HEALTH TIPS

ಮೊಗ್ರಾಲ್, ಕುಂಬೋಲ್ ವಾರ್ಡ್ 7 ದಿನಗಳ ಕಾಲ ಮುಚ್ಚುಗಡೆ: ಜಿಲ್ಲಾಧಿಕಾರಿ


      ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಸೋಮವಾರ ಅತ್ಯಧಿಕ ಪ್ರಮ್ರಾಣದಲ್ಲಿ ಕೋವಿಡ್ 19 ಬಾಧಿತರು(ಸಂಪರ್ಕದಿಂದ ಸೋಂಕು ತಗುಲಿದವರು) ವರದಿಯಾಗಿರುವ ಕುಂಬಳೆ ಗ್ರಾಮಪಂಚಾಯತ್ ನ ಮೊಗ್ರಾಲ್ (ವಾರ್ಡ್ 18), ಕುಂಬೋಲ್(ವಾರ್ಡ್ 1) ಪ್ರದೇಶಗಳಲ್ಲಿ ಮುಂದಿನ 7 ದಿನಗಳ ವರೆಗೆ ಪೂರ್ಣರೂಪದಲ್ಲಿ ಮುಚ್ಚುಗಡೆ ನಡೆಸಲು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಆದೇಶ ನೀಡಿದ್ದಾರೆ.
      ಈ ಅವಧಿಯಲ್ಲಿ ಇಲ್ಲಿನ ಎಲ್ಲ ಅಗಡಿಗಳು ಮುಚ್ಚುಗಡೆಯಲ್ಲಿರಬೇಕು. ಅನಿವಾರ್ಯ ಸಾಮಾಗ್ರಿ ಮಾರಾಟದ ಅಂಗಡಿಗಳು ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಆರೋಗ್ಯ ಇಲಾಖೆಯ ಎಲ್ಲ ಕಟ್ಟುನಿಟ್ಟು ಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಚಟುವಟಿಕೆ ನಡೆಸಬೇಕು. ಇಲ್ಲಿ ಆಟೋ, ಟ್ಯಾಕ್ಸಿ ಸ್ಟಾಂಡ್ ಗಳು ಚಟುವಟಿಕೆ ನಡೆಸಕೂಡದು. ಬಸ್ ಗಳಲ್ಲಿ ಈ ಪ್ರದೇಶಗಳಲ್ಲಿ ಪ್ರಯಾಣಿಕರನ್ನು ಇಳಿಸುವುದು, ಏರಿಕೆ ನಡೆಸುವುದು ಸಲ್ಲದು. ಈ ಪ್ರದೇಶಗಳಲ್ಲಿ ಬಿಗಿ ಪೆÇಲೀಸ್ ಭದ್ರತೆ ಇರುವುದು ಎಂದು ಜಿಲ್ಲಾಧಿಕಾರಿ ತಿಳಿಸಿರುವರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries