HEALTH TIPS

ಕೋವಿಡ್ 19 : ಕಾಸರಗೋಡು ಜಿಲ್ಲೆಯಲ್ಲಿ ಸಿ.ಎಫ್.ಎಲ್.ಟಿ.ಸಿ ಗಳಾದ 8 ಸಂಸ್ಥೆಗಳು: ಜಿಲ್ಲಾಧಿಕಾರಿ


        ಕಾಸರಗೋಡು:  ಕೋವಿಡ್ 19 ಸೋಂಕು ಕಾಸರಗೋಡು ಜಿಲ್ಲೆಯಲ್ಲಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 8 ಸಂಸ್ಥೆಗಳನ್ನು ತುರ್ತಾಗಿ ವಹಿಸಿಕೊಂಡು ಸಿ.ಎಫ್.ಎಲ್.ಟಿ.ಸಿ ಗಳಾಗಿ ಮಾರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
       ಕಾಞಂಗಾಡ್ ಕೇಂದ್ರಯ ವಿದ್ಯಾಲಯ, ಕಾಞಂಗಾಡ್ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್ ಕಾಲೇಜು, ಪೆರಿಯ ಸರಕಾರಿ ಪಾಲಿಟೆಕ್ನಿಕ್ ಕಾಲೇಜು, ಬದಿಯಡ್ಕ ಮಾರ್ತೋಮಾ ಕಾಲೇಜ್ ಫಾರ್ ಸ್ಪಷ್ಯಲ್ ಎಜುಕೇಷನ್, ಕಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ, ಪೆರಿಯ ಕೇರಖ ಕೇಂದ್ರ ವಿವಿ ಹಾಸ್ಟೆಲ್, ವಿದ್ಯಾನಗರ ಕೇಂದ್ರೀಯ ವಿದ್ಯಾಲಯ 2, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜು ಗಳನ್ನು ನೂತನವಾಗಿ ಸಿ.ಎಫ್.ಎಲ್.ಟಿ. ಸಿ.ಗಳಾಗಿಸಲಾಗಿದೆ.
ಕಾಸರಗೋಡು ಜಿಲ್ಲೆಯ ಸಿ.ಎಫ್.ಎಲ್.ಟಿ. ಸಿ.ಗಳ ಉಸ್ತುವಾರಿಗಾಗಿ ಆಡಳಿತ ಸಮಿತಿ ರಚನೆ
      ಕಾಸರಗೋಡು ಜಿಲ್ಲೆಯ ಸಿ.ಎಫ್.ಎಲ್.ಟಿ. ಸಿ.ಗಳ ಉಸ್ತುವಾರಿಗಾಗಿ ಆಡಳಿತ ಸಮಿತಿ ರಚಿಸಲಾಗಿದೆ.
      ಅಧ್ಯಕ್ಷರು, ಉಪಾಧ್ಯಕ್ಷರು, ಸಂಚಾಲಕರು ಸಹಿತ 7 ಮಂದಿ ಸದಸ್ಯರ ಆಡಳಿತೆ ಸಮಿತಿಗಳನ್ನು ರಚಿಸಲಾಗಿದೆ. ಕಾಞಂಗಾಡ್ ಕೇಂದ್ರೋಯ ವಿದ್ಯಾಲಯ, ಕಾಞಂಗಾಡ್ ಸ್ವಾಮಿ ನಿತ್ಯಾನಂದ ಪಾಲಿಟೆಕ್ನಿಕ್ ಕಾಲೇಜು ಸಿ.ಎಫ್.ಎಲ್.ಟಿ.ಸಿ ಗಳ ಅಧ್ಯಕ್ಷರಾಗಿ ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅವರನ್ನೂ, ಪೆರಿಯ ಪಾಲಿಟೆಕ್ನಿಕ್ ಕಾಲೇಜು, ಪೆರಿಯ ಕೇಂದ್ರೀಯ ವಿವಿ ಹಸ್ಟೆಲ್ ಸಿ.ಎಫ್.ಎಲ್.ಟಿ.ಸಿ. ಗಳ ಅಧ್ಯಕ್ಷರಾಗಿ ಪುಲ್ಲೂರು-ಪೆರಿಯ ಗ್ರಾಮಪಂಚಾಯತ್ ಅಧ್ಯ್ಷೆ ಶಾರದಾ ಎಸ್.ನಾಯರ್ ಅವರನ್ನೂ, ಬದಿಯಡ್ಕ ಮಾರ್ತೋಮಾ ಕಾಲೇಜ್ ಫಾರ್ ಸ್ಪೆಷ್ಯಲ್ ಎಜ್ಯುಕೇಷನ್, ಬದಿಯಡ್ಕ ಕಣ್ಣಿಯತ್ ಉಸ್ತಾದ್ ಇಸ್ಲಾಮಿಕ್ ಅಕಾಡೆಮಿ ಸಿ.ಎಫ್.ಎಲ್.ಟಿ.ಸಿ.ಗಳ ಅಧ್ಯಕ್ಷರಾಗಿ ಬದಿಯಡ್ಕ ಗ್ರಾಮಪಂಚಾಯತ್ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅವರನ್ನೂ, ವಿದ್ಯಾನಗರ ಕೇಂದ್ರೀಯ ವಿದ್ಯಾಲಯ 2 ಸಿ.ಎಫ್.ಎಲ್.ಟಿ.ಸಿ. ಯ ಅಧ್ಯಕ್ಷೆಯಾಗಿ ಮಧೂರು ಗ್ರಾಮಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್ ಅವರನ್ನೂ, ಮಂಜೇಶ್ವರ ಗೋವಂದ ಪೈ ಸ್ಮಾರಕ ಸರಕಾರಿ ಕಾಲೇಜು ಸಿ.ಎಫ್.ಎಲ್.ಟಿ.ಸಿ ಅಧ್ಯಕ್ಷರಾಗಿ ಮಂಜೇಶ್ವರ ಗ್ರಾಮಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಅವರನ್ನು ನೇಮಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries