HEALTH TIPS

ಕೋವಿಡ್ ನಿಯಂತ್ರಣ ಬಿಗು-ಅಂಗಡಿಗಳು ಬೆಳಗ್ಗೆ 8ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ


          ಕಾಸರಗೋಡು: ಕೋವಿಡ್ ಸಾಮುದಾಯಿಕ ವ್ಯಾಪಕತೆಯ ಹಿನ್ನೆಲೆಯಲ್ಲಿ ಕಟ್ಟುನಿಟ್ಟುಗಳನ್ನು ಮತ್ತೆ ಬಿಗಿಗೊಳಿಸಲಾಗಿದ್ದು, ಗುರುವಾರದಿಂದ ಕಾಸರಗೋಡು ಜಿಲ್ಲೆಯಲ್ಲಿ ಅಂಗಡಿಗಳು ಬೆಳಗ್ಗೆ 8 ರಿಂದ ಸಂಜೆ 6 ಗಂಟೆ ವರೆಗೆ ಮಾತ್ರ ತೆರೆದು ಕಾರ್ಯರಿಸಲು ಅನುಮತಿಯಿರುವುದು.
          ರಾಷ್ಟ್ರೀಯ ಹೆದ್ದಾರಿ ಬದಿ ಪ್ರದೇಶಗಳು ಕಂಟೈ ನ್ಮೆಂಟ್ ಝೋನ್ ಗಳು:
       ಕುಂಬಳೆಯಿಂದ ತಲಪ್ಪಾಡಿ ವರೆಗಿನ ರಾಷ್ಟ್ರೀಯ ಹೆದ್ದಾರಿ ಬದಿ ಪ್ರದೇಶಗಳು ಕಂಟೈನ್ಮೆಂಟ್ ಝೋನ್ ಗಳಾಗಿ ಜಿಲ್ಲಾಧಿಕಾರಿ ಘೋಷಿಸಿರುವರು. ಹೆದ್ದಾರಿ ಹಾದುಹೋಗುವ ಪರಿಸರದಲ್ಲಿ ರೋಗಿಗಳು ಅತ್ಯಧಿಕ ಪ್ರಮಾಣದಲ್ಲಿದ್ದು, ರೋಗ ಹೆಚ್ಚಳವೂ ಈ ಪ್ರದೇಶದಲ್ಲಿ ಕಂಡುಬರುತ್ತಿದೆ. ಇಲ್ಲಿ ದಿನ ಬಿಟ್ಟು ದಿನ ಬೆಳಗ್ಗೆ 11 ರಿಂದ ಸಂಜೆ 5 ಗಂಟೆ ವರೆಗೆ ಅಗತ್ಯ ಸಾಮಾಗ್ರಿಗಳ ಅಂಗಡಿಗಳು ಮಾತ್ರ ತೆರೆಯಲಿವೆ. ಬ್ಯಾಂಕ್ ಗಳು ಈ ಝೋನ್ ಪ್ರದೇಶಗಳಲ್ಲಿ ಚಟುವಟಿಕೆ ನಡೆಸಬಹುದು. ಆದರೆ ಜನ ಪ್ರವೇಶಿಸುವುದಕ್ಕೆ ಅನುಮತಿಯಿಲ್ಲ. ಎಲ್ಲ ಸೇವೆಗಳೂ ಆನ್ ಲೈನ್ ಮೂಲಕ ಮಾತ್ರ ನಡೆಸಬೇಕು. ಈ ಝೊನ್ ಗಳಲ್ಲಿ ಹೆಚ್ಚುವರಿ ಪೆÇಲೀಸರ ನೇಮಕ ನಡೆಯಲಿದೆ. ಅನಗತ್ಯ ಸಂಚಾರ ತಡೆ ಸಹಿತ ಕಟ್ಟುನಿಟ್ಟು ಬಿಗಿಯಾಗಿರುವುದು.   
