ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ 57 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. ಇದೇ ಸಂದರ್ಭದಲ್ಲಿ 12 ಮಂದಿ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 48 ಮಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ.
ಕೇರಳದಲ್ಲಿ 821 ಮಂದಿಗೆ ಸೋಂಕು :
ಕೇರಳ ರಾಜ್ಯದಲ್ಲಿ ಭಾನುವಾರ 821 ಮಂದಿಗೆ ಕೊರೊನಾ ವೈರಸ್ ಸೋಂಕು ದೃಢೀಕರಿಸಲಾಗಿದೆ. 172 ಮಂದಿ ಗುಣಮುಖರಾಗಿದ್ದಾರೆ. ರೋಗ ಬಾಧಿತರಲ್ಲಿ 110 ಮಂದಿ ವಿದೇಶದಿಂದಲೂ, 69 ಮಂದಿ ಇತರ ರಾಜ್ಯಗಳಿಂದ ಬಂದವರಾಗಿದ್ದಾರೆ. 629 ಮಂದಿಗೆ ಸಂಪರ್ಕದಿಂದ ರೋಗ ಬಾ„ಸಿದೆ. 13 ಮಂದಿ ಆರೋಗ್ಯ ಕಾರ್ಯಕರ್ತರಿಗೂ ರೋಗ ಬಾಧಿಸಿದೆ.
ಎರ್ನಾಕುಳಂ ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಲುವ ನಿವಾಸಿ ಕುಂಞÂಬೀರನ್(67) ಸಾವಿಗೀಡಾಗುವುದರೊಂದಿಗೆ ರಾಜ್ಯದಲ್ಲಿ ಒಟ್ಟು ಸತ್ತವರ ಸಂಖ್ಯೆ 42 ಕ್ಕೇರಿತು.
ತಿರುವನಂತಪುರ-222, ಎರ್ನಾಕುಳಂ-98, ಪಾಲ್ಘಾಟ್-81, ಕೊಲ್ಲಂ-75, ತೃಶ್ಶೂರು-61, ಕಾಸರಗೋಡು-57, ಆಲಪ್ಪುಳ-52, ಇಡುಕ್ಕಿ-49, ಪತ್ತನಂತಿಟ್ಟ-35, ಕಲ್ಲಿಕೋಟೆ-32, ಮಲಪ್ಪುರಂ-25, ಕೋಟ್ಟಯಂ-20, ಕಣ್ಣೂರು-13, ವಯನಾಡು-1 ಎಂಬಂತೆ ರೋಗ ಬಾಧಿಸಿದೆ.
ಆಲಪ್ಪುಳ-32, ತಿರುವನಂತಪುರ-25(ಆಲಪ್ಪುಳ-1, ಕೊಲ್ಲಂ-1, ಪತ್ತನಂತಿಟ್ಟ-1), ತೃಶ್ಶೂರು-21, ಕಣ್ಣೂರು-21, ಪತ್ತನಂತಿಟ್ಟ-16, ಕಾಸರಗೋಡು-12, ಪಾಲ್ಘಾಟ್-11, ಕೋಟ್ಟಯಂ-9, ಕಲ್ಲಿಕೋಟೆ-9(ತಿರುವನಂತಪುರ-1), ಎರ್ನಾಕುಳಂ-8 (ಆಲಪ್ಪುಳ-1), ಇಡುಕ್ಕಿ-5, ಕೊಲ್ಲಂ-3 ಎಂಬಂತೆ ಗುಣಮುಖರಾಗಿದ್ದಾರೆ.
ಕೇರಳ ರಾಜ್ಯದಲ್ಲಿ ಒಟ್ಟು 7063 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5373 ಮಂದಿ ಗುಣಮುಖರಾಗಿದ್ದಾರೆ.
ಮಾಸ್ಕ್ ಧರಿಸದ 182 ಮಂದಿ ವಿರುದ್ಧ ಕೇಸು : ಜಿಲ್ಲೆಯಲ್ಲಿ ಮಾಸ್ಕ್ ಧರಿಸದ 182 ಮಂದಿ ವಿರುದ್ಧ ಪೆÇಲೀಸರು ಕೇಸು ದಾಖಲಿಸಿದ್ದಾರೆ. ಈ ವರೆಗೆ 13460 ಮಂದಿಯ ವಿರುದ್ಧ ಕೇಸು ದಾಖಲಿಸಲಾಗಿದೆ.
ಲಾಕ್‍ಡೌನ್ ಉಲ್ಲಂಘನೆ : 23 ಮಂದಿ ಬಂಧನ : ಲಾಕ್‍ಡೌನ್ ಉಲ್ಲಂಘಿಸಿದ 23 ಮಂದಿಯನ್ನು ಪೆÇಲೀಸರು ಬಂಧಿಸಿದ್ದಾರೆ. ಒಟ್ಟು 3127 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ವರೆಗೆ 4150 ಮಂದಿಯನ್ನು ಬಂಧಿಸಿದ್ದು, 1273 ವಾಹನ ವಶಪಡಿಸಿಕೊಂಡಿದ್ದಾರೆ.


