ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಶನಿವಾರ 18 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 7 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.ವಿದೇಶದಿಂದ ಬಂದ 7 ಮಂದಿಗೆ ಮತ್ತು ಇತರ ರಾಜ್ಯಗಳಿಂದ ಬಂದ ನಾಲ್ವರಿಗೆ ರೋಗ ಬಾಧಿಸಿದೆ.
ಸಂಪರ್ಕದಿಂದ ಮಂಗಲ್ಪಾಡಿ ಪಂಚಾಯತ್‍ನ 74 ಮತ್ತು 21 ವರ್ಷದ ಮಹಿಳೆಯರು, 3 ವರ್ಷದ ಹೆಣ್ಣು ಮಗು, ಕುಂಬಳೆ ಪಂಚಾಯತ್‍ನ 19 ವರ್ಷದ ಯುವಕ, ಮೀಂಜ ಪಂಜಾಯತ್‍ನ 43 ವರ್ಷದ ಮಹಿಳೆ, ವರ್ಕಾಡಿ ಪಂಚಾಯತ್‍ನ 10 ವರ್ಷದ ಬಾಲಕಿಗೆ, ಮಂಗಲ್ಪಾಡಿ ಪಂಚಾಯತ್‍ನ ಒಂದು ವರ್ಷ ಪ್ರಾಯದ ಹೆಣ್ಣು ಮಗುವಿಗೆ ರೋಗ ಬಾಧಿಸಿದೆ.
ಬೆಂಗಳೂರಿನಿಂದ ಕಾರಿನಲ್ಲಿ ಬಂದ 38 ಮತ್ತು 36 ವರ್ಷದ ಮೊಗ್ರಾಲ್ ಪುತ್ತೂರು ಪಂಚಾಯತ್ ನಿವಾಸಿಗಳು, ಮಹಾರಾಷ್ಟ್ರದಿಂದ ರೈಲು ಗಾಡಿಯಲ್ಲಿ ಬಂದ ಮಂಗಲ್ಪಾಡಿ ನಿವಾಸಿ ಮತ್ತು 58 ವರ್ಷದ ಮೊಗ್ರಾಲ್‍ಪುತ್ತೂರು ನಿವಾಸಿಗೆ ರೋಗ ಬಾಧಿಸಿದೆ.
ಖತ್ತರ್‍ನಿಂದ ಬಂದ 36 ವರ್ಷದ ಮಂಗಲ್ಪಾಡಿ ಪಂಚಾಯತ್ ನಿವಾಸಿ, 47 ವರ್ಷದ ಉದುಮ ಪಂಚಾಯತ್ ನಿವಾಸಿ, ದುಬೈಯಿಂದ ಬಂದ 25 ವರ್ಷದ ಕಾಸರಗೋಡು ನಗರಸಭಾ ನಿವಾಸಿ, 33 ವರ್ಷದ ಕಾಂಞಂಗಾಡ್ ನಗರಸಭಾ ನಿವಾಸಿ, ಕುವೈಟ್‍ನಿಂದ ಬಂದ 39 ವರ್ಷದ ಕಳ್ಳಾರ್ ಪಂಚಾಯತ್ ನಿವಾಸಿ, ಸೌದಿಯಿಂದ ಬಂದ 58 ವರ್ಷದ ತೃಕ್ಕರಿಪುರ ಪಂಚಾಯತ್ ನಿವಾಸಿ, ಸೌದಿ ಅರೆಬಿಯಾದಿಂದ ಬಂದ 37 ವರ್ಷದ ಪಿಲಿಕೋಡು ನಿವಾಸಿ ಎಂಬವರಿಗೆ ರೋಗ ಬಾಧಿಸಿದೆ.
