ಕಾಸರಗೋಡು:ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಏರಿಕೆಯಾಗುತ್ತಿದ್ದು 500 ರ ಸಹಿತ ತಲಪುತ್ತಿರುವುದು ತೀವ್ರ ಕಳವಳಕ್ಕೆ ಕಾರಣವಾಗುತ್ತಿದೆ.
ಕಾಸರಗೋಡಲ್ಲಿ ಸೋಮವಾರ ಭಾನುವಾರ ವರದಿಯಾದ ಮಟ್ಟದ ಭಯವನ್ನು ಹೋಗಲಾಡಿಸಿ 10ಕ್ಕಿಂತ ಕೆಳಕ್ಕೆ ಬಂದಿರುವುದು ಒಂದಷ್ಟು ಸಮಧಾನ ತಂದಿದೆ.
ನೀಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತ ಸಹಿತ ಜಿಲ್ಲೆಯಲ್ಲಿ ಸೋಮವಾರ 9 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 9 ಮಂದಿ ಗುಣಮುಖರಾಗಿದ್ದಾರೆ. 7 ಮಂದಿ ವಿದೇಶದಿಂದಲೂ, ಒಬ್ಬರು ಇತರ ರಾಜ್ಯದಿಂದಲೂ, ಒಬ್ಬರಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ವಿದೇಶದಿಂದ ಬಂದವರು : ಖತ್ತರ್‍ನಿಂದ ಬಂದ ಕುಂಬಳೆ ಪಂಚಾಯತ್‍ನ 58 ವರ್ಷದ ವ್ಯಕ್ತಿ, ದುಬೈಯಿಂದ ಬಂದ 30 ವರ್ಷದ ಮೊಗ್ರಾಲ್ ಪುತ್ತೂರು ನಿವಾಸಿ, 34 ವರ್ಷದ ಚೆಮ್ನಾಡ್ ಪಂಚಾಯತ್ ನಿವಾಸಿ, 22 ವರ್ಷದ ಕಾಸರಗೋಡು ನಗರಸಭೆ ನಿವಾಸಿ, 35 ವರ್ಷದ ಮುಳಿಯಾರು ಪಂಚಾಯತ್ ನಿವಾಸಿ, ಓಮಾನ್ ನಿಂದ ಬಂದ 28 ವರ್ಷದ ಕಾಸರಗೋಡು ನಗರಸಭೆ ನಿವಾಸಿ, ಸೌದಿಯಿಂದ ಬಂದ 21 ವರ್ಷದ ಚೆಂಗಳ ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಅನ್ಯರಾಜ್ಯ : ಬೆಂಗಳೂರಿನಿಂದ ಬಂದ 35 ವರ್ಷದ ಕುಂಬಳೆ ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಸಂಪರ್ಕ : ನಿಲೇಶ್ವರ ನಗರಸಭೆಯ ಆರೋಗ್ಯ ಕಾರ್ಯಕರ್ತರಾದ 54 ವರ್ಷದ ಕರಿವೆಳ್ಳೂರು ಪಂಚಾಯತ್ ನಿವಾಸಿಗೆ ರೋಗ ಬಾಧಿಸಿದೆ.
ಗುಣಮುಖರಾದವರು : ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕಾಂಞಂಗಾಡ್ ನಗರಸಭೆ ನಿವಾಸಿಗಳಾದ 25 ವರ್ಷದ ವ್ಯಕ್ತಿ ಮತ್ತು ನಾಲ್ಕು ವರ್ಷದ ಇಬ್ಬರು ಮಕ್ಕಳು, ಉದಯಗಿರಿ ಸಿ.ಎಫ್.ಎಲ್.ಟಿ.ಸಿ. ಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 30 ವರ್ಷದ ಬೇಡಡ್ಕ ಪಂಚಾಯತ್ ನಿವಾಸಿ, ತಲಶ್ಶೇರಿ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 25 ವರ್ಷದ ಪಳ್ಳಿಕೆರೆ ನಿವಾಸಿ, ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 26 ವರ್ಷದ ಕುಂಬಳೆ ಪಂಚಾಯತ್ ನಿವಾಸಿ, 40 ವರ್ಷದ ಮೀಂಜ ಪಂಚಾಯತ್ ನಿವಾಸಿ, ಪಡನ್ನಕ್ಕಾಡು ಕೋವಿಡ್ ಚಿಕಿತ್ಸೆ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 27 ವರ್ಷದ ನೀಲೇಶ್ವರ ನಗರಸಭೆ ನಿವಾಸಿ, 31 ವರ್ಷದ ಅಜಾನೂರು ಪಂಚಾಯತ್ ನಿವಾಸಿಗಳು ಗುಣಮುಖರಾಗಿದ್ದಾರೆ.
