ನವದೆಹಲಿ: ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಫೈಸಲ್ ಫರೀದ್‍ಗೆ ಎನ್‍ಐಎ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ. ದುಬೈನಲ್ಲಿರುವ ಆತನನ್ನು ಬಂಧಿಸಲು ಆದೇಶವನ್ನು ಇಂಟಪೆರ್Çೀಲ್ ಗೆ ಹಸ್ತಾಂತರಿಸಲಾಗುವುದು. ಫೈಸಲ್ ಫರೀದ್ ಈ ಪ್ರಕರಣದ ಮೂರನೇ ಆರೋಪಿಯಾಗಿದ್ದಾನೆ. ನ್ಯಾಯಾಲಯದ ವಾರಂಟ್ ಬಂದ ಬಳಿಕ ಇಂಟಪೆರ್Çೀಲ್ ಆರೋಪಿಗಳಿಗೆ ಬ್ಲೂ ಕಾರ್ನರ್ ನೋಟಿಸ್ ನೀಡಲಿದೆ ಮತ್ತು ಮಾಹಿತಿಯನ್ನು ಭಾರತದಲ್ಲಿನ ತನಿಖಾ ತಂಡಕ್ಕೆ ರವಾನಿಸಲಿದೆ.
ಫೈಸಲ್ ಫರೀದ್ ನನ್ನು ವಶಕ್ಕೆ ಪಡೆದರೆ ಚಿನ್ನದ ಕಳ್ಳಸಾಗಣೆ ತಂಡದ ಜಾಗತಿಕ ಜಾಲದ ಬಗ್ಗೆ ಮಾಹಿತಿ ಲಭ್ಯವಾಗುವುದೆಂಬ ವಿಶ್ವಾಸ ಎನ್‍ಐಎ ಅಧಿಕೃತರದ್ದಾಗಿದೆ. ಆತನನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳೂ ನಡೆದಿವೆ. ಆದರೆ ಪ್ರಕರಣದಲ್ಲಿ ಆತನ ಬಗ್ಗೆ ಈ ಹಿಂದೆ ನೀಡಲಾದ ಮಾಹಿತಿಯನ್ನು ಸರಿಪಡಿಸಲು ಮತ್ತು ತ್ರಿಶೂರ್ ಮೂಲದ ಫೈಸಲ್ ಫರೀದ್ ಈ ಪ್ರಕರಣದ ಆರೋಪಿ ಎಂದು ಸೂಚಿಸಲು ತನಿಖಾ ತಂಡದ ಕೋರಿಕೆಗೆ ನ್ಯಾಯಾಲಯ ಅನುಮತಿ ನೀಡಿತು.
ಎನ್‍ಐಎ ದಾಖಲಿಸಿರುವ ಎಫ್‍ಐಆರ್ ಪ್ರಕಾರ ಎರ್ನಾಕುಳಂ ನಿವಾಸಿ ಫೈಸಲ್ ಫರೀದ್ ಚಿನ್ನವನ್ನು ತಿರುವನಂತಪುರಂನ ಯುಎಇ ಕಾನ್ಸುಲೇಟ್‍ಗೆ ರಾಜತಾಂತ್ರಿಕ ಸಾಮಾನುಗಳ ಮೂಲಕ ಕಳುಹಿಸಿದ್ದನು. ಕೇರಳ ಹೈಕೋರ್ಟ್‍ಗೆ ಸಲ್ಲಿಸಿದ ವರದಿಯಲ್ಲಿಯೂ ಈ ಹೆಸರನ್ನು ಉಲ್ಲೇಖಿಸಲಾಗಿದೆ. ಆದರೆ, ವಿಳಾಸ ತಪ್ಪಾಗಿದೆ ಎಂದು ತಿಳಿದುಬಂದ ನಂತರ ತನಿಖಾ ತಂಡವು ಆರೋಪಿಗಳ ಬಗ್ಗೆ ಮಾಹಿತಿಯನ್ನು ಸರಿಪಡಿಸಲು ಕೇಳಿಕೊಂಡಿದೆ.
ಈ ಮಧ್ಯೆ ಈ ಪ್ರಕರಣದಲ್ಲಿ ಆರಂಭದಲ್ಲಿ ಬಂಧನಕ್ಕೊಳಗಾದ ಸರಿತ್ ಚಿನ್ನ ಕಳ್ಳಸಾಗಣೆಯಲ್ಲಿ ಭಾಗಿಯಾಗಿಲ್ಲ ಎಂದು ಮಾಜಿ ಪ್ರಧಾನ ಕಾರ್ಯದರ್ಶಿ ಮತ್ತು ಐಟಿ ಕಾರ್ಯದರ್ಶಿ ಎಂ.ಶಿವಶಂಕರ್ ಹೇಳಿದ್ದಾರೆ. ಆದರೆ ಶಿವಶಂಕರ್ ಅವರ ಫ್ಲ್ಯಾಟ್‍ನಲ್ಲಿ ಚಿನ್ನದ ಕಳ್ಳಸಾಗಣೆ ಯೋಜಿಸಿರುವುದಾಗಿ ಸರಿತ್ ಒಪ್ಪಿಕೊಂಡಿದ್ದಾನೆ. ಸರಿತ್ ಈ ಹಿಂದೆ ಶಿವಶಂಕರ್ ಅವರನ್ನು ಸ್ವಪ್ನಾಳ ಮೂಲಕ ಭೇಟಿಯಾದರು ಎಂದು ಒಪ್ಪಿಕೊಂಡಿರುವನು. ಈ ಸಂಬಂಧ ಎಂ.ಶಿವಶಂಕರ್ ಅವರನ್ನು ಪ್ರಶ್ನಿಸಲು ಕಸ್ಟಮ್ಸ್ ಕ್ರಮಗಳನ್ನು ಪ್ರಾರಂಭಿಸಿದೆ. ಕಸ್ಟಮ್ಸ್ ಕಾಯ್ದೆಯ ಸೆಕ್ಷನ್ 108 ರ ಅಡಿಯಲ್ಲಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಗಾಗಿ ಕೊಚ್ಚಿಗೆ ಕರೆಸಿಕೊಳ್ಳಲಾಗುವುದೆಂದು ತಿಳಿದುಬಂದಿದೆ.