಿ ಪ್ರಕಟಿಸುತ್ತದೆ. ಈ ಪ್ರಕ್ರಿಯೆಗಳ ಮೂಲಕ ವಿದ್ಯಾರ್ಥಿಗಳಿಗೆ ವಿವಿಧ ಶಾಲೆಗಳಲ್ಲಿ ತಮ್ಮ ನೆಚ್ಚಿನ ಕೋರ್ಸುಗಳಲ್ಲಿ ಪ್ರವೇಶ ನೀಡಲಾಗುವುದು.