ಕೇರಳದಲ್ಲಿ 449 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಸೋಮವಾರ 449 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಿಕರಿಸಲಾಗಿದೆ. 162 ಮಂದಿ ಗುಣಮುಖರಾಗಿದ್ದಾರೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಆಲಪ್ಪುಳ-119, ಪಾಲ್ಘಾಟ್-19, ಕಾಸರಗೋಡು-9, ಎರ್ನಾಕುಳಂ-15, ಮಲಪ್ಪುರಂ-47, ತಿರುವನಂತಪುರ-63, ಪತ್ತನಂತಿಟ್ಟ-47, ತೃಶ್ಶೂರು-9, ವಯನಾಡು-14, ಕಣ್ಣೂರು-44, ಇಡುಕ್ಕಿ-4, ಕೋಟ್ಟಯಂ-10, ಕೊಲ್ಲಂ-33, ಕಲ್ಲಿಕೋಟೆ-16 ಎಂಬಂತೆ ರೋಗ ಬಾ„ಸಿದೆ.
ಪಾಲ್ಘಾಟ್-25, ಆಲಪ್ಪುಳ-7, ಕಾಸರಗೋಡು-5, ಎರ್ನಾಕುಳಂ-12, ಮಲಪ್ಪುರಂ-28, ತಿರುವನಂತಪುರ-3, ಪತ್ತನಂತಿಟ್ಟ-2, ತೃಶ್ಶೂರು-14, ವಯನಾಡು-16, ಕಣ್ಣೂರು-20, ಕೋಟ್ಟಯಂ-12, ಕೊಲ್ಲಂ-10, ಕಲ್ಲಿಕೋಟೆ-8 ಎಂಬಂತೆ ಗುಣಮುಖರಾಗಿದ್ದಾರೆ.
ಕೇರಳದಲ್ಲಿ 144 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. 140 ಮಂದಿ ವಿದೇಶದಿಂದಲೂ, 64 ಮಂದಿ ಇತರ ರಾಜ್ಯಗಳಿಂದಲೂ ಬಂದವರಿಗೆ ಸೋಂಕು ಬಾಧಿಸಿದೆ. 18 ಮಂದಿಗೆ ರೋಗ ಹರಡಲು ಕಾರಣ ತಿಳಿದು ಬಂದಿಲ್ಲ. 5 ಮಂದಿ ಆರೋಗ್ಯ ಕಾರ್ಯಕರ್ತರಿಗೆ ರೋಗ ಬಾಧಿಸಿದೆ.
ಮಾಸ್ಕ್ ಧರಿಸದ 199 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 199 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂಧಿಸಿ ದಾಖಲಾದ ಕೇಸುಗಳ ಸಂಖ್ಯೆ 12401 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 15 ಕೇಸುಗಳು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 15 ಕೇಸುಗಳನ್ನು ದಾಖಲಿಸಲಾಗಿದೆ. 33 ಮಂದಿಯನ್ನು ಬಂ„ಸಲಾಗಿದ್ದು, 8 ವಾಹನಗಳನ್ನು ವಶಪಡಿಸಲಾಗಿದೆ. ಕಾಸರಗೋಡು ನಗರಠಾಣೆಯಲ್ಲಿ 1 ಕೇಸು, ಕುಂಬಳೆ 3, ಆದೂರು 1, ಮೇಲ್ಪರಂಬ 2, ಅಂಬಲತ್ತರ 1, ಹೊಸದುರ್ಗ 1, ನೀಲೇಶ್ವರ 2, ಚಂದೇರ 2, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಕಾಸರಗೋಡು ಜಿಲ್ಲೆಯಲ್ಲಿ ಈ ಪ್ರಕರಣಗಳಿಗೆ ಸಂಬಂ„ಸಿ ದಾಖಲಾದ ಕೇಸುಗಳ ಸಂಖ್ಯೆ 3070 ಆಗಿದೆ. ಒಟ್ಟು 3998 ಮಂದಿಯನ್ನು ಬಂಧಿಸಲಾಗಿದೆ. 1266 ವಾಹನಗಳನ್ನು ವಶಪಡಿಸಲಾಗಿದೆ.
ಮೀನುಗಾರಿಕೆ, ಮೀನು ಮಾರಾಟ ಜು.14ರಿಂದ 17 ವರೆಗೆ ನಿಷೇಧ : ಕೋವಿಡ್ 19 ಸಾಮೂಹಿಕ ಹರಡುವಿಕೆಯ ಭೀತಿಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜು.14 ರಿಂದ ಜು.17 ವರೆಗೆ ಮೀನುಗಾರಿಕೆ, ಮೀನು ಮಾರಾಟ ನಿಷೇ„ಸಲಾಗಿದೆ ಎಂದು ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ತಿಳಿಸಿದರು.



