ಮುಳ್ಳೇರಿಯ: ಆನ್‍ಲೈನ್ ಶಿಕ್ಷಣ ಸೌಲಭ್ಯ ಇಲ್ಲದ ವಿದ್ಯಾರ್ಥಿಗಳಿಗೆ ಡಿ.ಎಸ್.ಎಸ್. ಕೇರಳ ಉಚಿತವಾಗಿ ಕೊಡಮಾಡಿದ ಟಿ.ವಿ.ಯನ್ನು ವಿತರಿಸಲು ಚಾಲನೆ ನೀಡಲಾಯಿತು.
ಪೆರುಂಬಾವೂರು ಸೈಂಟ್ ಮೇರಿಸ್ ಚರ್ಚ್ ಕೊಡುಗೆಯಾಗಿ ನೀಡಿದ ಟಿ.ವಿ. ವಿತರಣೆಯನ್ನು ಅಧ್ಯಕ್ಷ ರಮೇಶನ್ ಬಂದಡ್ಕ ನಿರ್ವಹಿಸಿದರು. ಕೇರಳದ ಆದಿವಾಸಿ ವಲಯದ ವಿದ್ಯಾರ್ಥಿಗಳನ್ನು ಪರಿಗಣಿಸದೆ ಕೇರಳ ಸರ್ಕಾರ ಆನ್‍ಲೈನ್ ಶಿಕ್ಷಣಕ್ಕೆ ಮುಂದಾಗಿದೆ. ಈ ಕಾರಣದಿಂದ ಸಾವಿರಾರು ಆದಿವಾಸಿ ವಿದ್ಯಾರ್ಥಿಗಳು ಈ ಯೋಜನೆಯಿಂದ ಇನ್ನೂ ದೂರ ಉಳಿದಿದ್ದಾರೆಂದರು.
ಕಾಸರಗೋಡು ಚೆರ್ಕಳ ಕೆ.ಕೆ.ಪುರಂನಲ್ಲಿ 24 ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿರುವ ಶೇರ್ ಎಂಬ ಸಂಸ್ಥೆಯಲ್ಲೂ, ಬಂದಡ್ಕ ಪೂಡಂಕಲ್ಲು ಬೆತ್ತಲಂ ಆದಿವಾಸಿಗಳಿಗೆ ಎಲ್‍ಇಡಿ ಟಿ.ವಿ.ಯನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕೋಶಾಧಿಕಾರಿ ಸರಿತಾ ಮಾವುಂಗಾಲು, ರಾಜ್ಯ ಸಮಿತಿ ಸದಸ್ಯರಾದ ರಮೇಶ್ ಅರಿಂಗಲ್ಲು, ಜ್ಯೋತಿಲಾಷ್ ಕೊಟ್ಟೋಡಿ, ಆಶಾ ರಮೇಶ್, ರಾಹುಲ್ ಕುಟ್ಟಿಕ್ಕೋಲ್ ಮೊದಲಾದವರಿದ್ದರು.