HEALTH TIPS

ಸಾವಿರದ ಅಂಚಿಗೆ ಕೇರಳ-ಇಂದು 790 ಹೊಸ ಸೋಂಕಿತರ ಪತ್ತೆ-ಕಾಸರಗೋಡು : 32 ಮಂದಿಗೆ ಸೋಂಕು ದೃಢ

 
        ತಿರುವನಂತಪುರ: ದಿನೇದಿನೇ ಕೋವಿಡ್ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು ಸಂಪರ್ಕ ಕಾರಣದಿಂದ ವ್ಯಾಧಿ ದ್ವಿಗುಣ-ಮೂರ್ಮಡಿ ಗೊಳ್ಳುತ್ತಿರುವುದು ಆತಂಕ ಮೂಡಿಸುತ್ತಿದೆ. ಶುಕ್ರವಾರ ರಾಜ್ಯಾದ್ಯಂತ 790 ಸೋಂಕಿತರನ್ನು ಪತ್ತೆಹಚ್ಚಲಾಗಿದ್ದು ಸಾವಿರದ ಗಡಿಗೆ ಬಂದು ತಲಪಿದೆ.
         ಆದರೆ ಕಾಸರಗೋಡು ಜಿಲ್ಲೆ ಒಂದಷ್ಟು ಸಮಧಾನಕರ ಮಟ್ಟದಲ್ಲಿ ಮುಂದುವರಿಯುತ್ತಿದೆ. ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 32 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 9 ಮಂದಿ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
22 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಐವರು ವಿದೇಶದಿಂದ ಬಂದವರು, ಮೂವರು ಇತರ ರಾಜ್ಯಗಳಿಂದ ಬಂದವರು. ಒಬ್ಬರು ಆರೋಗ್ಯ ಕಾರ್ಯಕರ್ತರಾಗಿದ್ದಾರೆ. ಒಬ್ಬರಿಗೆ ರೋಗಕ್ಕೆ ಕಾರಣ ತಿಳಿದು ಬಂದಿಲ್ಲ.
        ಕೇರಳದಲ್ಲಿ 791 ಮಂದಿಗೆ ಸೋಂಕು ದೃಢ : ಕೇರಳ ರಾಜ್ಯದಲ್ಲಿ ಶುಕ್ರವಾರ 791 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 133 ಮಂದಿ ಗುಣಮುಖರಾಗಿದ್ದಾರೆಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದ್ದಾರೆ.
       ಈ ತನಕ ರಾಜ್ಯದಲ್ಲಿ 11066 ಮಂದಿಗೆ ರೋಗ ಬಾಧಿಸಿದೆ. ಶುಕ್ರವಾರ ಸಂಪರ್ಕದ ಮೂಲಕ 532 ಮಂದಿಗೆ ರೋಗ ಬಾಧಿಸಿದೆ. ವಿದೇಶದಿಂದ ಬಂದ 135, ಇತರ ರಾಜ್ಯಗಳಿಂದ ಬಂದ 98 ಮಂದಿಗೆ, 15 ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಐಟಿಬಿಪಿ-1, ಬಿಎಸ್‍ಎಫ್-1, ಕೆಎಸ್‍ಇ-7 ಎಂಬಂತೆ ರೋಗ ಬಾಧಿಸಿದೆ. ತೃಶ್ಶೂರು ಪುಲ್ಲೂರಿನ ಶೈಜು ಸಾವಿಗೀಡಾದರು. ಜುಲೈ 14 ರಂದು ಆತ್ಮಹತ್ಯೆಗೈದ ಕುನಿಶ್ಶೇರಿ ನಿವಾಸಿ ಮುರಳಿ ಅವರಿಗೆ ಕೋವಿಡ್ ಪಾಸಿಟಿವ್ ಎಂಬುದಾಗಿ ಪರೀಕ್ಷಾ ಫಲಿತಾಂಶದಲ್ಲಿ ತಿಳಿಯಲಾಗಿದೆ. ಇದು ಕೋವಿಡ್ ಸಾವು ಯಾದಿಯಲ್ಲಿ ಸೇರ್ಪಡೆಯಾಗುವುದಿಲ್ಲ.
          ತಿರುವನಂತಪುರ-246, ಕೊಲ್ಲಂ-47, ಪತ್ತನಂತಿಟ್ಟ-87, ಇಡುಕ್ಕಿ-11, ಆಲಪ್ಪುಳ-57, ಕೋಟ್ಟಯಂ-39, ಎರ್ನಾಕುಳಂ-115, ತೃಶ್ಶೂರು-32, ಪಾಲ್ಘಾಟ್-31, ಮಲಪ್ಪುರಂ-25, ಕಲ್ಲಿಕೋಟೆ-32, ವಯನಾಡು-28, ಕಣ್ಣೂರು-9, ಕಾಸರಗೋಡು-32 ಎಂಬಂತೆ ರೋಗ ಬಾಧಿಸಿದೆ.
      ತಿರುವನಂತಪುರ-8, ಕೊಲ್ಲಂ-7, ಇಡುಕ್ಕಿ-5, ಆಲಪ್ಪುಳ-6, ಕೋಟ್ಟಯಂ-8, ಎರ್ನಾಕುಳಂ-5, ತೃಶ್ಶೂರು-32,  ಮಲಪ್ಪುರಂ-32, ಕಲ್ಲಿಕೋಟೆ-9, ವಯನಾಡು-4, ಕಣ್ಣೂರು-8, ಕಾಸರಗೋಡು-9 ಎಂಬಂತೆ ಗುಣಮುಖರಾಗಿದ್ದಾರೆ.
          ಮಾಸ್ಕ್ ಧರಿಸದ 158 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ 158 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 13106 ಆಗಿದೆ.
         ಲಾಕ್ ಡೌನ್ ಆದೇಶ ಉಲ್ಲಂಘನೆ : 18 ಕೇಸು ದಾಖಲು :   
     ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪಕ್ಕೆ ಸಂಬಂ„ಸಿ  ಕಾಸರಗೋಡು ಜಿಲ್ಲೆಯಲ್ಲಿ 18 ಕೇಸುಗಳನ್ನು ದಾಖಲಿಸಲಾಗಿದೆ. 23 ಮಂದಿಯನ್ನು ಬಂ„ಸಲಾಗಿದ್ದು, 3 ವಾಹನಗಳನ್ನು ವಶಪಡಿಸಲಾಗಿದೆ. ಕುಂಬಳೆ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕಾಸರಗೋಡು 1, ಆದೂರು 1, ಬದಿಯಡ್ಕ 4, ಮೇಲ್ಪರಂಬ 2, ಬೇಕಲ 2, ಹೊಸದುರ್ಗ 2, ನೀಲೇಶ್ವರ 2, ಚಂದೇರ 2, ಚಿತ್ತಾರಿಕಲ್ 1 ಕೇಸುಗಳು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3122 ಆಗಿದೆ. 40606 ಮಂದಿಯನ್ನು ಬಂ„ಸಲಾಗಿದ್ದು, 1277 ವಾಹನಗಳನ್ನು ವಶಪಡಿಸಲಾಗಿದೆ.
         ಕ್ವಾರೆಂಟೈನ್ ಉಲ್ಲಂಘನೆ : ಇಬ್ಬರ ವಿರುದ್ಧ ಕೇಸು : ಕ್ವಾರೆಂಟೈನ್ ಉಲ್ಲಂಘನೆ ಮಾಡಿದ ಆರೋಪದಲ್ಲಿ ಎರಡು ವಿಭಿನ್ನ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ಇಬ್ಬರ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. 
        ಒಂದು ಪ್ರಕರಣದಲ್ಲಿ ಅಕ್ರಮವಾಗಿ ಸುಳ್ಯಕ್ಕೆ ತೆರಳಿ, ಮರಳಿದ ವೇಳೆ ಪತ್ತೆಯಾಗಿ, ಕ್ವಾರೆಂಟೈನ್‍ನಲ್ಲಿರುವಂತೆ ಸಂಬಂಧಪಟ್ಟವರು ಆದೇಶ ನೀಡಿದ್ದರೂ, ನಂತರ ಇದನ್ನು ಉಲ್ಲಂಘಿಸಿ ಆದೂರು ಪೇಟೆಯಲ್ಲಿ ಅಲೆದಾಡುತ್ತಿದ್ದ ಆರೋಪದಲ್ಲಿ ಮುಹಮ್ಮದ್ ಇಲ್ಯಾಸ್(30)  ವಿರುದ್ಧ ಆದೂರು ಪೆÇಲೀಸರು ಕೇಸು ದಾಖಲಿಸಿದ್ದಾರೆ. ಅಂಟುರೋಗ ನಿಯಂತ್ರಣ ಕಾಯಿದೆ ಪ್ರಕಾರ ಕೇಸು ದಾಖಲಿಸಲಾಗಿದ್ದು, ಆರೋಪಿಯನ್ನು ಸಾಂಸ್ಥಿಕ ನಿಗಾದಲ್ಲಿ ದಾಖಲಿಸಲಾಗಿದೆ.
     ಇನ್ನೊಂದು ಪ್ರಕರಣದಲ್ಲಿ ವಿದೇಶದಿಂದ ಊರಿಗೆ ಮರಳಿದ್ದು, ಸಂಬಂಧಪಟ್ಟವರು ಕ್ವಾರೆಂಟೈನ್‍ನಲ್ಲಿ ಇರುವಂತೆ ಆದೇಶ ನೀಡಿದ್ದರೂ, ಉಲ್ಲಂಘಿಸಿ ಅಲೆದಾಡುತ್ತಿದ್ದ ಆರೋಪದಲ್ಲಿ ಮಡಿಕೈ ನಿವಾಸಿ ಪ್ರಕಾಶನ್ (31) ವಿರುದ್ಧ ನೀಲೇಶ್ವರ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಈತನನ್ನು ಈಗ ಸಾಂಸ್ಥಿಕ ನಿಗಾದಲ್ಲಿ ದಾಖಲಿಸಲಾಗಿದೆ. 
      ವಾಹನ ನಿಯಂತ್ರಣ : ಕೋವಿಡ್ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮ ತೀವ್ರಗೊಳಿಸುವ ಅಂಗವಾಗಿ ವಾಹನ ಸಂಚಾರಕ್ಕೆ ಏರ್ಪಡಿಸಿದ ನಿಯಂತ್ರಣದಿಂದಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ವಾಹನಗಳ ಸಂಚಾರದಲ್ಲಿ ಗಣನೀಯವಾಗಿ ಬಾಧಿಸಿದೆ.
    ಕೆ ಎಸ್ ಆರ್ ಟಿ ಸಿ ಬಸ್‍ಗಳ ಸಂಚಾರ ಗಣನೀಯವಾಗಿ ಕಡಿಮೆಗೊಳಿಸಲಾಗಿದೆ. ಕೆಎಸ್‍ಆರ್‍ಟಿಸಿ ಬಸ್ ನೌಕರರು ಬಹುತೇಕ ಮಂದಿ ಕಣ್ಣೂರು ಜಿಲ್ಲೆಯವರು. ಇವರಲ್ಲಿ ಬಹುತೇಕ ಮಂದಿ ತಮ್ಮ ಊರಿಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ನಡೆಸಲು ನೌಕರರ ಕೊರತೆಯ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಅವಲಂಬಿಸಿ ಬಸ್ ಸಂಚಾರ ನಡೆಸಲಾಯಿತು. ಸಾರ್ವಜನಿಕ ವಾಹನಗಳ ಸಂಖ್ಯೆ ಬಹಳಷ್ಟು ಕಡಿಮೆಯಾದುದರಿಂದಾಗಿ ಕಾಸರಗೋಡು ಪೇಟೆ ಬಿಕೋ ಎನ್ನುತ್ತಿತ್ತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries