ಕಾಸರಗೋಡು: ಆಂನಸ್ಟಿ ಯೋಜನೆ ಮೂಲಕ ವ್ಯಾಟ್ ತೆರಿಗೆ, ಮಾರಾಟ ತೆರಿಗೆ ಬಾಕಿಯಿದ್ದಲ್ಲಿ ಪಾವತಿಗೆ ಅವಕಾಶವಿದೆ. ಜು.31 ವರೆಗಿನ ವ್ಯಾಟ್ ತೆರಿಗೆ, ಆಡಂಬರ ತೆರಿಗೆ, ಕೇಂದ್ರ ಮಾರಾಟ ತೆರಿಗೆ ಇತ್ಯಾದಿ ಪಾವತಿಗೆ ಬಾಕಿಯಿರುವ ವ್ಯಾಪಾರಿಗಳು ಒಂದೇ ಕಂತಿನಲ್ಲಿ ಆಂನಸ್ಟಿ 2020 (
Amnesty 2020)ಯೋಜನೆ ಮೂಲಕ ಪಾವತಿಸಬಹುದು. ಈ ಸೌಲಭ್ಯ ಮೂಲಕ ಜು.31 ವರೆಗಿನ ವ್ಯಾಟ್ ತೆರಿಗೆ ಬಾಕಿಯ ಶೇ 40 ಅರ್ಜಿ ಸಲ್ಲಿಸಿ, ಒಂದು ತಿಂಗಳ ಅವಧಿಯಲ್ಲಿ ಪಾವತಿಸಿದರೆ ಸಾಕಾಗುತ್ತದೆ. ಜೊತೆಗೆ ಬಾಕಿಯ ಶೇ 50 ಕಂತಿನ ರೂಪದಲ್ಲಿ ಜು.31 ವರೆಗೆ ಪಾವತಿಸುವ ವ್ಯವಸ್ಥೆಯನ್ನೂ ಒದಗಿಸಲಾಗಿದೆ.
2005 ಏ.1 ವರೆಗಿನ ಮಾರಾಟ ತೆರಿಗೆ ಬಾಕಿ ವ್ಯಾಟ್ ತೆರಿಗೆಯ ನಿಬಂಧನೆಗಳಿಗನುಸಾರ ಪಾವತಿಸಿದರೆ ಸಾಕು. ಆದರೆ 2005 ಏ.1ರ ನಂತರದ ಮಾರಾಟ ತೆರಿಗೆಯ ಬಾಕಿಯಲ್ಲಿ, ಮಾರಾಟ ತೆರಿಗೆಯನ್ನು ಬಡ್ಡಿ ಸಹಿತ ಪಾವಸತಿಬೇಕಿದೆ. ಈ ಮೂಲಕ ದಂಡ ಹೇರಿಕೆಯಿಂದ ಪಾರಾಗಬಹುದು.ಆನ್ ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು:
ರಾಜ್ಯ ಸರಕು ಸೇವೆ ತೆರಿಗೆ ಇಲಾಖೆಯ ವೆಬ್ ಸೈಟ್ www.keralataxes.gov.in
ನ ಹೋಂ ಪೇಜ್ ನಲ್ಲಿರುವ ಆಂನಸ್ಟಿ 2020 ಎಂಬ ಪೆÇೀರ್ಟಲ್ ನಲ್ಲಿ ನೋಂದಣಿ ನಡೆಸಿ ಜು.31ರ ಮುಂಚಿತವಾಗಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಕಾಸರಗೋಡು, ಹೊಸದುರ್ಗ, ವಿದ್ಯಾನಗರ ಸರ್ಕಲ್ ಕಚೇರಿಗಳ ಅಧಿಕಾರಿಗಳು ಅರ್ಜಿ ಪರಿಶೀಲಿಸಿ ,ಅನುಮತಿ ನೀಡುವರು. ತದನಂತರ ಅರ್ಜಿ ಸಲ್ಲಿಸಿದ ಅದೇ ಪೆÇೀರ್ಟಲ್ ನಿಂದ ಆನ್ ಲೈನ್ ಆಗಿ ಮೊಬಲಗು ಪಾವತಿಸಿದರೆ ಕಂದಾಯ ವಸೂಲಾತಿ ಕ್ರಮಗಳಿಂದ ಪಾರಾಗಬಹುದು. ಹೆಚ್ಚುವರಿ ಮಾಹಿತಿಗಾಗಿ ಕಾಸರಗೋಡು ಜಿಲ್ಲೆಯ ಜಿ.ಎಸ್.ಟಿ. ಇಲಾಖೆಯ ಕಚೇರಿಗಳನ್ನು ಸಂಪರ್ಕಿಸಬಹುದು. ದೂರವಾಣಿ ನಂಬ್ರಗಳು: ವಿದ್ಯಾನಗರ-04994256820, ಕಾಸರಗೋಡು-04994230449, ಹೊಸದುರ್ಗ-04672204308.

