HEALTH TIPS

ಕೇರಳ ಪ್ಲಸ್ ಟು ಫಲಿತಾಂಶ ಪ್ರಕಟ-ಶೇ.85.13 ದಾಖಲೆ ಫಲಿತಾಂಶ

       ತಿರುವನಂತಪುರ: ಹೈಯರ್ ಸೆಕೆಂಡರಿ ಮತ್ತು ವೊಕೇಶನಲ್ ಹೈಯರ್ ಸೆಕೆಂಡರಿಯ ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶ ಬುಧವಾರ ಪ್ರಕಟಿಸಲಾಗಿದೆ. ರಾಜ್ಯದಲ್ಲಿ ಒಟ್ಟು ಶೇಕಡಾ 85.13. ಫಲಿತಾಂಶ ದಾಖಲಾಗಿದೆ. ಈ ಮೂಲಕ  319782 ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಅರ್ಹತೆ ಪಡೆದಿದ್ದಾರೆ. 218-19ನೇ ವರ್ಷ ಉತ್ತೀರ್ಣರಾದವರ  ಪ್ರಮಾಣ ಶೇ.84.33 ಆಗಿತ್ತು. ಪ್ರಸ್ತುತ ವರ್ಷ ವಿಜ್ಞಾನ - ಶೇ.88.62, ಕಲಾ ವಿಭಾಗ- ಶೇ 77.76, ವಾಣಿಜ್ಯ - ಶೇ .84.52., ತಾಂತ್ರಿಕ - 87.94. ಮತ್ತು ಕೇರಳ ಕಲಾಮಂಡಲ(ಆರ್ಟ್) ಶೇ 98.75 ಉತ್ತೀರ್ಣಗೊಂಡಿರುವರೆಂದು ಬುಧವಾರ ಅಪರಾಹ್ನ ಫಲಿತಾಂಶ ಘೋಶಿಸಿ  ಶಿಕ್ಷಣ ಸಚಿವ ಸಿ.ರವೀಂದ್ರನಾಥ್ ಹೇಳಿದರು.
        ಶಾಲಾ ವರ್ಗದ ಪ್ರಕಾರ, ಸರ್ಕಾರಿ ಶಾಲೆಗಳಲ್ಲಿ ಉತ್ತೀರ್ಣತೆ ಶೇಕಡಾ 82.19 ಆಗಿದೆ. ಅನುದಾನಿತ ಶಾಲೆಗಳಲ್ಲಿ ಶೇ.88.01, ಅನುದಾನರಹಿತ 81.33, ವಿಶೇಷ ಶಾಲೆಗಳಲ್ಲಿಶೇ.100. ತಾಂತ್ರಿಕ ಶಾಲೆಗಳಲ್ಲಿ ಶೇ.87.94 ಮತ್ತು ಕಲಾಮಂಡಲಂ ಶೇ.98.75 ಫಲಿತಾಂಶ ಉತ್ತೀರ್ಣತೆ ದಾಖಲಿಸಲಾಗಿದೆ.
        ಎರ್ನಾಕುಳಂನಲ್ಲಿ ಈ ಬಾರಿ ಉತ್ತೀರ್ಣತೆಯ ಪ್ರಮಾಣ ಹೆಚ್ಚು ಇದೆ. ಇಲ್ಲಿ ಶೇ 89.02.,  ಕಾಸರಗೋಡು ಜಿಲ್ಲೆಯಲ್ಲಿ ಅತಿ ಕಡಿಮೆ ಶೇಕಡಾ 78.68 ಫಲಿತಾಂಶ ಪಡೆದಿದೆ. 114 ಶಾಲೆಗಳು ಶೇಕಡಾ 100 ರಷ್ಟು ಫಲಿತಾಂಶ ದಾಖಲಿಸಿದೆ. 
       ಎಸ್‍ಎಸ್‍ಎಲ್‍ಸಿ ಫಲಿತಾಂಶವನ್ನು ಜೂನ್ 30 ರಂದು ಪ್ರಕಟಿಸಲಾಗಿತ್ತು.  ಪ್ಲಸ್ ಟು ಫಲಿತಾಂಶ ಆ ಬಳಿಕ 15 ದಿನಗಳಲಲಿ ಪ್ರಕಟಗೊಂಡಿರುವುದು ಗಮನಾರ್ಹವಾಗಿದೆ. ಕೇರಳ ಸರ್ಕಾರದ ವಿವಿಧ ವೆಬ್‍ಸೈಟ್‍ಗಳು ಮತ್ತು ಮೊಬೈಲ್ ಅಪ್ಲಿಕೇಶನ್‍ಗಳ ಮೂಲಕ ವಿದ್ಯಾರ್ಥಿಗಳು ಫಲಿತಾಂಶಗಳನ್ನು ತಿಳಿದುಕೊಂಡರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries