ಕಾಸರಗೋಡು: ಜಿಲ್ಲೆಯಲ್ಲಿ ಸಂಪರ್ಕ ಕಾರಣ ಕೋವಿಡ್ ಬಾಧಿಸಿದ್ದ ಮಹಿಳೆಯೋರ್ವೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಯಲ್ಲಿದ್ದವರು ಇಂದು ಮೃತಪಟ್ಟಿದ್ದು, ಈ ಮೂಲಕ ಕೋವಿಡ್ ಕಾರಣ ಜಿಲ್ಲೆಯಲ್ಲಿ ಎರಡನೇ ಮರಣ ದಾಖಲಾಗಿದೆ. ರಾಜ್ಯದಲ್ಲಿ ಈ ಮೂಲಕ ಕೋವಿಡ್ ಮರಣದ ಸಂಖ್ಯೆÀ 45 ಕ್ಕೆ ಏರಿಕೆಯಾಗಿದೆ. ಮಂಗಳವಾರ ತಿರುವನಂತಪುರದ ಪುಲ್ಲುವಿಳಯಿಲ್ ಎಂಬಲ್ಲಿ ವಿಕ್ಟೋರಿಯಾ(72) ಮೃತರಾಗಿದ್ದರು.
ಅಣಂಗೂರು ಪಚ್ಚೆಕ್ಕಾಡ್ ನಿವಾಸಿ ಖೈರುನ್ನೀಸಾ(48) ಬುಧವಾರ ಮುಂಜಾನೆ 4.30ಕ್ಕೆ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮೃತಪಟ್ಟರು. ನ್ಯುಮೋನಿಯಾ ಕಾರಣ ಆಸ್ಪತ್ರೆಗೆ ದಾಖಲಾಗಿವೆಂಟಿಲೇಟರ್ ನಲ್ಲಿದ್ದರು. ಜು.20 ರಂದು ಕೋವಿಡ್ ಇರುವುದು ದೃಢಪಡಿಸಲಾಗಿತ್ತು. ಈ ಮಧ್ಯೆ ಇವರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡಲು ಸಿದ್ದತೆ ನಡೆಸುತ್ತಿರುವಂತೆ ಮರಣ ಸಂಭವಿಸಿದೆ. ಇವರ ಪುತ್ರ ಸ್ವಗೃಹದಲ್ಲಿ ಕೋವಿಡ್ ನಿರೀಕ್ಷಣೆಯಲ್ಲಿದ್ದಾರೆ. ಪುತ್ರನಿಂದ ತಾಯಿಗೆ ಸೋಂಕು ಹಬ್ಬಿರಬಹುದೆಂದು ಸಂಶಯಿಸಲಾಗಿದೆ. ಖೈರುನ್ನೀಸಾ ಕೋವಿಡ್ ಬಾಧಿಸಿ ಮೃತಪಟ್ಟಿರುವುದರಿಂದ ಕುಟುಂಬದ ಇತರರಿಗೂ ಕೋವಿಡ್ ಪರೀಕ್ಷೆ ನಡೆಸಲಾಗುವುದೆಂದು ಆರೋಗ್ಯ ಇಲಾಖೆ ಸಮರಸದೊಂದಿಗೆ ತಿಳಿಸಿದೆ.