ಕೇರಳದಲ್ಲಿ 488 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಶನಿವಾರ 488 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢಗೊಂಡಿದೆ. 143 ಮಂದಿ ರೋಗ ಮುಕ್ತರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
ಶನಿವಾರ ತಿರುವನಂತಪುರದ ಸೈಫುದ್ದೀನ್(66) ಮತ್ತು ಎರ್ನಾಕುಳಂ ನಿವಾಸಿ ಪಿ.ಕೆ.ಬಾಲಕೃಷ್ಣನ್(79) ಸಾವಿಗೀಡಾಗಿದ್ದಾರೆ.
ರೋಗ ಬಾಧಿತರಲ್ಲಿ 167 ಮಂದಿ ವಿದೇಶದಿಂದಲೂ, 76 ಮಂದಿ ಇತರ ರಾಜ್ಯಗಳಿಂದ ಬಂದವರು. ಸಂಪರ್ಕದ ಮೂಲಕ 234 ಮಂದಿಗೆ ರೋಗ ಬಾ„ಸಿದೆ. ಇಬ್ಬರು ಆರೋಗ್ಯ ಕಾರ್ಯಕರ್ತರು, ಇಬ್ಬರು ಐಟಿಬಿಪಿ ಸಿಬಂದಿಗಳು, ಇಬ್ಬರು ಬಿಎಸ್‍ಎಫ್ ಸಿಬ್ಬಂದಿಗಳು ಹಾಗು ನಾಲ್ಕು ಮಂದಿ ಬಿಎಸ್‍ಸಿ ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
ತಿರುವನಂತಪುರ-69, ಕೊಲ್ಲಂ-18, ಆಲಪ್ಪುಳ-87, ಪತ್ತನಂತಿಟ್ಟ-64, ಕೋಟ್ಟಯಂ-15, ಇಡುಕ್ಕಿ-5, ಎರ್ನಾಕುಳಂ-47, ತೃಶ್ಶೂರು-29, ಪಾಲ್ಘಾಟ್-48, ಕಲ್ಲಿಕೋಟೆ-17, ವಯನಾಡು-11, ಮಲಪ್ಪುರಂ-51, ಕಣ್ಣೂರು-19, ಕಾಸರಗೋಡು-18 ಎಂಬಂತೆ ರೋಗ ಬಾಧಿಸಿದೆ.
ನೆಗೆಟಿವ್ ಆದವರು : ತಿರುವನಂತಪುರ-6, ಕೊಲ್ಲಂ-26, ಪತ್ತನಂತಿಟ್ಟ-43, ಇಡುಕ್ಕಿ-4, ಕೋಟ್ಟಯಂ-6, ಆಲಪ್ಪುಳ-11, ಎರ್ನಾಕುಳಂ-3, ತೃಶ್ಶೂರು-17, ಪಾಲ್ಘಾಟ್-7, ಮಲಪ್ಪುರಂ-15, ಕಲ್ಲಿಕೋಟೆ-4, ಕಣ್ಣೂರು-1 ಎಂಬಂತೆ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 201 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 212 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ವರೆಗೆ ಮಾಸ್ಕ್ ಧರಿಸದ 12029 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 11 ಕೇಸು ದಾಖಲು : ಲಾಕ್‍ಡೌನ್ ಉಲ್ಲಂಘಿಸಿದ ಆರೋಪದಲ್ಲಿ 11 ಕೇಸುಗಳನ್ನು ದಾಖಲಿಸಲಾಗಿದೆ. 7 ಮಂದಿಯನ್ನು ಬಂಧಿಸಲಾಗಿದೆ. ಮೂರು ವಾಹನಗಳನ್ನು ವಶಪಡಿಸಲಾಗಿದೆ. ಈ ವರೆಗೆ ಜಿಲ್ಲೆಯಲ್ಲಿ 3953 ಮಂದಿಯನ್ನು ಬಂಧಿಸಲಾಗಿದೆ. ವಿವಿಧ ಠಾಣೆಗಳಲ್ಲಾಗಿ 3025 ಕೇಸು ದಾಖಲಿಸಲಾಗಿದೆ. 1254 ವಾಹನಗಳನ್ನು ವಶಪಡಿಸಲಾಗಿದೆ.


