HEALTH TIPS

ದೇಶದಲ್ಲಿ ಕೊರೋನಾ ಗುಣಮುಖ ಪ್ರಮಾಣ ಶೇ 62.78 ಕ್ಕೆ ಏರಿಕೆ, 5 ಲಕ್ಷ ಗಡಿ ದಾಟಿದ ಗುಣಮುಖರ ಸಂಖ್ಯೆ

 
       ನವದೆಹಲಿ: ದೇಶದಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವಂತೆಯೇ ಇತ್ತ ದೇಶದ ವಿವಿಧ ರಾಜ್ಯಗಳಲ್ಲಿ ಸೋಂಕಿನಿಂದ ಗುಣಮುಖರ ಪ್ರಮಾಣ ಕೂಡ ಏರಿಕೆಯಾಗಿದೆ.
       ದೇಶದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಬೆನ್ನಲ್ಲೇ ಗುಣಮುಖರಾಗುತ್ತಿರುವ ಪ್ರಮಾಣ ಶೇ 62.78 ಕ್ಕೆ ಏರಿಕೆಯಾಗಿದೆ.  ಆಶಾದಾಯಕ ಬೆಳವಣಿಗೆ ಎಂದರೆ ದೇಶಾದ್ಯಂತ ಕೊರೋನಾ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ. ಒಟ್ಟು 5,15,386 ಸೋಂಕಿತರು ಗುಣಮುಖರಾಗಿದ್ದಾರೆ. ಒಂದು ದಿನದಲ್ಲಿ 16,872 ಜನರು ಗುಣಮುಖರಾಗಿದ್ದಾರೆ.
      ಲಡಾಖ್, ಛತ್ತೀಸ್‍ಗಢ, ಉತ್ತರಾಖಂಡ್, ದೆಹಲಿ ಮತ್ತು ರಾಜಸ್ಥಾನದಲ್ಲಿ ಚೇತರಿಕೆ ದರ ಶೇಕಡ 76 ಕ್ಕಿಂತ ಹೆಚ್ಚಿದೆ. ಕೊರೋನಾ ಸೋಂಕಿನಿಂದ ಗುಣಮುಖರಾದ ರಾಜ್ಯಗಳ ಪೈಕಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದ್ದರೆ, ದೆಹಲಿ ಎರಡು ಮತ್ತು ತಮಿಳುನಾಡು ಮೂರನೇ ಸ್ಥಾನದಲ್ಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries