ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಪ್ರತಿಭಾನ್ವಿತ ಮೂವರು ವಿದ್ಯಾರ್ಥಿಗಳು 2019-20ನೇ ಸಾಲಿನಲ್ಲಿ ಕೇರಳ ಸರ್ಕಾರದ ವಿದ್ಯಾಭ್ಯಾಸ ಇಲಾಖೆಯು ನಡೆಸಿದ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ವಿದ್ಯಾರ್ಥಿವೇತನಕ್ಕೆ ಅರ್ಹತೆಯನ್ನು ಪಡೆದಿರುತ್ತಾರೆ. ಪಂಜರಿಕೆ ಅರವಿಂದ ಹಾಗೂ ಚಂದ್ರಿಕಾ ದಂಪತಿಗಳ ಪುತ್ರಿ ಉಪಾಸನಾ, ಕರಿಂಬಿಲ ವಿಶ್ವನಾಥ ಪ್ರಭು ಹಾಗೂ ಧನಲಕ್ಷ್ಮೀ ದಂಪತಿಗಳ ಪುತ್ರ ಶ್ರೀವತ್ಸ ಕೆ. ಯು.ಎಸ್.ಎಸ್. ಪರೀಕ್ಷೆಯಲ್ಲಿ ಮತ್ತು ತಿಮ್ಮಕಜೆ ಮಧುಸೂದನ ಪಿ.ವಿ. ಹಾಗೂ ವಿದ್ಯಾಶಂಕರಿ ಇವರ ಪುತ್ರಿ ಶತೋದರಿ ಎಲ್.ಎಸ್.ಎಸ್. ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘ ಅಭಿನಂದನೆಯನ್ನು ಸಲ್ಲಿಸಿದೆ.
ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ಮೂವರಿಗೆ ವಿದ್ಯಾರ್ಥಿವೇತನ
0
ಜುಲೈ 19, 2020