           14 ದಿನಗಳಿಗೆ ಸಾರ್ವಜನಿಕ ಯಾ ಖಾಸಗೀ ಸಭೆಗಳಿಗೆ ನಿಷೇಧ:
     ಸರಕಾರಿ ಕಚೇರಿಗಳಲ್ಲಿ ನಡೆಸುವ ಎಲ್ಲ ಸಭೆಗಳನ್ನೂ 14 ದಿನಗಳ ಕಾಲ ನಿಲುಗಡೆ ಮಾಡುವಂತೆ ಜಿಲ್ಲಾ ಮಟ್ಟದ ಕೋರ್ ಸಮಿತಿ ಸಭೆ ತೀರ್ಮಾನಿಸಿದೆ. ಹಿಯರಿಂಗ್ ಸಹಿತ ಜಿಲ್ಲೆಯ ಎಲ್ಲ ಸಭೆಗಳು ಈ ಅವಧಿಯಲ್ಲಿ ಇರುವುದಿಲ್ಲ.
            ಇಂದಿನಿಂದ (ಜು.17) ಸಾರ್ವಜನಿಕ ಸಂಚಾರ ನಿಯಂತ್ರಣ:
      ಇಂದಿನಿಂದ ಸಾರ್ವಜನಿಕ ಸಂಚಾರ ನಿಯಂತ್ರಣ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೆ ಬರಲಿದೆ. ತೆಂಕಣ ಜಿಲ್ಲೆಯ ಗಡಿ ವರೆಗೆ ಈ ನಿಯಂತ್ರಣ ಇರುವುದು. ಕೆ.ಎಸ್.ಆರ್.ಟಿ.ಸಿ. ಬಸ್, ಖಾಸಗಿ ಬಸ್ ಸೇವೆ ನಡೆಸುವಂತಿಲ್ಲ ಎಂದು ನಿರ್ಧರಿಸಲಾಗಿದೆ.
           31 ವರೆಗೆ ಕರ್ನಾಟಕದಿಂದ ತರಕಾರಿ ವಾಹನಕ್ಕೆ ಪ್ರವೇಶ ನಿಷೇಧ:
     ಜು.31 ವರೆಗೆ ಕಾಸರಗೋಡು ಜಿಲ್ಲೆಗೆ ಕರ್ನಾಟಕದಿಂದ ಹಣ್ಣು, ತರಕಾರಿ ವಾಹನಗಳ ಮೂಲಕ ರವಾನಿಸಕೂಡದು. ಈ ಸಂದರ್ಭ ಜಿಲ್ಲೆಯಲ್ಲಿ ತರಕಾರಿ ಕೊರತೆ ನಡೆಯದಂತೆ ಖಚಿತತೆ ನಡೆಸಲು ಕೃಷಿ ಇಲಾಖೆ ಮೂಲಕ ಕೃಷಿಕರಿಂದ ತರಕಾರಿ ಖರೀದಿಸಿ, ಮಾರಾಟ ನಡೆಸಲಾಗುವುದು. ಡೈಲಿ ಪಾಸ್ ನಿಲುಗಡೆ ಮಾಡಲಾಗಿದೆ.
         ಆನಿವಾಸಿಗಳಿಗೆ ಕೋವಿಡ್ ಟೆಸ್ಟ್:
     ವಿದೇಶಗಳಿಗೆ ಮರಳುವ ಆನಿವಾಸಿಗಳಿಗೆ ಕೋವಿಡ್ ಟೆಸ್ಟ್ ಸೌಲಭ್ಯಕ್ಕಾಗಿ ಕಣ್ಣೂರು ಜಿಲ್ಲೆಯ ಎರಡು ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
     ಕಚೇರಿಗಳಿಗೆ ಜನ ಸಂದರ್ಶನವಿಲ್ಲ:
   ಸರಕಾರಿ ಕಚೇರಿಗಳಿಗೆ ಸಾರ್ವಜನಿಕರು ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ. ಸೇವೆಗಳು ಆನ್ ಲೈನ್ ಮೂಲಕ ನಡೆಯಲಿದೆ. "ಎಂಡೆ ಜಿಲ್ಲ" ಆಪ್ ನಲ್ಲಿ  ಸಿಬ್ಬಂದಿಯ ದೂರವಾಣಿ ನಂಬ್ರಗಳು ಲಭ್ಯವಿವೆ. ಜನ ಇದರ ಸದುಪಯೋಗ ಪಡಿಸಬಹುದು.
   ವೆಳ್ಳರಿಕುಂಡ್ ನಿರ್ಮಲಗಿರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗಂಟಲರಸ ಸಂಗ್ರಹ ಕೇಂದ್ರ ಆರಂಭಕ್ಕೆ ಅನುಮತಿ ನೀಡಲಾಗಿದೆ.
         ಮೀನುಗಾರಿಕೆಗೆ ನಿಯಂತ್ರಣ:
    ಜು.17 ವರೆಗೆ ಮೀನುಗಾರಿಕೆ ನಿಯಂತ್ರಣ ಜಾರಿಯಲ್ಲಿರುವುದು. ಟೋಕನ್ ಪ್ರಕಾರ ಸಾಂಪ್ರದಾಯಿಕ ಮೀನುಗಾರಿಕೆ ನಡೆಸಬಹುದು. ಆದರೆ ಹರಾಜು ನಡೆಸುವಂತಿಲ್ಲ.
    ಕ್ಷೌರದ ಅಂಗಡಿಗಳಲ್ಲಿ ಮಾಸ್ಕ್, ಗ್ಲೌಸ್, ಸಾನಿಟೈಸರ್ ಕಡ್ಡಾಯ. ಕಟ್ಟುನಿಟ್ಟು ಉಲಂಘಿಸಿದರೆ ಕಠಿನಕ್ರಮ ಕೈಗೊಳ್ಳಲಾಗುವುದು.
    ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಪಂಚಾಯತ್, ನಗರಸಭೆ ಮಟ್ಟದಲ್ಲಿ ನಿಯಂತ್ರಣ ಹೇರುವ ವೇಳೆ ಜಿಲ್ಲಾ ದುರಂತ ನಿವಾರಣೆ ಪ್ರಾಧಿಕಾರ ಮತ್ತು ಕೊರೋನಾ ಕೋರ್ ಸಮಿತಿ ಸಭೆಗಳ ತೀರ್ಮಾನ ಪ್ರಕಾರ ನಡೆಸಬೇಕು ಎಂದು ಸಭೆ ತಿಳಿಸಿದೆ. ಜನಜೀವನಕ್ಕೆ ತಡೆಯಾಗುವಂಥಾ ಕ್ರಮ ಕೈಗೊಳ್ಳಬಾರದು.
    ವಿಶೇಷ ಹೊಣೆ ಹೊಂದಿರುವ ಶಿಶು ಅಭಿವೃದ್ಧಿ ಇಲಾಖೆ ನಿರ್ದೇಸಕಿ ಟಿ.ವಿ.ಅನುಪಮಾ, ಜಿಲ್ಲಾ ಪೆÇಲೀಸ್ ವರಿಷ್ಠಾಇಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್, ಉಪಜಿಲ್ಲಾಧಿಕಾರಿ ಅರುಣ್ ಕೆ.ವಿಜಯನ್, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಡಿ.ಡಿ.ಇ. ಕೆ.ಪುಷ್ಪಾ, ವಲಯ ಕಂದಾಯಾಧಿಕಾರಿ ಟಿ.ಆರ್.ಅಹಮ್ಮದ್ ಕಬೀರ್, ಮೀನುಗಾರಿಕೆ ಡೆಪ್ಯೂಟಿ ಡೈರೆಕ್ಟರ್ ಪಿ.ವಿ.ಸತೀಶ್, ಕೊರೋನಾ ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries