ತಿರುವನಂತಪುರ: ಅಕ್ರಮ ಚಿನ್ನ ಕಳ್ಳ ಸಾಗಣಿಕೆಗೆ ಸಂಬಂಧಿಸಿ ಕೆಪಿಸಿಸಿ ಅಧ್ಯಕ್ಷ ಮುಲ್ಲಪ್ಪಳ್ಳಿ ರಾಮಚಂದ್ರನ್ ಅವರು ಕೇರಳ ಪೋಲೀಸರ ವಿರುದ್ಧ ಆರೋಪ ಹೊರಿಸುವ ಮೂಲಕ ಪ್ರಕರಣದ ಮಗ್ಗುಲು ಇನ್ನಷ್ಟು ಗಂಭೀರತೆ ಪಡೆಯುವ ಸೂಚನೆ ಲಭಿಸಿದೆ. ಮುಖ್ಯಮಂತ್ರಿ ಕಚೇರಿಯ ಬಳಿಕ ಕೇರಳ ಪೋಲೀಸರು ಚಿನ್ನದ ಕಳ್ಳಸಾಗಣೆ ಪ್ರಕರಣದಲ್ಲಿ ಅನುಮಾನದ ನೆರಳಿನಲ್ಲಿದ್ದಾರೆ ಎಂದು ಅವರು ಮುಲ್ಲಪ್ಪಳ್ಳಿ ಆರೋಪಿಸಿರುವರು. ಈ ಮೂಲಕ ಪೋಲೀಸ್ ಇಲಾಖೆ ಬೃಹತ್ ಪ್ರಪಾತಕ್ಕೆ ತಳ್ಳಲ್ಪಡುತ್ತಿದೆ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಕರಣದಲ್ಲಿ ಈಗಾಗಲೇ ಕೇರಳ ಪೋಲೀಸರ ವರ್ತನೆ ಪ್ರಶ್ನಾರ್ಹವಾಗಿದೆ. ಚಿನ್ನದ ಕಳ್ಳಸಾಗಣೆ ಪ್ರಕರಣದ ಆರೋಪಿಗಳಿಗೆ ಪೋಲೀಸರು ಸಹಾಯ ಮಾಡುತ್ತಿದ್ದಾರೆ. ಅನೇಕ ಹಿರಿಯ ಪೆÇಲೀಸ್ ಮುಖ್ಯಸ್ಥರು ಹಗರಣದೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಮುಲ್ಲಪ್ಪಳ್ಳಿ ಹೇಳಿದ್ದು ರಾಜ್ಯ ರಾಜಕೀಯದಲ್ಲಿ ಇಷ್ಟು ಬೇಜವಾಬ್ದಾರಿಯ ಗೃಹ ಸಚಿವಾಲಯ ಇದೇ ಮೊದಲ ಬಾರಿಗೆ ಕಾಣಬೇಕಾಯಿತು ಎಂದು ಟೀಕೆ ವ್ಯಕ್ತಪಡಿಸಿದರು.
'ಅನೇಕ ಉನ್ನತ ಪೋಲೀಸ್ ಮುಖ್ಯಸ್ಥರು ಈ ಗ್ಯಾಂಗ್‍ನೊಂದಿಗೆ ನಿಕಟ ಸಂಬಂಧ ಹೊಂದಿದ್ದಾರೆ. ತನಿಖೆ ಆ ಮಟ್ಟವನ್ನು ತಲುಪುತ್ತದೆಯೇ ಎಂದು ಜನರು ಕಾಯುತ್ತಿದ್ದಾರೆ. ಈ ಪ್ರಕರಣದ ಆರೋಪಿಗಳು ರಾಜ್ಯದೊಳಗಿನ ಪೋಲೀಸರ ಬೆಂಬಲವಿಲ್ಲದೆ ಕೇರಳವನ್ನು ದಾಟಿ ತೆರಳಲು ಸಾಧ್ಯವಿಲ್ಲ. ಕೇರಳದಿಂದ ತಪ್ಪಿಸಿಕೊಳ್ಳಲು ಆರೋಪಿಗಳಿಗೆ ಸಹಾಯ ಮಾಡಿದ ಖಾಕಿಗಳು ಮುಖ್ಯಮಂತ್ರಿಯವರ ಸಹಾಯದಿಂದ ಇನ್ನೂ ಪ್ರಬಲರಾಗಿದ್ದಾರೆ ಎಂದು ಮುಲ್ಲಪ್ಪಳ್ಳಿ ಕಟುವಾಗಿ ಹೇಳಿರುವರು.
ಚಿನ್ನ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿ ಸ್ವಪ್ನಾ ಸುರೇಶ್ ವಿರುದ್ಧ ಕೇರಳ ಪೋಲೀಸರು ಮೊಕದ್ದಮೆ ಹೂಡಲು ಹಿಂದೆ ಮುಂದೆ ನೋಡುತ್ತಿರುವುದು ಉನ್ನತ ಪೋಲೀಸ್ ಅಧಿಕೃತರ ಕೈವಾಡದಿಂದ ಎಂದು ಮುಲ್ಲಪ್ಪಳ್ಳಿ ಆರೋಪಿಸಿದ್ದಾರೆ.
ಯುಎಇ ಕಾನ್ಸುಲೇಟ್ ಜನರಲ್ ಗೆ ಅಂಗರಕ್ಷಕನ್ನು ನೇಮಿಸಿರುವುದು ಡಿಜಿಪಿಯ ಅನಗತ್ಯ ತೀರ್ಮಾನವಾಗಿದ್ದು ಇದರ ಹಿಂದಿರುವ ಶಕ್ತಿ ಯಾವುದಿರಬಹುದೆಂಬುದು ಕುತೂಹಲವಾದುದು. 'ವಿದೇಶಾಂಗ ರಾಜತಾಂತ್ರಿಕರ ಭದ್ರತೆಯ ಉಸ್ತುವಾರಿಯನ್ನು ವಿದೇಶಾಂಗ ಸಚಿವಾಲಯ ಹೊಂದಿದೆ. ಆದರೆ, ಡಿಜಿಪಿ ವಿದೇಶಾಂಗ ಸಚಿವಾಲಯದ ಅನುಮತಿಯಿಲ್ಲದೆ ನೇರವಾಗಿ ಅಂಗರಕ್ಷಕನನ್ನು ಕಾನ್ಸುಲೇಟ್ ಜನರಲ್ ಗೆ ಒದಗುವಂತೆ ಮಾಡಿರುವರು. ಡಿಜಿಪಿಯ ಇಂತಹ ನಡೆ ಅಧಿಕಾರ ದುರುಪಯೋಗದ ಪ್ರತೀಕ' ಎಂದು ಕೆಪಿಸಿಸಿ ಅಧ್ಯಕ್ಷರು ಬೊಟ್ಟುಮಾಡಿರುವುದು ಘಟನೆಗೆ ಸಂಬಂಧಿಸಿ ಇನ್ನೊಂದು ಮಗ್ಗಲದ ಬೃಹತ್ ಭ್ರಷ್ಟಾಚಾರದ ನಿದರ್ಶನವಾಗಿದೆ ಎಮದು ಮುಲ್ಲಪ್ಪಳ್ಳಿ ಟೀಕಿಸಿದರು.
ಇದೇ ರೀತಿಯ ಅಪರಾಧಕ್ಕಾಗಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದ ಮುಲ್ಲಪ್ಪಳ್ಳಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ವರ್ತಿಸಿದ ಡಿಜಿಪಿಯನ್ನು ಅಮಾನತುಗೊಳಿಸಬೇಕು ಮತ್ತು ಡಿಜಿಪಿ ಪಾತ್ರವನ್ನು ಎನ್‍ಐಎ ಪ್ರತ್ಯೇಕವಾಗಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿರುವರು.


