HEALTH TIPS

ರಾಜ್ಯದಲ್ಲಿ ಇಂದು 794 ಹೊಸ ಸೋಂಕಿತರು-ಕಾಸರಗೋಡು : 28 ಮಂದಿಗೆ ಸೋಂಕು ದೃಢ

   
       ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 28 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದ್ದು, 10 ಮಂದಿ ಗುಣಮುಖರಾಗಿದ್ದಾರೆ. ಸಂಪರ್ಕದ ಮೂಲಕ 11 ಮಂದಿಗೆ ರೋಗ ಬಾಧಿಸಿದೆ. ರೋಗ ಬಾಧಿತರಲ್ಲಿ 8 ಮಂದಿ ವಿದೇಶದಿಂದಲೂ, 9 ಮಂದಿ ಇತರ ರಾಜ್ಯಗಳಿಂದ ಬಂದವರು.
             ಕೇರಳ 794 ಮಂದಿಗೆ ಸೋಂಕು : ಕೇರಳ ರಾಜ್ಯದಲ್ಲಿ ಸೋಮವಾರ 794 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ವೇಳೆ 245 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 148 ಮಂದಿ ವಿದೇಶದಿಂದಲೂ, 105 ಮಂದಿ ಇತರ ರಾಜ್ಯಗಳಿಂದ ಬಂದವರು. 519 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. 15 ಮಂದಿ ಆರೋಗ್ಯ ಕಾರ್ಯಕರ್ತರಿಗೆ, ಇಬ್ಬರು ಬಿ.ಎಸ್.ಎಫ್. ಜವಾನರಿಗೆ, ನಾಲ್ವರು ಕೆ.ಎಸ್.ಸಿ. ಸಿಬ್ಬಂದಿಗಳಿಗೆ ರೋಗ ಬಾಧಿಸಿದೆ.
        ತಿರುವನಂತಪುರ-182, ಕಲ್ಲಿಕೋಟೆ-92, ಕೊಲ್ಲಂ-79, ಎರ್ನಾಕುಳಂ-72, ಆಲಪ್ಪುಳ-53, ಮಲಪ್ಪುರಂ-50, ಪಾಲ್ಘಾಟ್-49, ಕಣ್ಣೂರು-48, ಕೋಟ್ಟಯಂ-46, ತೃಶ್ಶೂರು-42, ಕಾಸರಗೋಡು-28, ವಯನಾಡು-26, ಇಡುಕ್ಕಿ-24, ಪತ್ತನಂತಿಟ್ಟ-3 ಎಂಬಂತೆ ರೋಗ ಬಾಧಿಸಿದೆ.
      ಪಾಲ್ಘಾಟ್-93, ತೃಶ್ಶೂರು-45, ಮಲಪ್ಪುರಂ-35(ಪಾಲ್ಘಾಟ್-1, ಕಲ್ಲಿಕೋಟೆ-2), ಕೋಟ್ಟಯಂ-19(ಪತ್ತನಂತಿಟ್ಟ-1, ಇಡುಕ್ಕಿ-1), ಪತ್ತನಂತಿಟ್ಟ-16, ಕಾಸರಗೋಡು-10, ಆಲಪ್ಪುಳ-9, ಎರ್ನಾಕುಳಂ-8(ಆಲಪ್ಪುಳ-1), ಕಲ್ಲಿಕೋಟೆ(ಪತ್ತನಂತಿಟ್ಟ-1), ಕಣ್ಣೂರು(ಕಲ್ಲಿಕೋಟೆ-1) -4, ತಿರುವನಂತಪುರ-2(ಕೊಲ್ಲಂ-1) ಎಂಬಂತೆ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ 7611 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ವರೆಗೆ 5618 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 43 ಮಂದಿ ಸಾವಿಗೀಡಾಗಿದ್ದಾರೆ.
              ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 28 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. ಇವರಲ್ಲಿ 11 ಮಂದಿಗೆ ಸಂಪರ್ಕ ದಿಂದ ಸೋಂಕು ತಗುಲಿದೆ.(5 ಮಂದಿಯ ಸಂಪರ್ಕ ಮೂಲ ಪತ್ತೆಯಾಗಿಲ್ಲ) 8 ಮಂದಿ ವಿದೇಶದಿಂದ, 9 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
                    ಸಂಪರ್ಕ ದಿಂದ ಸೋಂಕು
          ಮೀಂಜ ಪಂಚಾಯತ್ ನ 40, ಕಾರಡ್ಕ ಪಂಚಾಯತ್ ನ 34, ಮಂಗಲ್ಪಾಡಿ ಪಂಚಾಯತ್ ನ 31 ವರ್ಷದ ಪುರುಷರು, ಕಾಸರಗೋಡು ನಗರಸಭೆಯ 48 ವರ್ಷದ ಮಹಿಳೆ(ಇವರಲ್ಲಿ ಯಾರದ್ದೂ ಸಂಪರ್ಕ ಮೂಲ ಪತ್ತೆಯಾಗಿಲ್ಲ.), 47 ವರ್ಷದ ಪುರುಷ, ಇವರ ಪತ್ನಿ 38 ವರ್ಷದಾಕೆ, ತ್ರಿಕರಿಪುರ ಪಂಚಾಯತ್ ನ 47 ವರ್ಷದ ಪುರುಷ, ಕುಂಬಳೆ ಪಂಚಾಯತ್ ನ 4 ವರ್ಷದ ಬಾಲಕ, ಮೊಗ್ರಾಲ್ ಪುತ್ತೂರು ಪಂಚಾಯತ್ ನ ಒಂದು ವರ್ಷದ ಬಾಲಕ(ಬಾಲಕರಿಬ್ಬರಿಗೆ ಪ್ರಾಥಮಿಕ ಸಂಪರ್ಕ) ಸೋಂಕು ತಗುಲಿದವರು.
                     ವಿದೇಶದಿಂದ ಬಂದವರು
       ಖತಾರ್ ನಿಂದ ಬಂದಿದ್ದ ನೀಲೇಶ್ವರ ನಗರಸಭೆಯ 34, ವರ್ಕಾಡಿ ಪಂಚಾಯತ್ ನ 36, ಸೌದಿಯಿಂದ ಆಗಮಿಸಿದ್ದ ಮಂಜೇಶ್ವರ ಪಂಚಾಯತ್ ನ 37, ಎಣ್ಮಕಜೆ ಪಂಚಾಯತ್ ನ 52, ದುಬಾಯಿಯಿಂದ ಬಂದಿದ್ದ ಬಳಾಲ್ ಪಂಚಾಯತ್ ನ 22 ವರ್ಷದ ಪುರುಷರು, 28 ವರ್ಷದ ಮಹಿಳೆ. ಚೆಮ್ನಾಡಿನ 43, ಅಬುದಾಭಿಯಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 45 ವರ್ಷದ ಪುರುಷ ರೋಗ ಖಚಿತಗೊಂಡವರು.
                      ಇತರ ರಾಜ್ಯಗಳಿಂದ ಆಗಮಿಸಿದವರು
    ಹಾಸನದಿಂದ ಬಂದಿದ್ದ ಮಡಿಕೈ ಪಂಚಾಯತ್ ನ 50, ಜಮ್ಮುವಿನಿಂದ ಆಗಮಿಸಿದ್ದ ಬಳಾಲ್ ಪಂಚಾಯತ್ ನ 29 ವರ್ಷದ ಪುರುಷರು, ಮೈಸೂರಿನಿಂದ ಬಂದಿದ್ದ 27 ವರ್ಷದ ಮಹಿಳೆ, ಮಂಜೇಶ್ವರ ಪಂಚಾಯತ್ ನ 26 ವರ್ಷದ ಪುರುಷ(ತರಕಾರಿ ವಾಹನದ ಚಾಲಕ), ಚೆನೈಯಿಂದ ಆಗಮಿಸಿದ್ದ ಪುಲ್ಲೂರು-ಪೆರಿಯ ಪಂಚಾಯತ್ ನ 21, ಮಂಗಳೂರಿನ ಹೋಟೆಲೊಂದರ ಸಿಬ್ಬಂದಿ ವರ್ಕಾಡಿ ಪಂಚಾಯತ್ ನ 42, ಕುಂಬಳೆ ಪಂಚಾಯತ್ ನ 26, ಬೆಂಗಳೂರಿನ ಹೋಟೆಲೊಂದರ ಸಿಬ್ಬಂದಿ ಕಾಸರಗೋಡು ನಗರಸಭೆಯ 26, ಮಂಗಳೂರಿನ ಸಂಸ್ಥೆಯೊಂದರ ಸೇಲ್ಸ್ ಮ್ಯಾನ್ ಮೊಗ್ರಾಲ್ ಪುತ್ತೂರು ಪಂಚಾಯತ್ ನ 34 ವರ್ಷದ ಪುರುಷರಿಗೆ ಸೋಂಕು ಖಚಿತವಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 11 ಮಂದಿಗೆ ಕೋವಿಡ್ ರೋಗಮುಕ್ತಿ
             ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ 11 ಮಂದಿಗೆ ಕೋವಿಡ್ ರೋಗಮುಕ್ತಿ(ನೆಗೆಟಿವ್) ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಡಿ.ಎ.ವಿ.ರಾಮದಾಸ್ ತಿಳಿಸಿದರು.
         ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಮಂಜೇಶ್ವರ ಪಂಚಾಯತ್ ನ 43, ಕುಂಬಳೆ ಪಂಚಾಯತ್ ನ 38, ಕಾಸರಗೋಡು ನಗರಸಭೆಯ 25, ಚೆಮ್ನಾಡ್ ಪಂಚಾಯತ್ ನ 35, ಚೆಂಗಳ ಪಂಚಾಯತ್ ನ 29 ವರ್ಷದ ಪುರುಷರು.
                           ಉದಯಗಿರಿ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಕಾಸರಗೋಡು ನಗರಸಭೆ ವ್ಯಾಪ್ತಿಯ 16 ವರ್ಷದ ಯುವತಿ.
                            ಸರ್ಜಿ ಕೇರ್ ಸಿ.ಎಫ್.ಎಲ್.ಟಿ.ಸಿ.ಯಲ್ಲಿ ದಾಖಲಾಗಿದ್ದ ಚೆಂಗಳ ಪಂಚಾಯತ್ ನ 9 ವರ್ಷದ ಬಾಲಕ, 3 ವರ್ಷದ ಬಾಲಕಿ, ಮುಳಿಯಾರು ಪಂಚಾಯತ್ ನ 10 ವರ್ಷದ ಬಾಲಕ, 4 ವರ್ಷದ ಬಾಲಕಿ.
                             ಕಣ್ಣೂರು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಕುಂಬಳೆ ಪಂಚಾಯತ್ ನ 52 ವರ್ಷದ ಪುರುಷ ಕೋವಿಡ್ ನಿಂದ ಗುಣಮುಖರಾಗಿದ್ದಾರೆ.
               ಕಾಸರಗೋಡು ಜಿಲ್ಲೆಯಲ್ಲಿ 5185 ಮಂದಿ ನಿಗಾದಲ್ಲಿ
                                                      ಕಾಸರಗೋಡು ಜಿಲ್ಲೆಯಲ್ಲಿ 5185 ಮಂದಿ ನಿಗಾದಲ್ಲಿದ್ದಾರೆ. ಇವರಲ್ಲಿ 4320 ಮಂದಿ ಮನೆಗಳಲ್ಲಿ, 865 ಮಂದಿ ಸಾಂಸ್ಥಿಕವಾಗಿ ನಿಗಾದಲ್ಲಿದ್ದಾರೆ. ನೂತನವಾಗಿ 239 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 467 ಮಂದಿ ಸೋಮವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
                      38 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 825 ಮಂದಿಯ ಫಲಿತಾಂಶ ಲಭಿಸಿಲ್ಲ.
     ಮಾಸ್ಕ್ ಧರಿಸದ 170 ಮಂದಿ ವಿರುದ್ಧ ಕೇಸು : ಮಾಸ್ಕ್ ಧರಿಸದೇ ಇದ್ದ ಪ್ರಕರಣಕ್ಕೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ 170 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಒಟ್ಟು ಸಂಖ್ಯೆ 13630 ಆಗಿದೆ.
ಲಾಕ್‍ಡೌನ್ ಉಲ್ಲಂಘನೆ : 13 ಕೇಸು ದಾಖಲು : ಲಾಕ್‍ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ 13 ಕೇಸುಗಳನ್ನು ದಾಖಲಿಸಲಾಗಿದೆ. 20 ಮಂದಿಯನ್ನು ಬಂ„ಸಲಾಗಿದ್ದು, 2 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೆÇಲೀಸ್ ಠಾಣೆಯಲ್ಲಿ 1 ಕೇಸು, ಕುಂಬಳೆ 2, ಕಾಸರಗೋಡು 1, ವಿದ್ಯಾನಗರ 2, ಮೇಲ್ಪರಂಬ 2, ಬೇಕಲ 1, ಹೊಸದುರ್ಗ 1, ಚಂದೇರ 1, ವೆಳ್ಳರಿಕುಂಡ್ 1, ಚಿತ್ತಾರಿಕಲ್ 1 ಕೇಸು ದಾಖಲಾಗಿವೆ. ಈ ಮೂಲಕ ಈ ಪ್ರಕರಣಗಳಿಗೆ ಸಂಬಂ„ಸಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ದಾಖಲಾದ ಕೇಸುಗಳ ಸಂಖ್ಯೆ 3140 ಆಗಿದೆ. 4170 ಮಂದಿಯನ್ನು ಬಂ„ಸಲಾಗಿದೆ. 1275 ವಾಹನಗಳನ್ನು ವಶಪಡಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries