HEALTH TIPS

ವ್ಯಾಪಾರ ಸಂಸ್ಥೆಗಳಲ್ಲಿ ಮಾಸ್ಕ್, ಕೈಗಳಿಗೆ ಗ್ಲೌಸ್ ಕಡ್ಡಾಯ: ಆದೇಶ ಉಲ್ಲಂಘಿಸಿದರೆ 7 ದಿನ ಕಾಲ ಅಂಗಡಿ ಮುಚ್ಚುಗಡೆ : ಜಿಲ್ಲಾಧಿಕಾರಿ


          ಕಾಸರಗೋಡು : ವ್ಯಾಪಾರ ಸಂಸ್ಥೆಗಳಲ್ಲಿ ನೌಕರಿ ನಡೆಸುತ್ತಿರುವವರಿಗೆ ಮಾಸ್ಕ್, ಕೈಗಳಿಗೆ ಗ್ಲೌಸ್ ಕಡ್ಡಾಯಗೊಳಿಸಲಾಗಿದೆ. ಈ ಆದೇಶ ಉಲ್ಲಂಘಿಸಿದರೆ 7 ದಿನಗಳ ಕಾಲ ಅಂಗಡಿ ಮುಚ್ಚುಗಡೆ ನಡೆಸುವ ಕ್ರಮ ಕೈಗೊಳ್ಳುವಂತೆ ಪೆÇಲೀಸರಿಗೆ ಆದೇಶ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. 
          7 ದಿನಗಳ ಕಾಲ ಮುಚ್ಚುಗಡೆ ನಡೆಸಿದ ಅಂಗಡಿಗಳನ್ನು ನಂತರ ರೋಗಾಣು ಮುಕ್ತ ಚಟುವಟಿಕೆ ನಡೆಸಿದ ಮೇಲಷ್ಟೇ ತೆರೆಯಲು ಅನುಮತಿ ನೀಡಲಾಗುವುದು. ಗ್ರಾಹಕರು ಗುಂಪು ಗೂಡದಂತೆ ವ್ಯಾಪಾರಿ ಸಂಸ್ಥೆಗಳ ಮಾಲೀಕರು ಗಮನಿಸಬೇಕು ಎಂದವರು ಸೂಚನೆ ನೀಡಿರುವರು. 
         ಜು.12ರಂದು ಕಾಸರಗೋಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಸಂಪರ್ಕದಿಂದ ಕೋವಿಡ್ ಸೋಂಕು ತಗುಲಿರುವುದು ವ್ಯಾಪಾರ ಸಂಸ್ಥೆಗಳಿಗೆ ಸಂಬಂಧಿಸಿದುವಾಗಿರುವುದು ಈ ಕ್ರಮಕ್ಕೆ ಕಾರಣ. ಇತರ ರಾಜ್ಯಗಳಿಂದ ಸರಕು ಹೇರಿಕೊಂಡು ಬರುವ ಲಾರಿಗಳ ಮಂದಿಯಿಂದಲೂ ಸೋಂಕು ಹರಡಿದೆ. ಇಂಥಾ ಲಾರಿಗಳ ನಿಯಂತ್ರಣವೂ ನಡೆಯಲಿದೆ ಎಂದು ಜಿಲ್ಲಧಿಕಾರಿ ಹೇಳಿದರು.
         ಭಾನುವಾರ ಕೋವಿಡ್ 19 ಖಚಿತಗೊಂಡವರಲ್ಲಿ 8 ಮಂದಿಯ ಸಂಪರ್ಕ ಮಾಹಿತಿ ಇನ್ನೂ ಲಭಿಸಿಲ್ಲ. ಲಾಕ್ ಡೌನ್ ಅವಧಿಯಲ್ಲಿ ಸಾರ್ವಜನಿಕರು ತಳೆದಿದ್ದ ಅತೀವ ಜಾಗ್ರತೆ ಮುಂದಿನ ದಿನಗಳಲ್ಲೂ ತಳೆಯಬೇಕಾದ ಅಗತ್ಯವಿದೆ. ಜಿಲ್ಲಾಡಳಿತೆ ಮತ್ತು ಆರೋಗ್ಯ ಇಲಾಖೆ ತಿಳಿಸಿರುವ ಎಲ್ಲ ಕಟ್ಟುನಿಟ್ಟುಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅವರು ಸಾರ್ವಜನಿಕರಲ್ಲಿ ವಿನಂತಿಸಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries