HEALTH TIPS

ಜೆಡಿಎಸ್ ನೇತಾರನಿಗೆ ಕೋವಿಡ್- ಸಂಪರ್ಕಕ್ಕೆ ಬಂದ ಎಡ ನಾಯಕರ ಫಲಿತಾಂಶ ನೆಗೆಟಿವ್

   
          ಕಾಸರಗೋಡು: ಕುಂಜತ್ತೂರಿನ ಜೆಡಿಎಸ್ ನಾಯಕನಿಗೆ ಕೋವಿಡ್ ದೃಢಪಟ್ಟಿದ್ದು ಇದರ ಬೆನ್ನಿಗೆ ಅವರ ಸಂಪರ್ಕದಲ್ಲಿದ್ದ ಜಿಲ್ಲೆಯ ಎಡಪಕ್ಷದ ಹಲವು ನಾಯಕರ ಫಲಿತಾಂಶ ನೆಗೆಟಿವ್ ಆಗಿರುವುದಾಗಿ ತಿಳಿದುಬಂದಿದೆ. ಎಡ ಪಕ್ಷದ ಜಿಲ್ಲಾ ಸಮಿತಿ ಸಭೆ ಈ ತಿಂಗಳ 11 ರಂದು ಕಾಞಂಗಾಡ್ ನಲ್ಲಿ ನಡೆದಿತ್ತು. ಈ ಸಭೆಯಲ್ಲಿ ಭಾಗವಹಿಸಿದ ಜೆಡಿಎಸ್ (ಯು) ನಾಯಕನಿಗೆ ಕೋವಿಡ್ ಸೋಂಕು ಇರುವುದು ಭಾನುವಾರ ದೃಢಪಟ್ಟಿತ್ತು. ಇದರ ಬೆನ್ನಲ್ಲೇ ಸಿಪಿಎಂ, ಸಿಪಿಐ, ಕಾಂಗ್ರೆಸ್ ಎಸ್ ಸೇರಿದಂತೆ 24 ರಾಜಕೀಯ ಪಕ್ಷದ ನಾಯಕರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಬಳಿಕ ಸೋಮವಾರದ ಫಲಿತಾಂಶದಲ್ಲಿ ಕೋವಿಡ್ ಇಲ್ಲವೆಮದು ಸಾಬೀತಾಗಿದೆ.  ಆದರೆ, ಜೆಡಿಎಸ್ ನಾಯಕನಿಗೆ ಈ ಸೋಂಕು  ಯಾರಿಂದ ಹರಡಿತು ಎಂದು ತಿಳಿದುಬಂದಿಲ್ಲ.
           ಕೋವಿಡ್ 19 ನಿನ್ನೆ ಜಿಲ್ಲೆಯಲ್ಲಿ ಇನ್ನೂ 28 ಮಂದಿಗಳಲ್ಲಿ ದೃಢಪಡಿಸಲಾಗಿದೆ. ಈ ಪೈಕಿ  11 ಮಂದಿಗಳಿಗೆ ಸಂಪರ್ಕದ ಮೂಲಕ (5 ಮೂಲಗಳು ಲಭ್ಯವಿಲ್ಲ), ಎಂಟು ವಿದೇಶಗಳಿಂದ ಮತ್ತು ಒಂಬತ್ತು ಇತರ ರಾಜ್ಯಗಳಿಂದ ಬಂದವು ಎಂದು ಡಿಎಂಒ ತಿಳಿಸಿದ್ದಾರೆ. ಇತರ 11 ಜನರಿಗೆ ಋಣಾತ್ಮಕವಾಗಿತ್ತು.
      ಅತೀ ಹೆಚ್ಚು ಕೋವಿಡ್ ಬಾಧಿತರನ್ನು ಹೊಂದಿರುವ ಕುಂಬಳೆ ಗ್ರಾ. ಪಂಚಾಯತ್‍ನ ಮೊಗ್ರಾಲ್ (ವಾರ್ಡ್ 18) ಮತ್ತು ಕುಂಬೋಳ್ (ವಾರ್ಡ್ 1) ಮುಂದಿನ ಏಳು ದಿನಗಳವರೆಗೆ ಮುಚ್ಚಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಡಿ ಸಜಿತ್ ಬಾಬು ಆದೇಶಿಸಿರುವರು. ಅಂಗಡಿಗಳು ಸೇರಿದಂತೆ ಸಂಸ್ಥೆಗಳನ್ನು ಈ ದಿನಗಳಲ್ಲಿ ಮುಚ್ಚಲಾಗುತ್ತದೆ.  ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಕೋವಿಡ್ ನಿಬಂಧನೆಗಳಿಗೆ ಅನುಸಾರ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪರ್ಯಾಯ ದಿನಗಳಲ್ಲಿ ಬೆಳಿಗ್ಗೆ 11 ರಿಂದ ಸಂಜೆ 5 ರವರೆಗೆ ಕಾರ್ಯನಿರ್ವಹಿಸಬಹುದು. ಆಟೋ ಟ್ಯಾಕ್ಸಿ ಸ್ಟ್ಯಾಂಡ್‍ಗಳನ್ನು  ಅನುಮತಿಸಲಾಗುವುದಿಲ್ಲ. ಬಸ್‍ನಲ್ಲಿ ಪ್ರಯಾಣ, ಇತರ ವಾಹನಗಳಲ್ಲಿ ಪ್ರಯಾಣ ನಿಷೇಧಿಸಲಾಗಿದೆ. ಅನಗತ್ಯ ಪ್ರಯಾಣವನ್ನು ಅನುಮತಿಸಲಾಗುವುದಿಲ್ಲ. ಈ ಪ್ರದೇಶವು ಕಟ್ಟುನಿಟ್ಟಿನ  ಪೆÇಲೀಸ್ ಕಣ್ಗಾವಲಿನಲ್ಲಿರುತ್ತದೆ ಎಂದು ಡಿಸಿ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries