ಕುಂಬಳೆ: ಸೀರೆ ಶ್ರೀಶಂಕರನಾರಾಯಣ ದೇವಾಲಯದ ನಂದಿ(ಬಸವ)ಯನ್ನು ಕದ್ದೊಯ್ಯಲಾಗಿದ್ದು, ವಿಶೇಷವೆಂದರೆ 24 ಗಂಟೆಗಳಲ್ಲಿ ಮರಳಿದ ಘಟನೆ ನಡೆದಿದೆ. ಇದರ ಹಿಂದೆ ದೇವರು ಹಾಗೂ ದೈವಗಳ ಕಾರ್ಣಿಕ ಅಡಗಿದೆ ಎಂಬ ಮಾತುಗಳು ಭಾರೀ ಸದ್ದು ಮಾಡಿದೆ.
ಸೀರೆ ಶ್ರೀಕ್ಷೇತ್ರದ ವಬಸವನನ್ನು ಭಾನುವಾರ ಸಂಜೆ ಅಪರಿಚಿತ ಯುವಕರ ತಂಡವೊಮದು ಬಲಾತ್ಕಾರವಾಗಿ ಸ್ವಿಪ್ಟ್ ಕಾರೊಂದರಲ್ಲಿ ಕದ್ದೊಯ್ದಿತ್ತು. ಸ್ಥಳೀಯರ ಗಮನಕ್ಕೆ ಕಳವು ಕೃತ್ಯ ಗಮನಕ್ಕೆ ಬರುತ್ತಿರುವಂತೆ ನಂದಿಯನ್ನು ಕದ್ದೊಯ್ದವರು ಬಹಳ ದೂರ ಸಾಗಿದ್ದರು. ಇದರಿಂದ ನೊಂದುಕೊಂಡ ಶ್ರೀಕ್ಷೇತ್ರದ ಸಂಬಂಧಪಟ್ಟವರು ಶ್ರೀಶಂಕರನಾರಾಯಣ ದೇವರು ಹಾಗೂ ಕೊರಗಜ್ಜ ದೈವಕ್ಕೆ ಪ್ರಾರ್ಥನೆ ಸಲಲಿಸಲಾಗಿತ್ತು. ಈ ಮಧ್ಯೆ ಘಟನೆ ನಡೆದು 24 ಗಂಟೆಗಳಾಗುತ್ತಿರುವಂತೆ ಸೋಮವಾರ ಸಂಜೆ ವೇಳೆಗೆ ಬಸವನನ್ನು ತೀವ್ರ ಅಸ್ವಸ್ಥ ಸ್ಥಿತಿಯಲ್ಲಿ ಶ್ರೀಕ್ಷೇತ್ರಾವರಣದಲ್ಲಿ ಬಿಟ್ಟುಬಿಡಲಾಗಿರುವುದು ಗಮನಕ್ಕೆ ಬಂದಿದೆ.
ಬಳಿಕ ಕ್ಷೇತ್ರಾಡಳಿತ, ಸೇವಾ ಸಮಿತಿಯ ಪ್ರತಿನಿಧಿಗಳು ಆಗಮಿಸಿ ಶೂಶ್ರಶೆಗೈದರು. ನಂದಿಯ ಭುಜವನ್ನು ಗುದ್ದಿ ಪುಡಿಮಾಡಲಾಗಿದ್ದು ದೇಹದ ವಿವಿಧೆಡೆ ಹಲವು ಗಾಯದ ಗುರುತುಗಳಿವೆ ಎಂದು ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ನ್ಯಾಯವಾದಿ ಬಾಲಕೃಷ್ಣ ಶೆಟ್ಟಿ ವಾನಂದೆ ತಿಳಿಸಿದ್ದಾರೆ.
ಕದ್ದೊಯ್ಯಲಾದ ಬಸವ ಮರಳಿರುವುದು ದೇವರ-ದೈವದ ಕೃಪೆಯಿಂದ ಎಂಬ ಮಾತುಗಳು ಜಾಲತಾಣಗಳಲ್ಲಿ ಹರಿದಾಡುತ್ತಿದೆ.