ತಿರುವನಂತಪುರ: ಮುಖ್ಯಮಂತ್ರಿಗಳ ಮಾಜಿ ಕಾರ್ಯದರ್ಶಿ ಎಂ.ಎಸ್. ಶಿವಶಂಕರ್ ಅವರನ್ನು ಚಿನ್ನ ಕಳ್ಳ ಸಾಗಣೆ ಪ್ರಕರಣದ ಸಂಬಂಧ ಮಂಗಳವಾರ 6 ಗಂಟೆಗೂ ಹೆಚ್ಚು ಕಾಲ ಸಮಗ್ರವಾಗಿ ತನಿಖಾ ತಂಡ ಪ್ರಶ್ನಿಸಿತು. ತಿರುವನಂತಪುರಂ ಕಸ್ಟಮ್ಸ್ ಕಚೇರಿಯಲ್ಲಿ ಪ್ರಶ್ನಿಸಲಾಯಿತು. ಈ ಹಿಂದೆ ಕಸ್ಟಮ್ಸ್ ಸಹಾಯಕ ಆಯುಕ್ತ ಕೆ.ಎಸ್. ರಾಮಮೂರ್ತಿ ಅವರ ಸಮ್ಮುಖದಲ್ಲಿ ನೋಟಿಸ್ ನೀಡಲಾಗಿದೆ.
ವಿಚಾರಣೆ ತಡರಾತ್ರಿವರೆಗೂ ನಡೆಯಿತೆಂದು ತಿಳಿದುಬಂದಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳಾದ ಸ್ವಪ್ನಾ ಸುರೇಶ್ ಅವರೊಂದಿಗೆ ಶಿವಶಂಕರ್ ಸಂಪರ್ಕ ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ವಿಭಾಗ ತೀವ್ರ ವಿಚಾರಣೆಗೊಳಪಡಿಸಿತು.
ಈ ಹಿಂದೆ ಕಸ್ಟಮ್ಸ್ ಡಿಆರ್‍ಐ ತಂಡ ತಿರುವನಂತಪುರಂನ ಶಿವಶಂಕರ್ ಅವರ ಮನೆಗೆ ಭೇಟಿ ನೀಡಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು.